ಲೋಕದರ್ಶನ ವರದಿ
ಮುಧೋಳ 3: ತಾಲೂಕಿನಾದ್ಯಂತ ಕಾಖರ್ಾನೆಗಳು ಸ್ಥಾಪನೆಯಾಗುತ್ತಿರುವುದರಿಂದ ವಾಹನಗಳ ದಟ್ಟಣೆಯೂ ಕ್ರಮೇಣ ಹೆಚ್ಚಾಗುತ್ತ ಬರುತ್ತಿದೆ. ಅದರಂತೆ ನಗರದಲ್ಲಿ ವಾಸಿಸುವ ನಾಗರಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ.ಅದರಿಂದಾಗಿ ನಗರದಲ್ಲಿ ವಿವಿಧ ಇಲಾಖೆ ಯಲ್ಲಿ ನೌಕರಿ,ಉದ್ಯಮೆ,ವ್ಯಾಪಾರಕ್ಕೆಂದು ಬಂದ ಜನರು ತಮ್ಮ ಮಕ್ಕಳ ಶಿಕ್ಷಣದ ದೃಷ್ಠಿಯಿಂದ ಇಲ್ಲಿಯೇ ಉಳಿದು ಮನೆಗಳನ್ನು ಕಟ್ಟಿ ಕೊಂಡು ವಾಸಿಸುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ನಗರಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳು ಇಲ್ಲದೇ ಇರುವುದು ದುರದೃಷ್ಟ ಕರ ಎಂದು ಸ್ವಾಮಿ ವಿವೇಕಾನಂದ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ವಸ್ತ್ರದ ಹೇಳಿದರು.
ಅವರು ಗುರುವಾರ ನಗರದ ಬಸವೇಶ್ವರ ವೃತ್ತದ ಬಳಿ ಮುಧೋಳ ಹಿತರಕ್ಷಣಾ ಹೋರಾಟ ಸಮೀತಿಯವರು ಹಮ್ಮಿಕೊಂಡಿರುವ ಅನಿಧರ್ಿಷ್ಟ ಧರಣಿ ಸತ್ಯಾಗ್ರಹದಲ್ಲಿ ಸ್ವಾಮಿ ವಿವೇಕಾನಂದ ಪ್ರತಿಷ್ಠಾನದ ವತಿಯಿಂದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಮುಧೋಳ ಹಿತರಕ್ಷಣಾ ಹೋರಾಟ ಸಮೀತಿಯೂ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡುತ್ತಿರುವುದು ಅನಿವಾರ್ಯ ವಾಗಿದೆ.ಈ ಸಮಸ್ಯೆಯನ್ನು ಜನಪ್ರತಿನಿಧಿಗಳು,ಅಧಿಕಾರಿಗಳು ಅರಿತು ಕ್ರಮೇಣ ಹಂತ ಹಂತವಾಗಿ ಈ ಮೊದಲೆ ಮಾಡಿದ್ದರೆ,ಈ ಹೋರಾಟ ಅವಶ್ಯಕತೆ ಇರುತ್ತಿರಲಿಲ್ಲ. ನಗರದ ಹೊರವಲಯದ ಬೈಪಾಸ್ ಹಾಗೂ ನಗರದಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ ರಸ್ತೆಗಳನ್ನು ಮಾಡಿದ್ದರೆ, ಹೋರಾಟ ಮಾಡುವುದು ಬರುತ್ತಿರಲಿಲ್ಲ. ಆಗಲೇ ನಗರದಲ್ಲಿ ಆಗುತ್ತಿರುವ ಅಪಘಾತಗಳು, ವಯೋವೃದ್ಧರು ನಡೆದಾಡಿಕೊಂಡು ಹೋಗಲಿಕ್ಕೆ ಹಾಗೂ ಮಕ್ಕಳು ದಿನಾಲು ಶಾಲೆಯಿಂದ ಭಯವಿಲ್ಲದೇ ನಡೆದುಕೊಂಡು ಮನೆಗೆ ಬಂದು ಸೇರುವ ಸಮಸ್ಯೆ ಇತ್ಯಾದಿ ನಗರ ಕ್ಕೆ ಅವಶ್ಯಕತೆ ಇರುವ ಮೂಲಭೂತ ಸೌಲಭ್ಯಗಳನ್ನು ಪಡೆಯಲು ನಾವೆಲ್ಲರೂ ಸೇರಿಕೊಂಡು ಹೋರಾಟದ ಮೂಲಕ ಪಡೆಯದೇ ಅನ್ಯ ತಾಮಾರ್ಗವಿಲ್ಲದಂತಾಗಿದೆ. ಕೂಡಲೇ ರಸ್ತೆ ನಿಮರ್ಾಣ ಕಾರ್ಯ ಅತ್ಯಂತ ಶೀಘ್ರ ಗತಿಯಲ್ಲಿ ಮಾಡಿದರೆ,ನಗರದ ಸಂಚಾರ ಸುಗಮವಾಗು ವುದಲ್ಲದೇ ನೆಮ್ಮದಿಯಿಂದ ಎಲ್ಲರೂ ಜೀವಿಸಬಹುದು ಎಂದು ಹೇಳಿದರು. ಉಪಾಧ್ಯಕ್ಷ ಶ್ರೀಶೈಲ ತಾಂಬೋಳಿ ಅವರು ನಗರದಲ್ಲಿಯ ಸಮಸ್ಯೆಗಳನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶಂಕರ ಕಮತಗಿ,ಸಂತೋಷ ಹಜೇರಿ, ನಿತೀನ ಘೋರ್ಪಡೆ, ಸದಾಶಿವ ಮಜ್ಜಗಿ, ಮಂಜು ಮುಂಡಗನೂರ, ಮುತ್ತು ಮೇತ್ರಿ, ಬಸು ಮುಂಡಗನೂರ, ಚೈತನ ಉಳ್ಳಾಗಡ್ಡಿ, ಚೈತನ ದೇವರಮನಿ, ಸುನೀಲ ಸಕ್ರಿ,ಮಲ್ಲಿಕಾಜರ್ುನ ಗೋವಿಂದಪೂರಮಠ, ತಿಮ್ಮಣ್ಣ ಹಲಗತ್ತಿ, ಪಾಪು ಡಂಗಿ, ಸತೀಶ ಶಿಂಧೆ, ಸಚೀನ ಗಣಾಚಾರಿ, ಚಂದ್ರಕಾಂತ ಅಂಗಡಿ, ತಮ್ಮಣ್ಣಗೌಡ ಪಾಟೀಲ ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.