ಬೆಂಗಳೂರು, ಮಾ 11: )Sಗೀತದ ಮೂಲಕ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಕೆ ಪಿ ಇದೀಗ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಗೋದ್ರಾ ಚಿತ್ರಕ್ಕೆ ಕೆಪಿ ಅವರು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದು, ಈ ವಿಚಾರವನ್ನು ಚಿತ್ರದ ನಿರ್ದೇಶಕ ನಂದೀಶ್ ಖಚಿತಪಡಿಸಿದ್ದಾರೆ. ಕೆಪಿ ಅವರು ಈಗಾಗಲೇ ಹಿನ್ನೆಲೆ ಸಂಗೀತ ಸಂಯೋಜನೆ ಹಾಗೂ ರೀರೆಕಾರ್ಡಿಂಗ್ ಆರಂಭಿಸಿದ್ದಾರೆ. ವಿಶೇಷವೇನೆಂದರೆ ಕೆಪಿ ಅವರು ಗೋದ್ರಾ ಚಿತ್ರದ ನಾಲ್ಕನೇ ಸಂಗೀತ ನಿರ್ದೇಶಕರಾಗಿದ್ದಾರೆ. ಜುಧಾ ಸ್ಯಾಂಡಿ, ನವೀನ್ ಸಜ್ಜು ಟೋನಿ ಜೋಸೆಫ್ ಚಿತ್ರದ ಹಾಡುಗಳಿಗೆ ಸಂಗೀತವನ್ನು ಸಂಯೋಜಿಸುತ್ತಿರುವ ಇತರೆ ಮೂವರು ಸಂಗೀತ ನಿರ್ದೇಶಕರು. ಕೆಪಿ ಅವರು ಹಿನ್ನಲೆ ಸಂಗೀತ ಸಂಯೋಜಿಸುತ್ತಿದ್ದಾರೆ. ಗೋದ್ರಾ ಚಿತ್ರವು ಪೊಲಿಟಿಕಲ್ ಥ್ರಿಲ್ಲರ್ ಆಗಿದ್ದೂ, ವಾಸ್ತವಕ್ಕೆ ಹತ್ತಿರವಾಗಿದೆ. ಸರ್ಕಾರ್ ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಅವರು ಸಂಯೋಜನೆ ಮಾಡಿಸಿದ್ದ ರೀತಿಯಲ್ಲಿ ಗೋದ್ರಾ ಚಿತ್ರಕ್ಕೂ ಹಿನ್ನೆಲೆ ಸಂಗೀತವಿರಬೇಕೆಂಬುದು ನಿರ್ದೇಶಕರ ಆಶಯ. ಕೆಪಿ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ತುಂಬಾ ಬ್ಯುಸಿ ಸಂಗೀತ ನಿರ್ದೇಶಕರಾಗಿದ್ದಾರೆ. ಹಿನ್ನೆಲೆ ಸಂಯೋಜನೆ ಮಾಡುವುದಕ್ಕೆ ಒಪ್ಪಿಗೆ ನೀಡುವ ಮುನ್ನ ಕೆಪಿ ಅವರು ಗೋದ್ರಾ ಚಿತ್ರವನ್ನು ವೀಕ್ಷಿಸಿದ್ದಾರೆ. ಗೋದ್ರಾ ಚಿತ್ರದಲ್ಲಿ ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ವಸಿಷ್ಟ ಸಿಂಹ, ಅಚ್ಯುತ್ ಕುಮಾರ್ ನಟಿಸಿದ್ದಾರೆ.