ಕಂಪ್ಲಿ : ಶುದ್ಧ ಕುಡಿವ ನೀರಿನ ಘಟಕ ಹನುಮಂತರೆಡ್ಡಿ ವೀಕ್ಷಣೆ

ಲೋಕದರ್ಶನ ವರದಿ

ಕಂಪ್ಲಿ 02: 2018-19ನೇ ಸಾಲಿನ ಎಚ್ಕೆಆರ್ಡಿಬಿ ಯೋಜನಡಿಯಲ್ಲಿ, 5ಲಕ್ಷ ರೂ.ಗಳ ವೆಚ್ಚದಲ್ಲಿ ಇಲ್ಲಿನ ಎಸ್ಜಿವಿಎಸ್ ಬಾಲಕಿಯರ ಸರ್ಕಾರಿ  ಪಿಯೂ ಕಾಲೇಜಿನಲ್ಲಿ ಅಳವಡಿಸಿದ ಶುದ್ಧ ಕುಡಿವ ನೀರಿನ ಘಟಕವನ್ನು, ಸಂಡೂರಿನ ಪಂಚಾಯತ್ ರಾಜ್ ಇಂಜನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹನುಮಂತರೆಡ್ಡಿ ವೀಕ್ಷಿಸಿದರು. 

ಈ ಸಂದರ್ಭದಲ್ಲಿ ಹನುಮಂತರೆಡ್ಡಿಯವರು ಪತ್ರಕರ್ತರೊಂದಿಗೆ ಮಾತನಾಡಿ, ಕಾಲೇಜಿನಲ್ಲಿ 500ಎಲ್ಪಿಎಚ್ ಸಾಮಥ್ರ್ಯದ ಕುಡಿವ ನೀರಿನ ಘಟಕವನ್ನು ಸ್ಥಾಪಿಸಿದ್ದು, ದಿನಕ್ಕೆ ಸುಮಾರು 3000 ಲೀ.ನಷ್ಟು ಶುದ್ಧ ಕುಡಿವ ನೀರನ್ನು ಪೂರೈಸಬಲ್ಲದು, 5000ಲೀ. ಸಂಗ್ರಹಣಾ ಸಾಮಥ್ರ್ಯದ ಟ್ಯಾಂಕ್ ಅಳವಡಿಸಲಾಗಿದೆ. ಇದರಿಂದ ಮಕ್ಕಳಿಗೆ ಶುದ್ಧ ಕುಡಿವ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

     ಜೆಇ ಬಿಐ ಸೂಡಿ ಮಾತನಾಡಿ, ತಲಾ 5ಲಕ್ಷ ರೂ.ಗಳ ವೆಚ್ಚದಲ್ಲಿ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸಹಿಪ್ರಾ ಶಾಲೆಯಲ್ಲಿ, ರಾಮಸಾಗರದ ಸಕರ್ಾರಿ ಪ್ರೌಢಶಾಲೆಯಲ್ಲಿ, ಕಂಪ್ಲಿಯ ಬಾಲಕಿಯರ ಸಕರ್ಾರಿ ಪ್ರೌಢಶಾಲೆಯಲ್ಲಿ, ಕಂಪ್ಲಿಯ ಷಾ.ಮಿಯಾಚಂದ್ ಸಕರ್ಾರಿ ಪಿಯೂ ಕಾಲೇಜಿನ ಪ್ರೌಢಶಾಲೆಯಲ್ಲಿ, ಎಸ್ಜಿವಿಎಸ್ ಬಾಲಕಿಯರ ಸರ್ಕಾರಿ  ಪಿಯೂ ಕಾಲೇಜಿನಲ್ಲಿ, 5ಲಕ್ಷ ರೂ.ಗಳ ವೆಚ್ಚದಲ್ಲಿ ಶಿವಪುರ ಮೆಟ್ರಿಯ ಸಹಿಪ್ರಾ ಶಾಲೆಯಲ್ಲಿ, ಉಪ್ಪಾರಳ್ಳಿಯ ಸಹಿಪ್ರಾ ಶಾಲೆಯಲ್ಲಿ, 4.50ಲಕ್ಷ ರೂ.ಗಳಲ್ಲಿ ದೇವಸಮುದ್ರದ ಸಹಿಪ್ರಾ ಶಾಲೆಯಲ್ಲಿ, 2.50ಲಕ್ಷ ರೂ.ಗಳಲ್ಲಿ ಚಿನ್ನಾಪುರದ ಸಹಿಪ್ರಾ ಶಾಲೆಯಲ್ಲಿ, ಹೆಚ್ಚುವರಿಯಾಗಿ 2.52ಲಕ್ಷ ರೂ.ಗಳ ವೆಚ್ಚದಲ್ಲಿ ಎಸ್ಜಿವಿಎಸ್ ಬಾಲಕಿಯರ ಸಕರ್ಾರಿ ಪಿಯೂ ಕಾಲೇಜಿನಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಬಾಲಕಿಯರ ಸಕರ್ಾರಿ ಪಿಯೂ ಕಾಲೇಜಿನ ಪ್ರಾಚಾರ್ಯ ಎಂ.ಚಂದ್ರಶೇಖರ್, ಗಣಿತ ಉಪನ್ಯಾಸಕ ವಾಮದೇವ ಮೂರ್ತಿ ಕೆ.ವೀರೇಶ್, ಉಪಸ್ಥಿತರಿದ್ದರು.