ಕನ್ನಡ ನಾಡು, ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ : ದಿನಕರ ಶೆಟ್ಟಿ

ಲೋಕದರ್ಶನ ವರದಿ

ಕುಮಟಾ 01 : ಇಂದು ಇಂಗ್ಲೀಷ ವ್ಯಾಮೋಹದಿಂದಾಗಿ ಪಾಲಕರು ಮಕ್ಕಳನ್ನು ಇಂಗ್ಲೀಷ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಶಿಕ್ಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಬೇಕು. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ, ಕನ್ನಡ ನಾಡು ಹಾಗೂ ಭಾಷೆಯನ್ನು ಉಳಿಸಿ ಬೆಳೆಸುವ ಗರುತರವಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

                ಅವರು ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಣಕಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯು ಎಲ್ಲರ ಮೇಲಿದೆ. ರಾಜ್ಯೋತ್ಸವ ಆಚರಣೆ ಎನ್ನುವುದು ಕೇವಲ ಸಕರ್ಾರಿ ಕಾರ್ಯಕ್ರಮವಾಗದೇ, ಇದರಲ್ಲಿ ಎಲ್ಲಾ ಸಾರ್ವಜನಿಕರು ಭಾಗವಹಿಸುವಂತಾಗಬೇಕು. ಕನ್ನಡಗರಿಗೆ ಎಲ್ಲಾ ಸೌಲಭ್ಯವು ಲಭ್ಯವಾಗಬೇಕು. ರೆಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ದೊರಕಬೇಕು. ರೆಲ್ವೆಯವರು ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರೆ. ರೆಲ್ವೆಯಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ದೊರಕಿಸಲು ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ ಎಂದರು.

                ಸಾ ತಾಲುಕಾದ್ಯಕ್ಷ ಶ್ರೀಧರ ಗೌಡ ಉಪ್ಪಿನಗಣಪತಿ ಮಾತನಾಡಿ, ಕನ್ನಡದ ಕುರಿತು ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು. ಸಾಹಿತ್ಯ ಪರಿಷತ್ ಕಾರ್ಯ ಕಲಾಪಗಳಿಗೆ ನಡೆಸಲು ತಾಲೂಕಿನಲ್ಲಿ ಕನ್ನಡ ಭವನದ ಅವಶ್ಯಕತೆಯಿದೆ. ಕನ್ನಡ ಭವನ ನಿಮರ್ಾಣಕ್ಕಾಗಿ ಸಕರ್ಾರದಿಂದ 10 ಗುಂಟೆ ಜಾಗವನ್ನು ಮಂಜೂರಿ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.

                ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಸಿ ಮಾತನಾಡಿದರು.

ತಾ ಪಂ ಅಧ್ಯಕ್ಷೆ ವಿಜಯಾ ಪಟಗಾರ, ಪಶುಸಂಗೋಪನಾ ಇಲಾಖೆಯ ನಿದರ್ೇಶಕ ಡಾ ವಿಶ್ವನಾಥ ಹೆಗಡೆ, ಸಿಪಿಐ ಸಂತೋಷ ಶೆಟ್ಟಿ, ತಾಪಂ ಕಾರ್ಯನಿರ್ವಣಾಧಿಕಾರಿ ಸಿ ಟಿ ನಾಯ್ಕ, ಪುರಸಭೆಯ ಅಧಿಕಾರಿಗಳು ಹಾಗೂ ಸದಸ್ಯರುಗಳು, ತಾಪಂ ಸದಸ್ಯರುಗಳು, ರೋಟರಿ ಹಾಗೂ ಲಾಯನ್ಸ್ ಕ್ಲಬ್ ಪದಾಧಿಕಾರಿಗಳು, ವಿವಿಧ ಸರಕಾರಿ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ಮೊದಲಾದವರು ಉಪಸ್ಥಿತರಿದ್ದರು.

                ಗಿಬ್ ಪ್ರೌಢಶಾಲೆಯ ವಿದ್ಯಾಥರ್ಿಗಳು ನಾಡಗೀತೆ ಮತ್ತು ಸಿವಿಎಸ್ಕೆ ಪ್ರೌಢಶಾಲೆಯ ವಿದ್ಯಾಥರ್ಿಗಳು ರೈತಗೀತೆ ಹಾಡಿದರು.

ತಹಶೀಲ್ದಾರ ಮೇಘರಾಜ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು.

                ಪ್ರಾರಂಭದಲ್ಲಿ ಕನ್ನಡಾಂಬೆಯ ಪೂಜೆ ನೆರವೇರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕನ್ನಡ ತಾಯಿ ಭುವನೇಶ್ವರಿಯ ಜೊತೆಯಲ್ಲಿ ವಿವಿದ ಟ್ಯಾಬ್ಲೋಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

                ಕೊಂಕಣ ಎಜ್ಯುಕೇಶನ್ ಟ್ರಸ್ಸಿನ ಎಲ್ಲಾ ಅಂಗ ಸಂಸ್ಥೆಗಳು, ಮೂರೂರು ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸೇರಿದಂತೆ ವಿವಿಧೆಡೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು