ಕಂಪ್ಲಿ: ಚಿತ್ರಕಲಾವಿದ ಪರಶುರಾಮಪ್ಪಗೆ ರಾಜೋತ್ಯವ ಪ್ರಶಸ್ತಿ ಪ್ರದಾನ



ಲೋಕದರ್ಶನ ವರದಿ

ಕಂಪ್ಲಿ 10: ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕಂಪ್ಲಿಯ ವಿಜಯನಗರ ಜನಪದ ಚಿತ್ರಕಲಾವಿದ ಚಿತ್ರಗಾರ ಪರಶುರಾಮಪ್ಪ ಇವರ ಕಲಾಗುರು ದಿ.ರಾಮಣ್ಣ ಚಿತ್ರಗಾರ ಇವರ ಜ್ಞಾನದಾಸೋಹದಡಿಯಲ್ಲಿ, ಚಿತ್ರಗಾರ ಪರಶುರಾಮಪ್ಪ ಇವರ ನಿವಾಸದಲ್ಲಿ  104ನೇ ಮಹಾಮನೆ ಮತ್ತು ಶಿಲ್ಪಕಲಾ ಪ್ರದರ್ಶನ ಜರುಗಿತು. 

    ಪುರಸಭೆ ಅಧ್ಯಕ್ಷ ಎಂ.ಸುಧೀರ್ ಮಹಾಮನೆ ಮತ್ತು ಶಿಲ್ಪಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ ಜನಪದ ಕಲೆಯನ್ನು  ಮುಂದಿನ ಪೀಳಿಗೆಗೆ ತಿಳಿಸಿಕೊಡುವಲ್ಲಿ ಚಿತ್ರಗಾರ ಪರಶುರಾಮಪ್ಪ ಕುಟುಂಬದವರು ಪ್ರಮುಖ ಪಾತ್ರವಹಿಸಿದ್ದಾರೆ.  ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಿದ್ದಾರೆ  ಮುಂದಿನ ದಿನಮಾನಗಳಲ್ಲಿ ರಾಜ್ಯ ಸಕರ್ಾರ ಚಿತ್ರಗಾರ ಪರಶುರಾಮಪ್ಪ ಅವರ ಸಾಧನೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿನೀಡಬೇಕೆಂದರು.  

    ಗಂಗಾವತಿಯ ಕೆಎಸ್ಸಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ 'ಶರಣರ ಸಾಮಾಜಿಕ ಮೌಲ್ಯಗಳು' ಕುರಿತು ಉಪನ್ಯಾಸ ನೀಡಿ, ಕುಟುಂಬ ಮತ್ತು ಸಮಾಜ ಮೌಲ್ಯಗಳಿಂದ ಕೂಡಿರುವಂತೆ ವಚನ ಸಾಹಿತ್ಯ ಪ್ರೇರೇಪಿಸುತ್ತದೆ.    ದೇವರ ಮೇಲಿನ ಭಕ್ತಿಯಿಂದ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಶರಣರು ಪ್ರತಿಪಾದಿಸಿದರು. ಚಿತ್ರಗಾರ ಪರಶುರಾಮಪ್ಪನವರು ಜನಪದ ನೆಲೆಯ ಮೂಲತತ್ವದಲ್ಲಿ ಶಿಲ್ಪಕಲಾಕೃತಿಗಳನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿದ್ದು ಸಕರ್ಾರ ಗುರುತಿಸಿ ಗೌರವಿಸಬೇಕೆಂದರು  

    ಪಾಠಶಾಲೆ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿಗಳು ಅಧ್ಯಕ್ಷತೆವಹಿಸಿದ್ದರು. ಹೊಸಮಠದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಪುರಸಭೆ ಸದಸ್ಯ ಬಿ.ನಾಗರಾಜ, ಸೋಮವಂಶ ಆರ್ಯ ಕ್ಷತ್ರೀಯ(ಚಿತ್ರಗಾರ) ಸಮಾಜದ ಕಾರ್ಯದಶರ್ಿ ಎಸ್.ಜಿ.ಚಿತ್ರಗಾರ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಪ್ರಕಾಶ ಮಾತನಾಡಿದರು. ಬಳ್ಳಾರಿಯ ಚಿತ್ರಕಲಾ ಶಿಕ್ಷಕ ಡಿ.ಎಂ.ಶಶಿಧರ ಇವರ ಚಿತ್ರಕಲಾ ಕ್ಷೇತ್ರದಲ್ಲಿನ ಸೇವೆ ಮತ್ತು ಸಾಧನೆಯನ್ನು ಗುರುತಿಸಿ, ಜನಪದ ಶಿಲ್ಪತಯಾರಿಕೆಯಲ್ಲಿ ತೊಡಗಿಸಿಕೊಂಡ ಚಿತ್ರಗಾರ ಪರಶುರಾಮಪ್ಪ, ಸುಮಿತ್ರಮ್ಮ ದಂಪತಿಗಳನ್ನು, ಶಿಕ್ಷಕ ಸಾಹಿತಿ ಬಿ.ಸೈಯ್ಯದ್ ಹುಸೇನ್ ಅವರನ್ನು ಸನ್ಮಾನಿಸಲಾಯಿತು. 

     ಸಂಗೀತಾ ರಾಮಚಂದ್ರ ಚಿತ್ರಗಾರ ಪ್ರಾಥರ್ಿಸಿದರು, ರಾಮಚಂದ್ರ ಚಿತ್ರಗಾರ ಸ್ವಾಗತಿಸಿದರು, ಎಸ್.ಶ್ಯಾಂಸುಂದರ ವಂದಿಸಿದರು, ಬಂಗಿ ದೊಡ್ಡ ಮಂಜುನಾಥ ನಿರೂಪಿಸಿದರು. ನೇಸರಾಳಿಂದ ಭರತ ನಾಟ್ಯ ಪ್ರದರ್ಶನಗೊಂಡಿತು. ಚಿತ್ರಗಾರ ರಮೇಶ್, ರವಿಕುಮಾರ್, ರಾಜಾರಾಮ್ ಚಿತ್ರಗಾರ, ಪರಿಷತ್ತಿನ ಎಚ್.ನಾಗರಾಜ, ಎಸ್.ಡಿ.ಬಸವರಾಜ್, ಮಡಿವಾಳರ ಹುಲುಗಪ್ಪ, ಕೆ.ಯಂಕಾರೆಡ್ಡಿ, ಸಣ್ಣ ಗವಿಸಿದ್ದಪ್ಪ, ಸಜ್ಜನರ ಮಂಜುನಾಥ, ಯು.ಎಂ.ವಿದ್ಯಾಶಂಕರ್, ಎ.ಜಿ.ತಿಪ್ಪೆಸ್ವಾಮಿ, ಶಿಕ್ಷಕ ಪಕ್ಕಿರಪ್ಪ ಸೇರಿ ಅನೇಕರು ಉಪಸ್ಥಿತರಿದ್ದರು.