ಕನ್ನಡ ಭಾಷೆ ಅತ್ಯಂತ ಶ್ರೇಷ್ಟವಾದದ್ದು ಅದನ್ನು ರಕ್ಷಿಸಿ ಬೆಳೆಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯ

Kannada language is the best and it is everyone's first duty to protect and develop it


ಕನ್ನಡ ಭಾಷೆ ಅತ್ಯಂತ ಶ್ರೇಷ್ಟವಾದದ್ದು ಅದನ್ನು ರಕ್ಷಿಸಿ ಬೆಳೆಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯ 

ಹಾವೇರಿ 29: ಭಾಷೆಯ ಉಗಮವೇ ವಿಚಿತ್ರ ಹಾಗೂ ಸ್ವಾರಸ್ಯಕರವಾದುದು. ಮೊದಲು ಸಂಜ್ಞೆಯ ಮೂಲಕ ತೊಡಗಿದ ಸಂವಹನವು ಶಬ್ದವಾಗಿ ಬೆಳೆದು ಮತ್ತೆ ಭಾಷೆಯಾಗಿ ಪರಿವರ್ತಿತವಾಯಿತು. ಜಗತ್ತಿನಲ್ಲಿ ಸಹಸ್ರಾರು ಭಾಷೆಗಳಿವೆ. ಇದರಲ್ಲಿ ಕನ್ನಡ ಭಾಷೆ ಅತ್ಯಂತ ಶ್ರೇಷ್ಟವಾದದ್ದು ಅದನ್ನು ರಕ್ಷಿಸಿ ಬೆಳೆಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯವೆಂದು ಹಾವೇರಿಯ ಹಿರಿಯ ಸಾಹಿತಿ,ಚಿಂತಕ ಶೇಖರಗೌಡ ಪಾಟೀಲ ಹೇಳಿದರು. 

         ಕೇರಳದ ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಓಸ್ಕೃತಿಕ ಭವನದಲ್ಲಿ ಜರುಗಿದ ಪ್ರಥಮ ವಾರ್ಶಿಕೋತ್ಸವ ಸಂಭ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. 

    ಅವರು ಕಲೆಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ.ಅದರಲ್ಲೂ ಯಕ್ಷಗಾನ ಶ್ರೇಷ್ಟವಾದ ಕಲೆ. ಅದನ್ನು ಬೆಳೆಸಿ, ಉಳಿಸುವುದರ ಜೊತೆಗೆ ಗಡಿನಾಡ ಕನ್ನಡ ರಕ್ಷಿಸಿ ಸಲು ಪ್ರತಿಯೊಬ್ಬ ಕನ್ನಡಿಗರು ಕಂಕಣಬದ್ದರಾಗಿ ನಿಲ್ಲಬೇಕು ಎಂದರು.ಎಡನೀರು ಮಠದ ಪೂಜ್ಯ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮಾತನಾಡಿ ಕಲೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸಲು ಎಲ್ಲರು ಶ್ರಮಿಸಬೇಕು ಎಂದರು.  

         ಸಿರಿಬಾಗಿಲು ವೆಂಕಪ್ಪಯ್ಯ ಟ್ರಸ್ಟಿನ ಅಧ್ಯಕ್ಷರಾದ ಗೌರವಾನ್ವಿತ ರಾಮಕೃಷ್ಣಮಯ್ಯ   ಹಾಗೂ ಕಾಸರಗೋಡು ಕಸಾಪ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ್ ತೊಟ್ಟೆತ್ತೊಡಿ ಮಾತನಾಡಿ ಕಾಸರಗೋಡಿನ ಪ್ರತಿಯೊಬ್ಬರ ರಕ್ತದ ಕಣ-ಕಣದಲ್ಲಿ ಕನ್ನಡ ಅಭಿಮಾನ ಉಕ್ಕಿ ಹರಿಯುತ್ತಿದೆ ಎಂದರು. 

         ಮುಖ್ಯ ಅತಿಥಿಗಳಾದ ಶ್ರೀಮತಿ ಗೋಪಿಕಾ ಸತೀಶ ಮಯ್ಯ,ಶ್ರೀ ನರಸಿಂಹ ಮೂರ್ತಿ, ಗೋಪಾಲ ಶೆಟ್ಟಿ ಅರಿಬೈಲು, ಶ್ರೀ ಶ್ರೀಧರ ಶೆಟ್ಟಿ,ಮುಖೇಶ್, ಡಾ. ಎಸ್‌. ಹನುಮಂತಪ್ಪ ಹಾಗೂ ಡಾ. ಗಂಗಯ್ಯ ಕುಲಕರ್ಣಿ ಮಾತನಾಡಿ ಕನ್ನಡ ಸಂಸ್ಕೃತಿ ಮತ್ತು ಸಂಶೋಧನ ಕ್ಷೇತ್ರಕ್ಕೆ ಕಾಸರಗೋಡಿನ ಕೊಡುಗೆ ಅಪಾರ.ಈ ಮಣ್ಣಿನ ರಾಷ್ಟಕವಿ ಮಂಜೇಶ್ವರ ಗೋವಿಂದ ಪೈ, ಡಾ.ಪಿ ವೆಂಕಟರಾಜು, ಬೇಕಲ ರಾಮನಾಯಕ ಮೊದಲಾದವರ ಸಾಹಿತ್ಯ ಸೃಷ್ಟಿ,ಸಂಶೋಧನ ದೃಷ್ಟಿ ಈ ಪ್ರದೇಶಕ್ಕೆ ಮಹತ್ವದ ಸ್ಥಾನ ಕಲ್ಪಿಸಿದೆ. ಅವರ ಜತೆಗೆ ಸೇರಬೇಕಾದ ಮತ್ತೊಂದು ಹೆಸರೆ ಸಿರಿಬಾಗಿಲು ವೆಂಕಪ್ಪಯ್ಯನವರದು.ಅವರು ಮೂಲತ ಶಿಶು ಸಾಹಿತಿಗಳು, ಮಕ್ಕಳಿಗೆ ಕಥೆ ಹೇಳುವದರಲ್ಲಿ ಸಿದ್ದಹಸ್ತರು ಎಂದರು. ಬೆಂಗಳೂರಿನ ಶ್ರೀ ಮದುರ ಉಪಾಧ್ಯ, ಗುಜರಾತಿನ ಷಣಂಬೂರ್ ಶಂಕರನಾರಾಯಣ ಕಾರಂತ,ಲಕ್ಷ್ಮಣ ಕುಮಾರ ಮರಕಡ, ಮುಂತಾದ ಸಾಧಕರಿಗೆ ರಾಮಪ್ಪಮಯ್ಯ ದಂಪತಿಗಳಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು.ವೇದಿಕೆಯಲ್ಲಿ ಕೃಷ್ಣ ಕಾರಂತ,ಎಸ್ ಎನ್ ರಾಮಶೆಟ್ಟಿ,ಶೀನ ಶೆಟ್ಟಿ ಕಜೆ ಮುಂತಾದವರು ಉಪಸ್ಥಿತರಿದ್ದರು.ಮುಂಜಾನೆ ಮಕ್ಕಳಿಂದ ಯಕ್ಷಗಾನ,ಭಜನೆ, ಮುಂತಾದ ವಿಶೇಷ ಪ್ರದರ್ಶನಗಳು ಅದ್ದೂರಿಯಾಗಿ ಜರುಗಿದವು.ಎಲ್ಲ ಗಣ್ಯರನ್ನು ರಾಮಕೃಷ್ಣ ಮಯ್ಯ ದಂಪತಿಗಳು ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಕಲಾಬಿಮಾನಿಗಳು, ಸಾಹಿತ್ಯ, ಶಿಕ್ಷಣ ಹಾಗೂ ಕನ್ನಡ ಅಭಿಮಾನಿಗಳು ಸಿಹಿ ಉಂಡು ಸಂಭ್ರಮಿಸಿದರು.