ಕನ್ನಡಿಗರು ಶಾಂತಿಗೆ ಬದ್ಧ, ಯುದ್ದಕ್ಕೂ ಸಿದ್ಧ: ಸಪ್ನ

ಲೋಕದರ್ಶನ ವರದಿ

ಹರಪನಹಳ್ಳಿ 01: ಕನ್ನಡ ಬಾವುಟದಲ್ಲಿರುವ ಹಳದಿ ಮತ್ತು ಕೆಂಪು ಬಣ್ಣವು ಕನ್ನಡಾಂಬೆಯ ಅರಿಸಿನ ,ಮತ್ತು ಕುಂಕುಮದ ಸಂಕೇತವಾಗಿದೆ. ಹಳದಿ ಬಣ್ಣವು ಶಾಂತಿ ಮತ್ತು ಸೌಹಾರ್ದತೆಯ ಸಂಕೇತ ಕೆಂಪು ಬಣ್ಣವು ಕ್ರಾಂತಿಯ ಸಂಕೇತವಾಗಿದೆ. ಕನ್ನಡಿಗರು ಶಾಂತಿಗೆ ಬದ್ಧ, ಯುದ್ದಕ್ಕೂ ಸಿದ್ಧ ಎಂದು ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ಸಪ್ನ ಕನ್ನಡ ನಾಡು ನುಡಿಯ ಅಭಿಮಾನದ ಮಾತುಗಳನ್ನಾಡಿದರು. 

ಪಟ್ಟಣದ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಕಲರವ ಕನ್ನಡ ನಾಡು-ನುಡಿ, ಸಂಗೀತ-ನೃತ್ಯ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 30ರ ಶನಿವಾರ ಸಂಜೆ 5-30 ಸರಕಾರಿ ಜೂನಿಯರ್ ಕಾಲೇಜ್ (ಮುಂಬಾಗ) ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿ    ಈ ಕನ್ನಡ ನಾಡು ತನ್ನದೆ ಆದ ಹಿರಿಮೆ ಮತ್ತು ಪರಂಪರೆಯನ್ನು ಹೊಂದಿದ ರಾಜ್ಯವಾಗಿದೆ. ಆಗಿನ ಕಾಲದಲ್ಲೆ ಶ್ರೀವಿಜಯ ಕವಿರಾಜ ಮಾರ್ಗ ಗ್ರಂಥದಲ್ಲಿ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದೆ ಎಂದು ಹೇಳಲಾಗಿದೆ.  ಅಂದರೆ ನಾವು. ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. 

ಕನ್ನಡ ಧ್ವಜ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪವಿಭಾಗಾಧಿಕಾರಿಗಳು ಪ್ರಸನ್ನ ಕುಮಾರ್ ವಿ.ಕೆ ಮಾತನಾಡಿ ಇಂತ ಕನ್ನಡದ ಕಾರ್ಯಕ್ರಮಗಳನ್ನು ಒಂದು ಸಂಸ್ಥೆ ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ ಪ್ರತಿ ಒಬ್ಬರು ಈ ಕನ್ನಡದ ಹಬ್ಬವನ್ನು ಆಚರಿಸಲೆ ಬೇಕು. ಈ ದಿನ ಸೇರಿದ ಕನ್ನಡಿಗರನ್ನು ನೋಡಿದರೆ ಕನ್ನಡದ ಅಭಿಮಾನ ಗೊತ್ತಾಗುತ್ತದೆ. ಇದೆ ರೀತಿ ಪ್ರತಿ ವರ್ಷ ಆಚರಣೆ ಮಾಡುತ್ತ ಬಂದ ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆದು ಇಂತಹ ಕನ್ನಡದ ಹಬ್ಬಗಳನ್ನು ಆಚರಿಸುವಂತಾಗಲಿ ಎಂದರು

ಯುವ ಮುಖಂಡ ಶಶಿಧರ್ ಪೂಜಾರ್,  ತೆಲಿಗೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರು  ಕೆ.ಆರ್.ಜಯಶೀಲ, ಪುರಸಭಾ ಮಾಜಿ ಉಪಾಧ್ಯಕ್ಷರು,  ಬಿ.ನಜೀರ್ ಅಹಮದ್, ಪ್ರಭು ಟ್ರೇಡರ್ಸ ಮಾಲೀಕ ಬಿ.ಆರ್. ಪ್ರಭಾಕರ್, ವ್ಯವಸ್ಥಾಪಕರು, ಶರಣ ಬಸವ ಬುದ್ದ ಭೀಮಜಿ ವಿದ್ಯಾ ಸಂಸ್ಥೆ,  ರಾಜು ಎಲಿಗಾರ್ ಮುಖ್ಯ ಅತಿಥಿಗಳಾಗಿ  ಮಾತನಾಡಿದರು. 

ಕನ್ನಡ ನಾಡು ನುಡಿ ಸಂಸ್ಕೃತಿಗೆ ಶ್ರಮಿಸಿದ ಅಜರ್ುನ್ ಪರಸಪ್ಪ ಹೆಚ್ (ಜನಪದ)   ಕಲಾ ಸೇವಕ, ಮಹೇಶ್ ಎಲ್.ಎ. (ಸಂಗೀತ್ರ) ಕಲಾ ರತ್ನ, ರೂಪಶ್ರೀ ರಾಯಸಂ, (ಸಂಸ್ಕೃತಿ) ಕಲಾ ಕುಸುಮ, ಚನ್ನವೀರಯ್ಯ ಸ್ವಾಮಿ ಎಂ.ಎಂ. (ನೃತ್ಯ) ಕಲಾ ಭೂಷಣ, ಎಂ. ಮಾರುತಿ (ರಂಗ ಕ್ಷೇತ್ರ) ಕಲಾ ಸಾಮ್ರಾಟ, ಬಸವರಾಜ ಬಂಡಾರಿ (ಸಂಗೀತ)ಕಲಾ ಸಿರಿ, ಬಸವರಾಜ ಹುಲಿಯಪ್ಪನವರ್ (ಹೋರಾಟ)  ಕನ್ನಡ ಜ್ಯೋತಿ, ಚೇತನ್ ಕುಮಾರ್. ಎನ್ (ದೊಡ್ಡಾಟ)  ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.    

ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳು: ಪುಟ್ಟರಾಜ ಗವಾಯಿ ಹಿಂದೂಸ್ತಾನಿ ಕರೋಕೆ ಗುರುಕುಲ ಪಾಠಶಾಲೆ, ಲಿಕ್ವಿಡ್ ಇಡಿಯಟ್ಸ್ ಡ್ಯಾನ್ಸ್ ಸ್ಟುಡಿಯೋ, ಕಲಾ ಸಿರಿ ಸಾಂಸ್ಕೃತಿಕ ಸಂಘ, ಸಾಂಸ್ಕೃತಿಕ ವೈಭವ ಸಂಘ, ಸ್ವರ ವೈಭವ ಸಾಂಸ್ಕೃತಿಕ ಎಜ್ಯಕೇಷನಲ್ ಚಾರಿಟಬಲ್ ಟ್ರಸ್ಟ್, ಏಕಲವ್ಯ ಸಾಂಸ್ಕೃತಿಕ ಕಲಾ ಸಂಘ, ಎಸ್.ಯು.ಜೆ.ಎಂ. ಕಾಲೇಜು ಮತ್ತು ಹೆಚ್.ಪಿ.ಎಸ್. ಪದವಿ ಕಾಲೇಜ್ ವಿದ್ಯಾಥರ್ಿನಿಯರಿಂದ ನಾಡು-ನುಡಿ ಸಾಂಸ್ಕೃತಿಕ ನೃತ್ಯಗಳು, ದೊಡ್ಡಾಟ, ಬಂಜಾರ ನೃತ್ಯಗಳು, ವೀರಗಾಸೆ ನೃತ್ಯಗಳು ನಡೆಸಿದರು. 

     ಕಾರ್ಯಕ್ರಮದ ಆಶಯ ನುಡಿಗಳನ್ನು ಉಪನ್ಯಾಸಕ ಹೆಚ್.ಮಲ್ಲಿಕಾಜರ್ುನ,  ಸ್ವಾಗತ ನುಡಿ ಸಹ್ಯಾದ್ರಿ ಇಂಟರ್ನೆಟ್ನ ವೆಂಕಟರಾಜು,  ನಿರೂಪಣೆ ಶಿಕ್ಷಕ ಎಸ್. ಮಕ್ಬುಲ್ ಭಾಷಾ, ವಿದ್ಯಾಥರ್ಿನಿ ಸುದೀಕ್ಷಾ ಜೈನ್, ಉಪನ್ಯಾಸಕ ಶಿವಕುಮಾರ್, ನೃತ್ಯ ಪಟುಗಳಾದ ಮಂಜುನಾಥ, ಶಿವನಾಗ, ಚನ್ನವೀರ ಸ್ವಾಮಿ ಇದ್ದರು.