ಬೆಳಗಾವಿ 17: ನಗರದ ಕೆಎಲ್‌ಎಸ್ ಆಯ್‌ಎಮ್‌ಇಆರ್ ಎಂಬಿಎ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಪರಿಸರ ಸಂರಕ್ಷಣಾ ಉಪಕ್ರಮದಡಿ ಖಾನಾಪುರದ ಭೀಮಗಡ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳಲ್ಲಿ ವಣ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವದರೊಂದಿಗೆ ಅರಣ್ಯ ಜೀವನದ ಅನುಭವವನ್ನು ನೀಡುವುದು ಈ ಪ್ರವಾಸದ ಉದ್ದೇಶ.
ರೇಂಜ್ ಫಾರೆಸ್ಟ್ ಆಫೀಸರ್ ಸಯ್ಯದಸಾಬ್ ನದಾಫ, ವಿದ್ಯಾರ್ಥಿಗಳನ್ನು ಸ್ವಾಗತಿಸಿ, ವೈವಿಧ್ಯ ಪರಿಸರ ವ್ಯವಸ್ಥೆ ಕುರಿತು ತಮಗಾದ ಅಗಾಧ ಅನುಭವವನ್ನು ಹಂಚಿಕೊಂಡರು. ಖಾನಾಪುರ ಕಾಡಿನಲ್ಲಿರುವ ವಿವಿಧ ಗಿಡ-ಮರಗಳು, ಪ್ರಾಣಿಗಳ ಕುರಿತು ಮಾಹಿತಿ ನೀಡಿದರು. ಪರಿಸರ ಸಮತೋಲನ ಹಾಗೂ ಕಾಡಿನ ಸಂರಕ್ಷಣೆಯಲ್ಲಿ ಅರಣ್ಯ ಸಿಬ್ಬಂದಿಗಳ ಪಾತ್ರದ ಕುರಿತು ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಡಿನ ಚಾರಣ ಮಾಡಿ, ಕಾಡುಪ್ರಾಣಿಗಳ ಹೆಜ್ಜೆಗುರುತು ವಿವಿಧ ಜಾತಿಯ ಮರಗಳನ್ನು ವಿಕ್ಷೀಸಿದರು.
ಅಧ್ಯಕ್ಷ ಆರ್.ಎಸ್ ಮುತಾಲಿಕ, ಆಯ್‌ಎಮ್‌ಇಆರ್‌ನ ನಿರ್ದೆಶಕ ಡಾ. ಆರೀಫ್ ಶೇಖ ಮಾರ್ಗದರ್ಶನದಲ್ಲಿ ಈ ಭೇಟಿಯನ್ನು ಏರಿ್ಡಸಲಾಗಿತ್ತು. ಡಾ. ಜಾರ್ಜ ರೊಡ್ರಿಗ್ಯು. ಅತಿಥಿ ಉಪನ್ಯಾಸಕಿ ಸವಿತಾ ಕುಲಕರ್ಣಿ, ರಶ್ಮಿ ಹರಿ್ಟ ಅವರುಗಳು ಪ್ರವಾಸದ ನೇತೃತ್ವ ವಹಿಸಿಕೊಂಡು ವಿದ್ಯಾರ್ಥಿಗಳು ಕಾಡಿನ ಸಂರಕ್ಷಣೆ ಕುರಿತು ಅರ್ಥೈಸಿಕೊಳ್ಳಲು ಸಹಾಯ ಮಾಡಿದರು.