ಲೋಕದರ್ಶನವರದಿ
ಮುಧೋಳ: ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಕನ್ನಡದಲ್ಲಿಯೇ ರುಜು ಮಾಡಿರಿ,ಶಾಲಾ-ಕಾಲೇಜು ಸೇರಿದಂತೆ ಮನೆ-ಮನೆಗಳಲ್ಲಿ ಕನ್ನಡ ಮಾತೃಭಾಷೆಯಲ್ಲಿಯೇ ಮಾತನಾಡಿ, ತಾವು ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷಾ ಬಳಿಕೆಯಾಗಲಿ ಎಂದು ವಚನ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ಅಧ್ಯಕ್ಷ ಡಾ.ಸಿದ್ದಣ್ಣ ಬಾಡಗಿ ಹೇಳಿದರು.
ಬಾಗಲಕೋಟ ಬಿವ್ಹಿವ್ಹಿ ಸಂಘದ ಸ್ಥಳೀಯ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಆಶ್ರಯದಲ್ಲಿ ಶುಕ್ರವಾರ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ 64ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ ಕನರ್ಾಟಕದ ಮಹಾಜನತೆಯು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಋಣವನ್ನು ತೀರಿಸಲೇಬೇಕು.
ಕನ್ನಡ ವಿಷಯ ಬಂದಾಗ ಯಾರೂ ರಾಜಿ ಮಾಡಿಕೊಳ್ಳಬಾರದು,ಕನ್ನಡ ರಾಜ್ಯೋತ್ಸವ ದಿನಾಚರಣೆ ಒಂದು ದಿನದ ಮಟ್ಟಿಗೆಯಾಗಬಾರದು ಅದು ಇಡೀ ವರ್ಷದೂದ್ದಕ್ಕೂ ಆಚರಿಸುವಂತಾಗಬೇಕು,ಕನ್ನಡ ಭಾಷೆಯ ಬಗ್ಗೆ ನಿರಂತರ ಚಿಂತನ- ಮಂತನ ನಡೆಯಬೇಕು, ಕನ್ನಡ ಮಾತೃಭಾಷೆಯ ಬಗ್ಗೆ ಪ್ರೀತಿ, ವಿಶ್ವಾಸ, ಗೌರವ, ಅಭಿಮಾನವಿರಬೇಕು, ಅನ್ಯಭಾಷೆಯ ಬಗ್ಗೆ ತಾತ್ಸಾರ ಮಾಡುವುದು ಬೇಡ,ಸಂಪರ್ಕ ಸಾಧನವಾಗಿ ಎಲ್ಲ ಭಾಷೆಗಳನ್ನು ಕಲಿಯೋನ ಎಂದು ಹೇಳಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ,ಅಲ್ಲಲ್ಲಿ ಚದುರಿದ್ದ ಕನ್ನಡವೆನ್ನಲ್ಲ ಒಂದು ಗೂಡಿಸಿ ಅದಕ್ಕೆ ಕನರ್ಾಟಕ ಎಂದು ನಾಮಕರಣ ಮಾಡಿದ ದಿನ, ಇಂದಿನ ಕನರ್ಾಟಕ ಮೊದಲಿಗೆ ಮೈಸೂರು ಎಂಬ ಹೆಸರಿನಿಂದ ಗುರುತಿಸಿಕೊಂಡಿತ್ತು ಎಂದು ಹೇಳಿದ ಅವರು ಕನ್ನಡ ಭಾಷೆಯ ಉಳಿವಿಗಾಗಿ ಸಾಕಷ್ಟು ಜನರ ಶ್ರಮವಿದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಬಿ.ಇಂಗನಾಳ ಅಧ್ಯಕ್ಷತೆವಹಿಸಿ ಮಾತನಾಡಿ ಕನ್ನಡದ ಇತಿಹಾಸ, ಮಹತ್ವ,ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕನರ್ಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ ಎಂದರು.
ನಾಡಿಗಾಗಿ, ಕನ್ನಡಕ್ಕಾಗಿ ದುಡಿದ ಮಹನೀಯರಿಗೆ ಈ ಮಾಸದಲ್ಲಿ ರಾಜ್ಯ ಸಕರ್ಾರ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಗೌರವಿಸುವ ಮೂಲಕ ನಾಡಿನ ಸೇವೆಯನ್ನು ಮುಂದುವರೆಸಲು ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ, ಕನ್ನಡ ನಾಡಿನ ಮಹತ್ವವನ್ನು ಕನ್ನಡಿಗರು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ನಾಡಿನ ಸಮಸ್ತ ಜನತೆ ಯಾವುದೇ ಜಾತಿ, ಧರ್ಮ, ಪಂಥಗಳ ಬೇಧವಿಲ್ಲದೆ ಒಗ್ಗಟ್ಟಿನಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸಬೇಕು, ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ಕನ್ನಡ ಭಾಷೆಯ ಹಿರಿಮೆ ಮತ್ತು ಮಹತ್ವವನ್ನು ತಿಳಿಸಬೇಕು, ಸಿರಿಗನ್ನಡಂ ಬಾಳ್ಗೆ,ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಏಳ್ಗೆ,ಕನ್ನಡವೇ ಸತ್ಯ,ಕನ್ನಡವೇ ನಿತ್ಯ ಇವುಗಳ ಮಹತ್ವ ಕುರಿತು ಪ್ರತಿಯೋಬ್ಬರಿಗೂ ತಿಳಿಸಿಕೊಡಬೇಕು.
ಕೆಲವು ಕನ್ನಡ ಪರ ಸಂಘಟನೆಯವರು ಕನ್ನಡದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅಲ್ಲಲ್ಲಿ ಕೇಳಿ ಬರುತ್ತಿರುವುದು ವಿಷಾದದ ಸಂಗತಿ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಂಘದ ಕಾಯರ್ಾಧ್ಯಕ್ಷ ಪ್ರೊ.ಮಲ್ಲಿಕಾಜರ್ುನ ಎಂ.ಹಿರೇಮಠ ಸ್ವಾಗತಿಸಿ, ಮಾತನಾಡಿದರು, ಪ್ರೊ.ಸತೀಶ ಕೆ.ಸಾರವಾಡ ನಿರೂಪಿಸಿದರು, ಪ್ರೊ.ಪಿ.ಡಿ.ಕುಂಬಾರ ಅತಿಥಿಗಳ ಪರಿಚಯ ಮಾಡಿದರು,ಕನ್ನಡ ಸಂಘದ ಕಾರ್ಯದಶರ್ಿ ಪ್ರೊ.ವೀರೇಶ ಎಂ.ಕಿತ್ತೂರ ವಂದಿಸಿದರು, ವಿದ್ಯಾಥರ್ಿನಿ ಶಿಲ್ಪಾ ಮೀಶಿ ಮತ್ತು ಸಂಗಡಿಗರು ಪ್ರಾರ್ಥನೆ ಮತ್ತು ನಾಡಗೀತೆ ಹಾಡಿದರು.