ವನಹಳ್ಳಿಯ ಶ್ರೀ ಜಟ್ಟಿಂಗೇಶ್ವರ ಜಾತ್ರೋತ್ಸವ * ಜನಪದ ಉತ್ಸವ ಹಳ್ಳಿಗಳು ಜನಪದ ಸಂಕೃತಿಯ ನೆಲೆಗಳಾಗಿವೆ-ಮಂಗಾನವರ

ಲೋಕದರ್ಶನ ವರದಿ

ತಾಳಿಕೋಟೆ, 8: ಹಳ್ಳಿಗಳು ಜಾನಪದ ಸಂಸ್ಕೃತಿಯ ಮೂಲ ನೆಲೆಗಳಾಗಿವೆ. ಜಾನಪದ ಕಲಾವಿದರು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ರಾಯಭಾರಿಗಳಾಗಿದ್ದಾರೆ ಎಂದು ಕನರ್ಾಟಕ ಪುಸ್ತಕ ಪರಿಷತ್ ಅಧ್ಯಕ್ಷ ಜೆ.ಓ.ಸಿಸಿ ಬ್ಯಾಂಕ ನಿದರ್ೇಶಕ ಶ್ರೀ ಶಿವಾನಂದ ಮಂಗಾನವರ ಹೇಳಿದರು.  

       ಶನಿವಾರರಂದು ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ಜಟ್ಟಿಂಗೇಶ್ವರ ಜಾತ್ರಾ ನಿಮಿತ್ಯ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ತಾಲೂಕಾ ಘಟಕ ಮುದ್ದೇಬಿಹಾಳ ಮತ್ತು ಪಡಗಾನೂರಿನ ಮಾತೋಶ್ರೀ ಸುಗಲಾಬಾಯಿ ಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಗ್ರಾಮೀಣ ಜಾನಪದ ಕಲಾವಿದರನ್ನು ಬೆಳೆಸಬೇಕಾದ ಅಗತ್ಯವಿದೆ ಇಂದಿನ ಆಧುನಿಕ ಯುಗದಲ್ಲಿ ಸಿನಿಮಾ ಹಾಡುಗಳ ಬರಾಟೆಯಲ್ಲಿ ಜಾನಪದ ಹಾಡಿನ ಅರ್ಥಗಬರ್ೀತ ಮರೆಯಾಗುತ್ತಿರುವದು ಅತ್ಯಂತ ಖೇದಕರ ಸಂಗತಿಯಾಗಿದೆ ಜಾನಪದ ಹಾಡಿನ ಸೊಗಡಿನಲ್ಲಿ ಈ ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬಗಳು ಅಡಗಿಕೊಂಡಿರುತ್ತವೆ ಅಂತಹ ಜನಪದ ಕಲಾವಿಧರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕಾರ್ಯ ಕನ್ನಡ ಜಾನಪದ ಪರಿಷತ್ ಮಾಡುತ್ತಾ ಸಾಗಿರುವದು ಶ್ಲಾಘನೀಯವಾಗಿದೆ ಎಂದರು.

ಜಾನಪದ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ.ಬೆಳಗಲ್ಲ ಜಾನಪದ ಸಂಸ್ಕೃತಿಗೆ ತಾಯಿಯ ಲಾಲಿ ಹಾಡು ಆಧಾರವಾಗಿದೆ. ಮಗುವನ್ನು ಮಲಗಿಸುವದಕ್ಕಾಗಿ ಲಾಲಿಹಾಡಿನ ಮಜಲಿಗೆ ಮತ್ತು ಶೈಲಿಗೆ ಮಗು ನಿದ್ರಾವಸ್ತೆಗೆ ತಲುಪಿಸುವಂತಹ ಶಕ್ತಿ ಜಾನಪದ ಹಾಡಿನಲ್ಲಿ ಅಡಗಿದೆ ಅಂತಹ ಜಾನಪದ ಸಂಸ್ಕೃತಿ ಹಳ್ಳಿಗಾಡಿನ ಜನರಲ್ಲಿ ಹಾಗೂ ಹಾಲುಮತ ಜನಾಂಗದವರಲ್ಲಿ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ ಎಂದ ಅವರು ಅಂತಹ ಜನಪದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಕಾರ್ಯ ನಮ್ಮೇಲ್ಲರದ್ದಾಗಬೇಕೆಂದರು.

  ಪ್ರಾಸ್ತಾವಿಕ ಮಾತನಾಡಿದ ಕಜಾಪ ಅಧ್ಯಕ್ಷ ಎ.ಆರ್. ಮುಲ್ಲಾ ಜಿಲ್ಲೆಯಲ್ಲಿ ಜಾನಪದ ಕಲಾವಿದರನ್ನು ಗುರುತಿಸುವ ಕೆಲಸ ಜಾನಪದ ಪರಿಷತ್ ಮಾಡುತ್ತಿದೆ ಎಂದರು.  

   ಅತಿಥಿಗಳಾಗಿದ್ದ ತಾಳಿಕೋಟಿ ಪ್ರಾಚಾರ್ಯ ಭೀಮಾಶಂಕರ ಬಂಡಿ ಬೀಸುಕಲ್ಲಿನ, ಹಂತಿ, ಮಟ್ಟಿಹೊಡೆಯುವ ಹಾಡುಗಳನ್ನು ಹಾಡಿ ಜನಮನವನ್ನು ರಂಜಿಸಿದರು.  

   ಈ ಕಾರ್ಯಕ್ರಮದಲ್ಲಿ ಉತ್ನಾಳ ನಬೀಲಾಲ, ಬೀರಲಿಂಗೇಶ್ವರ ಡೊಳ್ಳಿನ ಸಂಘ ಅರಿಕೇರಿ, ನಾಗೂರ ಕಾಶೀಲಿಂಗ, ಕುರುಗೋಟಿನ ನಸ್ರೀನ್, ಪುಂಡಲೀಕ ಅಪಜಲಪೂರ, ಅಮರಗೋಳ ಶಿವಣ್ಣ ಮಾಸ್ಟರ ರವರ ಡೊಳ್ಳಿನ ಕಲಾತಂಡಗಳು ಭಾಗವಹಿಸಿ ಕಲಾಪ್ರದರ್ಶನ 

ಮಾಡಿದರು.  

  ವೇದಿಕೆಯಲ್ಲಿ ಜಿಲ್ಲಾ ಕಜಾಪ ಕಾರ್ಯದಶರ್ಿ ಪುಂಡಲೀಕ ಮುರಾಳ ತಾಲೂಕಾ ಕಾರ್ಯದಶರ್ಿ ಎಸ್ ವಾಯ್ ವಗ್ಗರ, ಸಿದ್ದಪ್ಪ ಹೊಸಮನಿ, ಈಶ್ವರಪ್ಪ ಗಾಡಿ, ಗುರಡ್ಡಿ ಹರಿಜನ, ಸಂಗಮೇಶ ಕೇಸಾಪೂರ, ಹಣಮಂತ ಕೊಲಕಾರ, ಮಲ್ಲನಗೌಡ ತಾಮರಡ್ಡಿ ಶಿವಪ್ಪ ವಾಲೀಕಾರ ಭೀಮರಾಯ ಬಡಿಗೇರ ಗೌಡಪ್ಪಗೌಡ ಬಿರಾದಾರ ಇತರರು ಇದ್ದರು. 

   ವೇದಮೂತರ್ಿ ಕರಿಸಿದ್ದಯ್ಯ ಗುರುವಿನ ಸಾನಿಧ್ಯವಹಿಸಿದ್ದರು.

    ಪಿಕೆಪಿಎಸ್ ಅಧ್ಯಕ್ಷ ಸಿದ್ದನಗೌಡ ತಿಳಗೂಳ ಅಧ್ಯಕ್ಷತೆ ವಹಿಸಿದ್ದರು.

 ಶ್ರೀಮತಿ ಎಂ.ಜಿ ವಾಲಿ ನಿರೂಪಿಸಿದರು, ಪ್ರಕಾಶ ಚಲವಾದಿ ಸ್ವಾಗತಿಸಿದರು. ಎಂ.ಎನ್.ಮಾಗಿ ವಂದಿಸಿದರು.