ಸುಭಾಷಚಂದ್ರ ಭೋಸರನ್ನು ನಾವೆಲ್ಲ ಮರೆತಿರುವುದು ವಿಷಾದದ ಸಂಗತಿ: ಕುಂದರಗಿ
ಅಥಣಿ 24: ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಸುಭಾಷಚಂದ್ರ ಭೋಸರನ್ನು ಸ್ವತಂತ್ರ ಭಾರತದಲ್ಲಿ ನಾವೆಲ್ಲ ಮರೆತಿರುವುದು ವಿಷಾದದ ಸಂಗತಿ ಎಂದು ಹಿರಿಯ ನ್ಯಾಯವಾದಿ ಕೆ.ಎಲ್.ಕುಂದರಗಿ ಹೇಳಿದರು.
ಅವರು ನ್ಯಾಯವಾದಿ, ಯುವ ಧುರೀಣ ಡಿ.ಬಿ.ಠಕ್ಕಣ್ಣವರ ಕಛೇರಿಯಲ್ಲಿ ಅಧಿವ್ಯಕ್ತ ಪರಿಷತ್ ಅಥಣಿ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ನೇತಾಜಿ ಸುಭಾಷಚಂದ್ರ ಭೋಸ್ ಜನ್ಮ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸುಭಾಷಚಂದ್ರ ಭೋಸ್ ಸ್ಚಾತಂತ್ರ್ಯಕ್ಕಾಗಿ ಅನೇಕ ವರ್ಷಗಳ ಕಾಲ ಹೋರಾಟ ಮಾಡಿದ್ದರು. ಕ್ರಾಂತಿಯ ಮೂಲಕವೇ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೆ ಹೊರತು ಸತ್ಯಾಗ್ರಹ ಅಥವಾ ಶಾಂತಿಯುತ ಹೋರಾಟದಿಂದ ಅಲ್ಲ ಎಂದು ಪ್ರತಿಪಾದಿಸುತ್ತಿದ್ದ ಇವರು ತಮ್ಮ ಇಡೀ ಜೀವನವನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರಲ್ಲಿ ಇವರು ಒಬ್ಬರು ಹೀಗಾಗಿ ಭಾರತೀಯರ ಮನಸ್ಸಿನಲ್ಲಿ ಇಂದಿಗೂ ಅಜರಾಮರವಾಗಿದ್ದಾರೆ ಎಂದರು. ನ್ಯಾಯವಾದಿ ಡಿ.ಬಿ.ಠಕ್ಕಣ್ಣವರ ಮಾತನಾಡಿ, ಸುಭಾಷಚಂದ್ರ ಭೋಸ್ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು, ಅವರ ಹೋರಾಟ, ಜೀವನ ದರ್ಶನ ನಮಗೆಲ್ಲ ಮಾದರಿ ಎಂದು ಹೇಳಿದರು.
ವಿದೇಶದ ನೆಲದಲ್ಲಿ ಸ್ವತಂತ್ರ ಸೈನ್ಯ ಕಟ್ಟಿ ಬ್ರಿಟಿಷ್ ರ ವಿರುದ್ಧ ಹೋರಾಡಿದರು ಆದರೆ ಅಂದಿನ ಕಾಂಗ್ರೆಸ್ ನಾಯಕರು ಕುತಂತ್ರದಿಂದ ಸುಭಾಷಚಂದ್ರ ಭೋಸ್ ರ ಶಕ್ತಿಯನ್ನು ಕುಗ್ಗಿಸಿದರು ಎಂದ ಅವರು ನಮಗೆಲ್ಲ ನೇತಾಜಿಯವರ ಆದರ್ಶ ನಮಗೆಲ್ಲ ಮಾದರಿ ಎಂದರು. ನ್ಯಾಯವಾದಿ ಸುಶೀಲಕುಮಾರ ಪತ್ತಾರ ಮಾತನಾಡಿ, ತೀವೃಗಾಮಿಯಾಗಿದ್ದ ನೇತಾಜಿ ಸುಭಾಷಚಂದ್ರ ಭೋಸ್ ಕ್ರಾಂತಿಯ ಮೂಲಕ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ತರಲು ಸಾಧ್ಯ ಎಂದು ನಂಬಿಕೆ ಇಟ್ಟವರಿದ್ದರು. ಸುಭಾಷಚಂದ್ರ ಭೋಸ್ ಮಂದಗಾಮಿಯಾಗಿದ್ದ ಮಹಾತ್ಮಾ ಗಾಂಧಿಯವರ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದರು ಹೀಗಾಗಿ ಎರಡು ಬಾರಿ ಅಖಿಲ ಭಾರತ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದ್ದರೂ ಕೂಡ ಕಡೆಗಣನೆ ಮಾಡಲಾಯಿತು ಎಂದ ಅವರು ಈ ದೇಶದಿಂದ ಹೊರಗೆ ಹೋಗಿ ಆಝಾದ ಹಿಂದ ಸೈನ್ಯ ಸಂಘಟಿಸಿದರು ಎಂದರು.
ಅಧಿವ್ಯಕ್ತ ಪರಿಷತ್ ನ ಚಿದಾನಂದ ಸಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾಗವಾಡ ವಕೀಲರ ಸಂಘದ ಅಧ್ಯಕ್ಷ ಪಿ.ಎ.ಮಾನೆ ಮಾತನಾಡಿದರು.
ನ್ಯಾಯವಾದಿ ರಾಜು ದರೂರ ನಿರೂಪಿಸಿದರು, ನ್ಯಾಯವಾದಿ ಎನ್.ಆರ್.ನಡುವಿನಮನಿ ವಂದಿಸಿದರು, ನ್ಯಾಯವಾದಿಗಳಾದ ಎಸ್.ಎಸ್.ಸೂರ್ಯವಂಶಿ, ಎಸ್.ಆರ್.ಕುಂಬಾರ, ವಸಿಷ್ಠ ಹುದ್ದಾರ, ಬಸವರಾಜ ಢಂಗಿ, ಎಮ್.ಆರ್.ಯಂಕಚ್ಚಿ, ಎನ್.ಬಿ.ತೆರದಾಳ, ಆರ್.ಎಸ್.ಪಾಂಡವ, ವಿನಯ ಪಾಟೀಲ, ಗಣೇಶ ಪೂಜಾರಿ, ಜಿ.ಡಿ.ಹಿರೇಮಠ, ಸಂತೋಷ ಮಡಿವಾಳ, ರವಿಕಿರಣ ನಡೋಣಿ, ಮಲ್ಲಿಕಾರ್ಜುನ ಹಿರೇಮಠ,