ಜೋಯಡಾ ಕೇಂದ್ರ ಸರ್ಕಲ್ದಲ್ಲಿ ವಿವಿಧ ಸಂಘಟನೆಗಳಿಂದ ಕನ್ನಡ ರಾಜ್ಯೋತ್ಸವ.


  ಜೋಯಿಡಾ; ತಾಲೂಕಾ ಕೇಂದ್ರ ಮುಖ್ಯ ಸರ್ಕಲ್ದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ 63 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

   ಈ ಸಂದರ್ಭದಲ್ಲಿ ಕ.ಸಾ.ಪ. ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ ರಾಜ್ಯಕ್ಕೆ ಯಾವ ಯಾವ ಸಂದರ್ಭದಲ್ಲಿ ಕಂಟಕ ಬಂದಾಗ ಎಲ್ಲರೂ ಒಂದಾಗಿ ಹೋರಾಡ ಮಾಡಬೇಕು. ಗಡಿ ತಾಲೂಕ ಜೋಯಿಡಾದಲ್ಲಿ ಕನ್ನಡ ಜಾಗ್ರತಿಯಾಗಿರುವುದು ಹೆಮ್ಮೆ ತಂದಿದೆ ಎಂದರು.

   ಗ್ರಾಮದ ಮಿರಾಶಿ ವಿನೋದ ರವರಿಂದ ದ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕ.ರ.ವೆ ಅಧ್ಯಕ್ಷ ಸುರಜ ಹಿರೆಗೌಡರ, ಗಣೇಶ ಹೆಗಡೆ, ಗ್ರಾ.ಪಂ.ಉಪಾಧ್ಯಕ್ಷ ಶ್ಯಾಮ ಪೊಕಳೆ, ಸದಸ್ಯ ಸುರೇಶ ಗಾವಡಾ, ಪ್ರಮುಖರಾದ ಮಾಬಳು ಕುಂಡಲಕರ, ಮಹಿಳಾ ಮುಖಂಡೆ ಶಕುಂತಲಾ ಹಿರೆಗೌಡರ, ಸಚಿನ್ ತಳೆಕರ ಮುಂತಾದವರು ಇದ್ದರು.