ದೇವಲಾಪುರ ಗ್ರಾಪಂ ಉಪಾಧ್ಯಕ್ಷರಾಗಿ ಜಡೆಮ್ಮ ಆಯ್ಕೆ

ಕಂಪ್ಲಿ:ಸೆ.10. ತಾಲೂಕಿನ ದೇವಲಾಪುರ ಗ್ರಾಪಂಯ ನೂತನ ಉಪಾಧ್ಯಕ್ಷೆಯಾಗಿ ಜಾನೂರು ಜಡೆಮ್ಮ ಅವಿರೋಧವಾಗಿ ಆಯ್ಕೆಗೊಂಡರು ಎಂದು ಹೊಸಪೇಟೆ ತಾಪಂ ಇಒ ಟಿ.ವೆಂಕೋಬಪ್ಪ ತಿಳಿಸಿದ್ದಾರೆ. 

     ಸಮೀಪದ ದೇವಲಾಪುರ ಗ್ರಾಪಂಯಲ್ಲಿ ಸೋಮವಾರ ನಡೆದ ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ನಂತರ ಮಾತನಾಡಿದ ಅವರು, ಮಾಜಿ ಉಪಾಧ್ಯಕ್ಷೆ ನಾಯಕರ ಮಾರೆಮ್ಮ ಅವರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾಗಿದ್ದ ಪರಿಶಿಷ್ಟ ವರ್ಗ ಮಹಿಳೆ ಮೀಸಲಾತಿಯ ಉಪಾಧ್ಯಕ್ಷ ಸ್ಥಾನಕ್ಕೆ, ಜಾನೂರು ಜಡೆಮ್ಮ ನಾಮಪತ್ರ ಸಲ್ಲಿಸಿದರಿಂದ ಜಾನೂರು ಜಡೆಮ್ಮ ಅವರರನ್ನು ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ.  ನೂತನ ಉಪಾಧ್ಯಕ್ಷೆ ಜಡೆಮ್ಮ ಅವರು ಸರ್ವ ಸದಸ್ಯರ ಸಹಕಾರದೊಂದಿಗೆ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಬೇಕು ಎಂದರು. 

ನೂತನ ಉಪಾಧ್ಯಕ್ಷೆ ಜಡೆಮ್ಮಗೆ ಗ್ರಾಪಂ ಆಡಳಿತ ಮಂಡಳಿ ಹಾಗೂ ಮುಖಂಡರು ಸನ್ಮಾನಿಸಿ ಗೌರವಿಸಿದರು. 

     ಈ ಸಂದರ್ಭದಲ್ಲಿ ಅಧ್ಯಕ್ಷ ಗೌಡ್ರು ಬುಡುಗನಗೌಡ, ಸದಸ್ಯರಾದ ಬಿ.ರಾಮನಗೌಡ, ವೀರೇಶ ದನಕಾಯ, ಸುರೇಶಗೌಡ, ಅಂಗಡಿ ಬಸವ, ಗೌಡ್ರು ಉಮೇಶಗೌಡ, ಮದ್ಲಿ ಯಲ್ಲಪ್ಪ, ಬಂಡಿ ಲಕ್ಷ್ಮಿ, ಗೊಲ್ಲರ ಹನುಮಂತಮ್ಮ, ಚೆನ್ನದಾಸರ ಗಂಗಮ್ಮ, ಗುಡ್ರು ರೇವಮ್ಮ, ಹರಿಜನ ಪಕ್ಕಿರಮ್ಮ, ನಾಯಕರ ಮಾರೆಮ್ಮ, ವಡ್ಡಿನ ಸುಲೋಚನಮ್ಮ, ಪೆದ್ದ ಮಾರೆಕ್ಕ ಹಾಗೂ ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ಪಿಡಿಒ ಶಿಲ್ಪಾರಾಣಿ, ಕಾರ್ಯದಶರ್ಿ ಶಿವನಗೌಡ, ಮುಖಂಡರಾದ ಮರೇಗೌಡ್ರು, ಚನ್ನಪ್ಪ, ಜಿ.ಅಂಜಿನಪ್ಪ, ಮಾವಿನಹಳ್ಳಿ ಬಸವರಾಜ, ಜಿ.ಜಂಭಯ್ಯ ಸೇರಿ ಅನೇಕರಿದ್ದರು.