ಬೆಳಗಾವಿ: ಕನ್ನಡ ರಂಗಭೂಮಿ ಬೆಳೆಸಲು ಗಡಿ ಭಾಗ ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚೆಚ್ಚು ರಂಗ ಚಟುವಟಿಕೆಗಳನ್ನು ನಡೆಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಪತ್ರಕರ್ತ ಮುರುಗೇಶ ಶಿವಪೂಜಿ ಹೇಳಿದರು.
ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಗುರುವಾರ 30 ರಂದು ಯುವ ರಂಗ ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ ವಿದೂಷಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ವೃತ್ತಿ ರಂಗಭೂಮಿಯವರ ನಾಟಕ ಪ್ರದರ್ಶನಗಳ್ಳುತ್ತಿವೆ. ಜತೆಗೆ ಆಧುನಿಕ ನಾಟಕಗಳೂ ಪ್ರದರ್ಶನವಾಗುವ ಮೂಲಕ ಜನರಲ್ಲಿ ನಾಟಕದ ಅಭಿರುಚಿ ಬೆಳೆಯಬೆಕಾಗಿದೆ. ವೈಚಾರಿಕ, ಪ್ರಜ್ಞಾವಂತಿಕೆಯ ನಾಟಕಗಳನ್ನು ಪ್ರದಶರ್ಿಸುವ ಮೂಲಕ ಹೊಸ ಆಯಾಮ ಸೃಷ್ಟಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಂಗಾಸಕ್ತರು ಆಧುನಿಕ ನಾಟಕಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ಪ್ರೇಮಿಗಳು ಭಾಗವಹಿಸಬೇಕು ಎಂದು ಹೇಳಿದರು.
ಸಾಹಿತಿ ಡಾ. ಎಚ್.ಬಿ. ಕೋಲಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಟಕಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯ ಉಳಿಸಿಕೊಳ್ಳಬೇಕಾಗಿದೆ. ಈ ಹಿಂದೆ ಸಂಗತ ನಾಟಕಗಳು ಮಾತ್ರ ರಚಿತವಾಗುತ್ತಿದ್ದವು. ಈಗ ಅಸಂಗತ ಕೂಡ ಇತ್ತೀಚಿನ ದಿನಗಳಲ್ಲಿ ರೂಪ ಪಡೆದುಕೊಂಡಿದೆ. ಸಂಗತ ಅಸಂಗತವಾಗಿ ಮಾರ್ಪಟ್ಟಿದ್ದು, ಸಮಾಜದ ಸೂಕ್ಷ್ಮ ಅಂಶಗಳನ್ನು ಅಸಂಗತ ಮೂಲಕ ಅಥ್ಯರ್ೈಸಿ
ಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಗಲಾ ಮೆಟಗುಡ್ ಮಾತನಾಡಿ, ನಾನು ಚಿಕ್ಕವಳಿದ್ದಾಗ ಮರಾಠಿ ನಾಟಕಗಳನ್ನು ನೋಡಿ ಬೆಳೆದಿದ್ದೇನೆ. ಮರಾಠಿ ನಾಟಕಗಳ ಪ್ರಭಾವ ನನ್ನ ಮೇಲೆ ಪ್ರಭಾವ ಬೀರಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಆಧುನಿಕ ಹಾಗೂ ವೃತ್ತಿ ನಾಟಕಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದೇನೆ. ವಿದೂಷಕ ನಾಟಕವನ್ನು ಬಐಲಹೊಂಗಲದಲ್ಲಿ ಪ್ರದರ್ಶನಕ್ಕೆ ಎಲ್ಲ ಸಹಕಾರ ನೀಡಲಾಗುವುದು. ನಾಟಕಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದರು.
ಮಲ್ಲಿಕಾಜರ್ುನ ಮಠದ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ರಂಗದಲ್ಲಿ ಪಾಶ್ಚಿಮಾತ್ಯ ನಾಟಕಗಳನ್ನು ತರುವ ಕೆಲಸ ಮಾಡಬೇಕಿದೆ. ನಾಟಕಗಳನ್ನು ಅಭ್ಯಾಸ ಮಾಡುವ ಮೂಲಕ ಆ ಕಲೆ-ಸಂಸ್ಕೃತಿ ತಿಳಿದುಕೊಳ್ಳಬೇಕು. ನಾಟಕ ಎನ್ನುವುದು ನಿಂತ ನೀರಾಗಬಾರದು. ಇದು ನಿರಂತರವಾಗಿ ನಡೆಯುತ್ತಿರಬೇಕು ಎಂದರು.
ರಾಜು ಮಠಪತಿ ಸಂಘಟಕ ರಾಜು ಮಠಪತಿ, ನಿದರ್ೇಶಕ ಬಾಬಾಸಾಹೇಬ ಕಾಂಬಳೆ, ಎಂ.ವೈ. ಮೆಣಸಿನಕಾಯಿ, ಸ್ಟಿಪನ್, ಅರವಿಂದ ಕುಲಕಣರ್ಿ ಸೇರಿದಂತೆ ರಂಗಾಸಕ್ತರು ಇದ್ದರು. ಬಸವರಾಜ ತಳವಾರ ನಿರೂಪಿಸಿದರು.
ನಂತರ ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ ರಚಿತ, ಬಾಬಾಸಾಹೇಬ ಕಾಂಬಳೆ ನಿದರ್ೇಶನ ಮಾಡಿರುವ ವಿದೂಷಕ ನಾಟಕ ಪ್ರದರ್ಶನಗೊಂಡಿತು. ಬಳಿಕ ನಾಟಕದ ಬಗ್ಗೆ ಗಣ್ಯರು ಅನಿಸಿಕೆ ಹಂಚಿಕೊಂಡರು.