ಸಂಬರಗಿ 23: ಚಿಕ್ಕೊಡಿ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯಥರ್ಿ ಅಣ್ಣಾಸಾಬ ಜೊಲ್ಲೆ ಇವರು ಆಯ್ಕೆಯಾದ ನಂತರ ಬಿ.ಜೆ.ಪಿ ಕಾರ್ಯಕರ್ತರು ಗುಲಾಲ ಹಾಗೂ ಫಟಾಕಿ ಹಚ್ಚಿ ಆನಂದ ವ್ಯಕ್ತಪಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಸಂಬರಗಿ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ ಮುಲ್ಲಾ ಮಾತನಾಡಿ ಕೇಂದ್ರದಲ್ಲಿ ಬಿ.ಜೆ.ಪಿ ಸರಕಾರ ಅಧಿಕಾರಕ್ಕೆ ಇದ್ದಾಗ ಗ್ರಾಮೀಣ ಹಾಗೂ ಸಾಮಾನ್ಯ ಜನರಿಗೆ ಕೆಲಸ ಮಾಡಿದರು. ಅದರಲ್ಲಿ ಗ್ಯಾಸ್ ಸಿಲಿಂಡರ್ ಉಚಿತವಾಗಿ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರಿಗೆ ನೀಡಿದ ನಂತರ ಕೇಂದ್ರ ಸರಕಾರ ಮಾಡಿರುವ ಅಭಿವೃದ್ಧಿ ನೋಡಿ ಮತ್ತೊಮ್ಮೆ ಜನರು ಬಿ.ಜೆ.ಪಿಗೆ ಅಧಿಕಾರದ ಚುಕ್ಕಾಣಿ ನೀಡಿದ್ದಾರೆ ಎಂದು ಹೇಳಿದರು.
ಸಂಬರಗಿ ಗ್ರಾಮದ ಪಿ.ಕೆ.ಪಿ ಎಸ್ ಸಹಕಾರಿ ಸಂಘದ ಅಧ್ಯಕ್ಷ ಅಣ್ಣಾಸಾಬ ಮಿಸಾಳ, ಅಮೃತ ಮಿಸಾಳ, ರಾಮಚಂದ್ರ ಟೊನೆ, ಪರಶೂರಾಮ ಕೋಳಿ, ಭಗವಾಣ ಅವಳೆಕರ, ಗಣಪತಿ ಕೋಳಿ ಸೇರಿದಂತ ಅನೇಕ ಗಣ್ಯರು ಹಾಜರಿದ್ದರು.
ಖೀಳೆಗಾಂವ ಗ್ರಾಮದಲ್ಲಿ ಬಿ.ಜೆ.ಪಿ ಕಾರ್ಯಕರ್ತರು ಅನಂದ ವ್ಯಕ್ತಪಡಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಫಟಾಕಿ ಮತ್ತು ಗುಲಾಲ ಹಚ್ಚಿ ಆನಂದ ವ್ಯಕ್ತಪಡಿಸಿದರು. ಈ ವೇಳೆ ಆನಂದಕುಮಾರ ರುದ್ರಗೌಡ, ರಾಜು ಬಗಲಿ, ಬಸಪ್ಪ ಸಂತೋಜಿ, ವಿಜಯ ಆಳಿಟಿ ಅಣ್ಣಪ್ಪ ಬಗಲಿ ಸೇರಿದ ಅನೇಕ ಕಾರ್ಯಕರ್ತರು ಹಾಜರಿದ್ದರು.
ಅರಳಿಹಟ್ಟಿ ಗ್ರಾಮದಲ್ಲಿ ಬಿ.ಜೆ.ಪಿ ಕಾರ್ಯಕರ್ತರು ಗುಲಾಲ ಹಾರಿಸಿ ಆನಚಿದ ವ್ಯಕ್ತಪಡಿಸಿದರು ಈ ವೇಳೆ ತಾನಾಜಿ ಶಿಂಧೆ, ಸಯ್ಯದ ಬಾಪು ಹೇರವಾಡೆ, ತಾನಜಿ ಮುಡದೆ, ಸಿದ್ದು ಅವಳೆಕರ, ಕಾಕಾಸಾಬ ಅವಳೆಕರ ಸೇರಿದ ಅನೇಕ ಗಣ್ಯರು ಹಾಜರಿದ್ದರು.
ಜಂಬಗಿ ಗ್ರಾಮದಲ್ಲಿ ಬಿ.ಜೆ.ಪಿ ಅಭ್ಯಥರ್ಿ ಅಣ್ಣಾಸಾಬ ಜೊಲ್ಲೆ ಆಯ್ಕೆಯಾದ ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಫಟಾಕಿ ಹಚ್ಚಿ ಗುಲಾಲ ಹಾರಿಸಿ ಆನಂದ ವ್ಯಕ್ತಪಡಿಸಿದರು. ಈ ವೇಳೆ ಬಂಡು ಜಾಧವ, ಸಂಜು ಮಾಳಿ, ತುಕಾರಾಮ ಮಾಳಿ, ಪ್ರಕಾಶ ಮಾಳಿ, ಪೊಪಟ ಜಾಧವ ಸತೀಶ ಜಾಧವ ಸೇರಿದ ಅನೇಕ ಕಾರ್ಯಕರ್ತರು ಹಾಜರಿದ್ದರು.