ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಜೀವನ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Jeevan Jyoti National Award is presented to achievers who have achieved in various fields

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಜೀವನ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ  

ಬೆಳಗಾವಿ 05: ಕನಸು ಡಿಜಿಟಲ್ ಸೊಲ್ಯೂಷನ್ಸ್‌ ಮತ್ತು ಎನ್‌. ಎಚ್‌. ಎಲ್‌. ವರ್ಡ್‌ ಯೂನಿಕ ಇವೆಂಟ್ಸ್‌ ನ್ಯೂಸ್ ಮತ್ತು ಆರ್ಗನೈಜೇಶನ್ಸ್‌ ಬೆಂಗಳೂರು. ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ನಯನ ಸಭಾಭವನದಲ್ಲಿ ಮಾರ್ಚ್‌ 3 ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ವೈದ್ಯಕೀಯ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ, ಸಾಧಕರಿಗೆ ಜೀವನ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ ಬೆಳಗಾವಿಯ ಸಮಾಜ ಸೇವಕರಾದ ಆಕಾಶ ಹಲಗೇಕರ, ವೈದ್ಯಕೀಯ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬಾಳೇಶಿ ಕೋಲಕಾರ, ಡಾ.ಸಚಿನ ವಸಂತ ಮಾಹುಲಿ ಪ್ರಖ್ಯಾತ ನೇತ್ರತಜ್ಞರು, ಡಾ.ಅಲ್ಪೇಶ ನರೋತ್ತಮ್ ಟೋಪರಾನಿ ಪ್ರಖ್ಯಾತ ನೇತ್ರ ತಜ್ಞರು, ನಂದಾದೀಪಾ ಕವಿಯತ್ರಿ ಹಾಗೂ ಕಾದಂಬರಿಕಾರರು. ಇವರು ಜೀವನ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದರು.ಸಂಘಟನೆಯ ನಿರ್ದೇಶಕರಾದ ಲಾವಣ್ಯ ವಿನೋದ, ರಾಕೇಶ್ ಕೆ. ಎಸ್, ಮತ್ತು ಸುರೇಶ್ ಕುಮಾರ್‌. ಹಾಗೂ ಮಹಾಂತೇಶ್ ಕಡಲಗಿ ಅಧ್ಯಕ್ಷರು ಮತ್ತು ಭಿಮಪ್ಪ ಲಮಾಣಿ ಅನ್ನಪೂರ್ಣೇಶ್ವರಿ ಫೌಂಡೇಶನ್ ಬೆಳಗಾವಿ ಇವರು ಉಪಸ್ಥಿತರಿದ್ದರು.