ನಾಣಿಕಟ್ಟಾ ಕಾಲೇಜಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಲೋಕದರ್ಶನ ವರದ

 ಸಿದ್ದಾಪುರ 01: ಸಿದ್ದಾಪುರತಾಲೂಕಿನ ನಾಣಿಕಟ್ಟಾದ ಸರಕಾರಿ .ಪೂ.ಕಾಲೇಜಿನಲ್ಲಿ 63ನೇ ಕನರ್ಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಾಡದೇವಿಯ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಗೌರವಸಲ್ಲಿಸಲಾಯಿತು. ವಿದ್ಯಾಥರ್ಿಗಳಿಂದ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಹಾಡುಗಳು ಕೇಳಿಬಂದವು. ಚೈತ್ರಾ ನಾಯ್ಕ, ಅರ್ಚನಾ ಎಂ ನಾಯ್ಕ, ನಿಶ್ಚಿತಾ ನಾಡಗೀತೆ ಹಾಗೂ ನಿತ್ಯೋತ್ಸವ ಗೀತೆಗಳನ್ನು ಹಾಡಿದರು. ಸಹನಾ ನಾಯ್ಕ, ಇಂಚರ 'ಕರುನಾಡತಾಯಿ ಸದಾ ಚಿನ್ಮಯಿ" ಹಾಡಿಗೆ ಧ್ವನಿಯಾದರೆ, ಮಧುರಾ ನಾಯ್ಕ ನಾಡ ವೈಭವ ವಣರ್ಿಸುವ ಹಾಡಿನೊಂದಿಗೆ ಜನಪದ ಹಾಡನ್ನು ಪ್ರಸ್ತುತ ಪಡಿಸಿದರು.

                ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಜಿ.ಪೋಳ ಮಾತನಾಡಿ ಕನ್ನಡ ನಾಡಿಗೆ ವೈಭವಪೂರ್ಣಇತಿಹಾಸ ಇದೆ. ಕನ್ನಡ ಲಿಪಿ ತುಂಬಾ ಸುಂದರವಾದ ಲಿಪಿ. ನಾಡು ನುಡಿಯ ಕುರಿತು ಅಭಿಮಾನ ಇರಬೇಕು. ಕನ್ನಡದ ಉಳಿವು ಮತ್ತು ಬೆಳವಣಿಗೆ ಕನ್ನಡವನ್ನು ಬಳಸುವುದರಲ್ಲಿದೆ ಎಂದರು. ಉಪನ್ಯಾಸಕರಾದ ಆನಂದ.ಡಿ.ಕೆ. ಸ್ವಾಗತಿಸಿದರು.ನಾಗವೇಣಿ.ಎಚ್.ನಾಯ್ಕ ವಂದಿಸಿದರು.ಎಂ.ಕೆ.ನಾಯ್ಕ ನಿರೂಪಿಸಿದರು.