ಕಂಪ್ಲಿ: ನಿರಂತರ ಸುರಿದ ಮಳೆಗೆ ಬೆಳೆ ನಾಶ: ಕಂಗಾಲಾದ ರೈತರು

ಲೋಕದರ್ಶನ ವರದಿ

ಕಂಪ್ಲಿ 11: ತಾಲ್ಲೂಕಿನ ಸುತ್ತಮತ್ತಲಿನಗ್ರಾಮದಲ್ಲಿ ಗುರುವಾರ ತಡರಾತ್ರ್ರಿ81ಮಿಲಿ.ಮೀಟರ್ ಮಳೆಗೆ ಸುರಿದ  ಮಳೆಗೆ ಕೆರೆಗಳು ಏರಿ ಒಡೆದು ಸುಮಾರುಎಕರೆ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗೆ ಗ್ರಾಮದ ತಗ್ಗು ಪ್ರದೇಶದ ಗುಡಿಸಲುಗಳಿಗೆ  ಮತ್ತುಮನೆಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ. 

ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ  ಡಾ.ರಾಜ್ಕುಮಾರ್ ಜ್ಞಾನ ಮಂದಿರ ಶಾಲೆಮತ್ತು ಅರಣ್ಯ ಇಲಾಖೆ ವಸತಿ ಗೃಹ.ಪಕ್ಕದ ಮನೆಗಳಿಗೆ ಸೇರಿದಂತೆಮಳೆ ನೀರು ನುಗ್ಗಿದೆ. ಸೋಮಪ್ಪ ಕೆರೆ ಕಾಮಗಾರಿ ತ್ವರಿತಗತಿಯಲ್ಲಿ  ನಡೆಯುತ್ತಿದ್ದು ಕೆರೆ ಏರಿಯನ್ನು ಸ್ವಲ್ಪ ಕಿತ್ತು ಕೆರೆಗೆ ನೀರು ಹರಿಸಲಾಯಿತು. ಆಕೆರೆಯ ನೀರು ಇಲ್ಲಿನ ಮುದ್ದಾಪುರ ರಸ್ತೆ ಗ್ಯಾರೇಜ್ಗಳಿಗೆ ನೀರು ನುಗ್ಗಿದೆ. 

ಶಿಬಿರದ ದಿನ್ನಿ(ಮಾರುತಿ ನಗರ) ಎಡ ಭಾಗದ  ಮುರಾರಿಲಕ್ಷೀ ಮನೆಯ ಹತ್ತಿರ ಕಾಮಾಕ್ಷಿ, ರಾಜಮ್ಮ, ನಿಂಗಪ್ಪ, ರೇಣುಕಾ,  ಮುಮತಾಜ್ ಬೇಗಂ  ಸೇರಿಸುಮಾರು 10 ಗುಡಿಸಲುಮತ್ತು ಮನೆಗೆ ನೀರು ನುಗ್ಗಿಮನೆಯಲ್ಲಿನ ಆಹಾರ ಧ್ಯಾನಗಳು  ಪಡಿತರ, ಬಟ್ಟೆ, ಸೇರಿದಂತೆ ದಿನ ಬಳಕೆ ವಸ್ತುಗಳು ಸಂಪರ್ೂಣವಾಗಿ ನೀರಿನಲ್ಲಿ ಹಾಳಾಗಿವೆ. ಮಕ್ಕಳ ಕಟ್ಟಿಕೊಂಡು ಸದ್ಯ ಬಯಲೇ ಪ್ರದೇಶ  ವಾಸ ಮಾಡಿದ್ದವೆ ಎಂದು ಸಂತ್ರಸ್ತರು ಆಳಲು ತೋಡಿಕೊಂಡರು ರಾತ್ರೀ ಸುರಿದ ಮಳೆಯಿಂದ ಹಾನಿಯಾದ ಕುಟುಂಬಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಮಹಿಳಾ ಸಂಘದ ಮುರಾರಿ ಲಕ್ಷ್ಮಿ ಆಗ್ರಹಿಸಿದ್ದಾರೆ ಸ್ಥಳಕ್ಕೆ ತಹಸೀಲ್ದಾರ್ ಎಂ.ರೇಣುಕಾ ಭೇಟಿ ನೀಡಿ ಪರಿಶೀಲಿಸಿದರು