ಲೋಕದರ್ಶನ ವರದಿ
ಗಂಗಾವತಿ 27: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ನೇತ್ರತ್ವದಲ್ಲಿ ಕನಕದಾಸರ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಿದರು. ಮಾಜಿ ಕೇಂದ್ರ ಸಚಿವರಾದ ಜಾಫರ್ ಷರೀಪ್, ಅಂಬರೀಶ್ ನಿಧನದ ಹಿನ್ನಲೆಯಲ್ಲಿ ಸಂತಾಪ ಸೂಚಿಸಿದರು.
ಕನಕದಾಸ ವೃತ್ತದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ರುದ್ರೇಶ ಡಾಗಿ, ಕುರುಬರ ಸಮಾಜದ ತಾಲೂಕು ಅಧ್ಯಕ್ಷ ಕೆ.ಮಂಜುನಾಥ, ಕಾಂಗ್ರೆಸ್ ಮುಖಂಡ ಶರಣೇಗೌಡ ಮಾಲೀ ಪಾಟೀಲ್ ಪಾಲ್ಗೊಂಡಿದ್ದರು.