ಬೆಳೆವಿಮೆ ಪರಿಹಾರ ಚೆಕ್ ವಿತರಣೆ

ಲೋಕದರ್ಶನವರದಿ

ರಾಣೇಬೆನ್ನೂರು.19: ತಾಂತ್ರಿಕ ದೋಷದಿಂದಾಗಿ 2015-16 ನೇ ಸಾಲಿಗಾಗಿ ತಡವಾಗಿ  ಬಿಡುಗಡೆಯಾದ ತಾಲೂಕಿನ ಹೊನ್ನತ್ತಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಎತ್ತಿನಹಳ್ಳಿ ಗ್ರಾಮದ ಬೆಳೆವಿಮೆಯ ಅಂದಾಜು 1.30ಕೋಟಿ ರೂ. ಮೊತ್ತದ ಪರಿಹಾರದ ಚೆಕ್ಗಳನ್ನು  ಬುಧವಾರ ಇಲ್ಲಿನ ಕೆಸಿಸಿ ಬ್ಯಾಂಕ ಸಭಾಭವನದಲ್ಲಿ 215 ಫಲಾನುಭವಿಗಳಿಗೆ ವಿತರಿಸಲಾಯಿತು.

     ಚೆಕ್ ವಿತರಿಸಿ ಮಾತನಾಡಿದ ಜಿಪಂ ಸದಸ್ಯ ಏಕನಾಥ ಬಾನುವಳ್ಳಿಯವರು  ನಿರಂತರವಾದ ಹೋರಾಟದ ಫಲವಾಗಿ ಈ ಪರಿಹಾರ ಲಭಿಸಿದ್ದು ರೈತರಿಗೆ ಸಂದ ಜಯವಾಗಿದೆ ಎಂದರು. ಕೆಸಿಸಿ ಬ್ಯಾಂಕ್ ನಿದರ್ೇಶ ಬಸನಗೌಡ ಪಾಟೀಲ, ವ್ಯವಸ್ಥಾಪಕ ರುದ್ರಪ್ಪ ಎ, ನಿರೀಕ್ಷಕ ಆರ್, ನಟರಾಜ, ಸಹಾಯಕ ಕೃಷಿ ನಿದರ್ೇಶಕ ಎಚ್.ಪಿ.ಗೌಡಪ್ಪಗೌಡ್ರ, ಚಂದ್ರಯ್ಯ ಹಿರೇಮಠ ಸೇರಿದಂತೆ ರೈತರು ಮತ್ತಿತರರು ಇದ್ದರು.