ಕೆ.ಎಚ್.ಬಿ. ಕಾಲೊನಿಯ ಕುಂದು ಕೊರತೆಗಳ ಸಭೆ

ಲೋಕದರ್ಶನ ವರದಿ

ಬೆಳಗಾವಿ,28: ದಿ.28.ರಂದು ಬೆಳಗಾವಿ ಮಹಾನಗರ ಪಾಲಿಕೆಯ ಶಾಸಕರ ಕೊಠಡಿಯಲ್ಲಿ ಕೆ.ಎಚ್.ಬಿ. ಕಾಲೊನಿಗೆ ಸಂಬಂಧಿಸಿದಂತೆ ಅಲ್ಲಿನ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ಬೀದಿ ದೀಪಗಳ ಹಾಗೂ ಇನ್ನಿತರೆ ಕೊರತೆಗಳ ಬಗ್ಗೆ ಅಲ್ಲಿನ ಸಾರ್ವಜಣಿಕರ ಅಹವಾಲಿನನ್ವಯ ಕೆ.ಎಚ್.ಬಿ. ಕಾಲೊನಿಯ ಅಧಿಕಾರಿಗಳು, ಕೆ.ಯು.ಡಬ್ಲೂ.ಎಸ್. ಅಧಿಕಾರಿಗಳು, ಪಿ.ಡಬ್ಲೂ.ಡಿ.,ಝೆಡ.ಪಿ. ಅಧಿಕಾರಿಗಳ ಜೊತೆ ಚಚರ್ಿಸಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಬೀದಿ ದೀಪಗಳ ಬಗ್ಗೆ ಅಧಿಕಾರಿಗಳಿಗೆ ನಿದರ್ೇಶನ ನೀಡಿ 4 ದಿನಗಳಲ್ಲಿ ಪರಿಶೀಲಿಸಿ ಕೈಗೊಂಡ ಕ್ರಮಗಳ ಬಗ್ಗೆ ವರದಿಸಲ್ಲಿಸಲು ನಿದರ್ೇಶಿಸಿದರು. ಅದರಂತೆಕೆ.ಎಚ್.ಬಿ. ಅಧಿಕಾರಿಗಳಿಗೆ ಕೆ.ಎಚ್.ಬಿ. ಕಾಲೊನಿಯಲ್ಲಿ 2 ಶುದ್ಧಕುಡಿಯುವ ನೀರಿನಘಟಕ ಅಳವಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು ಹಾಗೂ ಕಾಲೊನಿಯ ಒಳರಸ್ತೆಗಳನ್ನು ಅಭಿವೃದ್ಧಿ ಪಡೆಸಲು ಮತ್ತು ಬೀದಿ ದೀಪಗಳನ್ನು ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ನಿದರ್ೇಶಿಸಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಶಾಸಕರ ಆಪ್ತಸಹಾಯಕರಾದ ವ್ಹಿ.ಎಮ್.ಪತ್ತಾರ, ಕೆ.ಎಚ್.ಬಿ. ಕಾರ್ಯಪಾಲಕ ಅಭಿಯಂತರರು, ಕೆ.ಯು.ಡಬ್ಲೂ.ಎಸ್., ಪಿ.ಡಬ್ಲೂ.ಡಿ., ಝೆಡ.ಪಿ. ಅಧಿಕಾರಿಗಳು, ರಾಣೆಬೆನ್ನೂರಹಾಗೂ ಕೆ.ಎಚ್.ಬಿ. ಕಾಲೊನಿಯ ರಹವಾಸಿಗಳು ಉಪಸ್ಥಿತರಿದ್ದರು.