ಲೋಕದರ್ಶನವರದಿ
ರಾಣೇಬೆನ್ನೂರು ಜು.5: ಚಿತ್ರಕಲೆಯಲ್ಲಿ ಅವಿಸ್ಮರಣಿಯ ಸಾಧನೆ ಮಾಡಿ ಕನರ್ಾಟಕ ಸಕರ್ಾರದ ರಾಜ್ಯ ಪ್ರಶಸ್ತಿ ಪುರಸ್ಕೃತ, ಲಿಮ್ಕಾ, ವಿಶ್ವದಾಖಲೆಗಳ ವಿಕಲಚೇತನ ಚಿತ್ರಕಲಾವಿದ ಮಾಲತೇಶ ಎಂ ಗರಡಿಮನಿಯವರಿಗೆ ರಾಷ್ಟ್ರ ಮಟ್ಟದ ಮಾಯಾ ಕಾಮತ್ ಮೆಮೊರಿಯಲ್ ಅವರ್ಾಡ್-2018ರ ವ್ಯಂಗ್ಯಚಿತ್ರಕಲಾ ಸ್ಫಧರ್ೆಯಲ್ಲಿ ದ್ವಿತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ ಇಂಡಿಯನ್ ಕಾಟರ್ೂನ್ ಗ್ಯಾಲರಿಯಲ್ಲಿ ಜು.6ರಂದು ಬೆಳಗ್ಗೆ 11ಗಂಟೆಗೆ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕನರ್ಾಟಕ ಸಕರ್ಾರದ ನಿವೃತ್ತ ಕಾರ್ಯದಶರ್ಿ ಸುಧಾಕರ ರಾವ್ ಕಾರ್ಯಕ್ರಮ ಉದ್ಘಾಟಿಸುವರು ಟ್ರಸ್ಟಿ ಅಮರನಾಥ ಕಾಮತ್, ಪತ್ರಕರ್ತ ನುಪುರ ಬಸು, ಮಹದೇವ.ಟಿ, ಖ್ಯಾತ ವ್ಯಂಗ್ಯಚಿತ್ರಕಾರ ನರೇಂದ್ರರವರ ಸಮ್ಮಖದಲ್ಲಿ ಮಾಲತೇಶರವರು ಪ್ರಶಸ್ತಿ ಸ್ವೀಕರಿಸುವರು.