ಭೋವಿ ಸಮಾಜದ ವತಿಯಿಂದ ಜೋಶಿಗೆ ಸನ್ಮಾನ

 ಶಿಗ್ಗಾವಿ : ನೂತನವಾಗಿ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವರು ಮತ್ತು ಸಂಪುಟದಲ್ಲಿ ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಸಚಿವ ಸ್ಥಾನವನ್ನು ಸ್ವೀಕರಿಸಿದ ಸಂಸದ ಪ್ರಹ್ಲಾದ ಜೋಷಿಯವರು ಮೊದಲ ಭಾರಿಗೆ ಪಟ್ಟಣಕ್ಕೆ ಆಗಮಿಸಿದಾಗ ಶಾಸಕ ಬಸವರಾಜ ಬೊಮ್ಮಾಯಿಯವರ ನಿವಾಸದಲ್ಲಿ ಭೋವಿ ಸಮಾಜದ ತಾಲೂಕಾ ಅಧ್ಯಕ್ಷ ಅಜರ್ುನ ಹಂಚಿನಮನಿ ಅವರ ನೇತೃತ್ವದಲ್ಲಿ ಸಮಾಜದ ಬಾಂಧವರು ಸನ್ಮಾನಿಸಿದರು. 

ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ವಿಪ ಸದಸ್ಯ ಎಸ್ ವಿ ಸಂಕನೂರ, ಪುರಸಭೆ ಮಾಜಿ ಅಧ್ಯಕ್ಷ ರಾಮು ಪೂಜಾರ, ಯುವ ಮುಖಂಡರಾದ ಹನುಮಂತ ಬಂಡಿವಡ್ಡರ, ವೆಂಕಟೇಶ ಬಂಡಿವಡ್ಡರ ಸೇರಿದಂತೆ ಭೋವಿ ಸಮಾಜದ ಬಾಂಧವರು ಇದ್ದರು.