ಈ ಕಾಮಗಾರಿ ವಾರ್ಡ ನಂಬರ 1 ರಲ್ಲಿ ನಡೆಯುವ ಹಾಗೂ ಶಾಸಕರು ಬರುವ ಬಗ್ಗೆ ಯಾವುದೇ ಸೂಕ್ತವಾದ ಮಾಹಿತಿ ಆ ವಾರ್ಡ ಸದಸ್ಯರಿಗೂ ನೀಡದೇ ಕೇವಲ ಪೂಜೆ ಇರುವ ಬಗ್ಗೆ ಮಾಹಿತಿಯನ್ನು ಮುಖ್ಯಾಧಿಕಾರಿಗಳು ನೀಡಿದ್ದರು. ಹೀಗಾಗಿ ನಾವುಗಳು ಆ ಪೂಜಾ ಕಾಮಗಾರಿಯ ದಿನ ಗೈರಾಗಿದ್ದು ಇತ್ತಿಚೀೆ ಮತ್ತೆ ಪುರಸಭೆಯ ಮುಖ್ಯಾಧಿಕಾರಿಗಳನ್ನು ಕರೆಸಿಕೊಂಡು ಗುದ್ದಲಿ ಪೂಜೆಯನ್ನು ನೆವೆರಿಸಿದ್ದೆವೆಂದು ವಾರ್ಡ ನಂಬರ 1 ರ ಪುರಸಭೆಯ ಸದಸ್ಯೆ ನಿರ್ಮಲ ಶ್ರೀಕಾಂತ ಕುರಿ ಪತ್ರಿಕೆಗೆ ತಿಳಿಸಿದರು.
ಮುಖ್ಯಾಧಿಕಾರಿ: ಒಂದು ಕೋಟಿ ಅನುದಾನದಲ್ಲಿ ಫ್ಲಾವರ್ ಬ್ಲಾಕ್ ಕಾಮಗಾರಿಯ ಪೂಜೆಯನ್ನು ಎಷ್ಟು ಮೂರು ಬಾರಿ ಮಾಡಿದರೇನು ನೂರು ಬಾರಿ ಮಾಡಿದರು ನಡೆಯುತ್ತದೆ. ಅದಕ್ಕೆ ಏನೂ ಅಡ್ಡಿ ಬರುವುದಿಲ್ಲ ಎಂದು ಪತ್ರಿಕೆಯೊಂದಿಗೆ ಮಾತನಾಡುತ್ತ ಪುರಸಭೆ ಮುಖ್ಯಾಧಿಕಾರಿ ಜಿ.ವ್ಹಿ. ಹಣ್ಣೀಕೇರಿ ಸಮಥರ್ಿಸಿಕೊಂಡರು.
ಬಾಕ್ಸ ನ್ಯೂಜ್: ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಒಂದೆ ಕಾಮಗಾರಿಯ ಮೂರು ಮೂರು ಬಾರಿ ಪೂಜೆ ಮಾಡುವುದು ಸರಿಯಲ್ಲ. ಪುರಸಭೆ ಮುಖ್ಯಾಧಿಕಾರಿಗಳು ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಎಲ್ಲರ ಗಮನಕ್ಕೆ ಪ್ರತಿಯೊಂದು ವಿಷಯದ ಬಗ್ಗೆ ಚಚರ್ೆ ಮಾಡಿ ಪೂಜೆಗಳನ್ನು ಆಯೋಜನೆ ಮಾಡಬೇಕೆಂದು ಪುರಸಭೆಯ ಸದಸ್ಯ ಗೀರಿಶ ದರೂರ ಹೇಳಿದರು.
ಪುರಸಭೆಯ ಸದಸ್ಯ ಲಕ್ಷ್ಮೀ ಸರಿಕರ, ರೂಪಾ ಕೋತಲಗಿ, ರಾಜು ಕುರಿ, ಬಾಬುರಾವ ನಡೋಣಿ, ಪರಶುರಾಮ ಧರ್ಮಟ್ಟಿ, ಭಗವಂತ ಬತ್ತಿ, ಅಪ್ಪಾಸಾಬ ಸರಿಕರ, ವರ್ಧಮಾನ ಶಿರಹಟ್ಟಿ, ಬುರಾನಸಾಬ ಶೇಖ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.