ಮೈಸೂರು, ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಎಲಿಮಿನೇಟರ್ ಪಂದ್ಯ ಹುಬ್ಬಳ್ಳಿ ಟೈಗರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ತಂಡಗಳ ನಡುವೆ ಗುರುವಾರ ನಡೆಯಲಿದ್ದು, ಕುತೂಹಲ ಹೆಚ್ಚಿಸಿದೆ.
ಹುಬ್ಬಳ್ಳಿ ಟೈಗರ್ಸ್ ಆರು ಪಂದ್ಯಗಳಿಂದ ಆರು ಅಂಕ ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಶಿವಮೊಗ್ಗ ಸಹ ಆರು ಪಂದ್ಯಗಳಲ್ಲಿ ಆರು ಅಂಕ ಕಲೆ ಹಾಕಿ ನಾಲ್ಕನೇ ಸ್ಥಾನದಲ್ಲಿದೆ.
ಹುಬ್ಬಳ್ಳಿ ತಂಡದ ಪರ ಡೇವಿಡ್ ಮಥೈಸ್, ಮಿತ್ರಕಾಂತ್ ಯಾದವ್ ಎದುರಾಳಿಗಳನ್ನು ಕಾಡಬಲ್ಲರು. ಪ್ರವೀಣ್ ದುಬೆ ಆರು ಪಂದ್ಯಗಳಲ್ಲಿ 159 ರನ್ ಕಲೆ ಹಾಕಿದ್ದಾರೆ. ಉಳಿದಂತೆ ನಾಯಕ ವಿನಯ್ ಕುಮಾರ್ 146, ಮೊಹಮ್ಮದ್ ತಹಾ ಭರವಸೆ ಮೂಡಿಸಿದ್ದಾರೆ.
ಶಿವಮೊಗ್ಗ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದು, ಎದುರಾಳಿಗೆ ಕಾಡ ಬಲ್ಲರು. ಅರ್ಜುನ್ ಹೊಯ್ಸಳ್ (204), ಪವನ್ ದೇಶಪಾಂಡೆ (185), ನಿಹಾಲ್ ಉಲ್ಲಾಳ್ (175) ಭರವಸೆ ಮೂಡಿಸಿದ್ದಾರೆ. ಬೌಲಿಂಗ್ ನಲ್ಲಿ ಎಚ್ ಎಸ್ ಶರತ್ ಹಾಗೂ ಟಿ ಪ್ರದೀಪ್ ವಿಕೆಟ್ ಬೇಟೆ ನಡೆಸಬಲ್ಲರು.