ಮುಂಡರಗಿ 18: ಭಾರತ ದೇಶ ಜ್ಯಾತ್ಯಾತೀತವಾದುದು. ಪ್ರಸ್ತುತ ಜಾತಿಯ ಗಣತಿಯನ್ನು ಮಾಡಿ, ಆರ್ಥಿಕವಾಗಿ ಹಿಂದುಳಿಕೆಯನ್ನು ಗುರುತಿಸುವುದನ್ನು ಬಿಟ್ಟು ಜಾತೀಯ ಆಧಾರದಲ್ಲಿ ಚೆಲ್ಲಾಟ ಆಡುತ್ತಿರುವುದು ಯೋಗ್ಯವಲ್ಲ ಎಂದು ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿ ಇದರಲ್ಲಿ ನಿಷ್ಪಕ್ಷಪಾತತನ ಉಳಿದಿಲ್ಲ. ನಾಡಿನಲ್ಲಿ ವೀರಶೈವರು ಬಹು ಸಂಖ್ಯಾತರಿದ್ದರೂ ಕೇವಲ 72 ಲಕ್ಷ ಎಂಬುದು ಪ್ರಸ್ತುತ ಸರಕಾರದ ಧೋರಣೆೆಯಾಗಿದೆ. ಇದು ಸೂಕ್ತವಲ್ಲ. ಸಮಾಜದ ಹಿರಿಯರ ಅನಿಸಿಕೆಯಂತೆ ವೀರಶೈವ-ಲಿಂಗಾಯತರು 1.50 ಕೋಟಿ ಜನರೆಂಬುದು ಗಣನೆ ಮಾಡಿದ್ದನ್ನೂ ನೋಡಿದರೆ ಸದ್ಯದ ವರದಿ ಅರ್ಥವಿಲ್ಲದ್ದು, ವೀರಶೈವ ಲಿಂಗಾಯತರು ಭಿನ್ನತೆಗೊಳಗಾಗಿ ಸಮಾಜದ ಹಿನ್ನೆಡೆಗೆ ಕಾರಣವಾಗಿದೆ. ಆದ್ದರಿಂದ ವೀರಶೈವ-ಲಿಂಗಾಯತರು ಒಳಪಂಗಡದವರಲ್ಲ,ಒಟ್ಟುಗೂಡಿ ಗಣನೆಗೆ ಬಂದಾದರೆ ಸಮಾಜದ ಮಕ್ಕಳಿಗೆ ಕಲ್ಯಾಣವಾಗುವುದು ಮತ್ತು ಸಮಾಜಕ್ಕೂ ಸಹಕಾರಿಯಾಗುವುದು. ಸಮಾಜಬಾಂಧವರು ಐಕತೆಯನ್ನು ಸಾಧಿಸಲಿ. ಒಳಪಂಗಡವನ್ನು ಮರೆತು ವೀರಶೈವ-ಲಿಂಗಾಯತರು ಬಾಂಧವರೆಲ್ಲರೂ ಒಗ್ಗಟ್ಟನ್ನು ಸಾಧಿಸಿ ಸಮಾಜದ ಹಿತವನ್ನು ಕಾಪಾಡುವಂತಾಗಲಿ ಎಂದು ಹಾರೈಸಿದ್ದಾರೆ.