ಸಂಬರಗಿ 10: ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಹಾಗೂ ಅಮ್ಮಜೇಶ್ವರಿ ಏತ ನೀರಾವರಿ ಕಾಮಗಾರಿ ಶೀರ್ಘದಲ್ಲಿ ಪೂರ್ಣಗೊಳಿಸಿ ಅಥಣಿ ಉತ್ತರ ಮತ್ತು ಪೂರ್ವ ಭಾಗ ಹಸಿರು ಕ್ರಾಂತಿ ಮಾಡಿ ತೀರುತ್ತೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಲಿ ಶಾಸಕರು ಲಕ್ಷ್ಮಣ ಸವದಿ ಹೇಳಿದರು.
ಅರಳಿಹಟ್ಟಿ ಗ್ರಾಮದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಮೊದಲನೆ ಹಂತದಲ್ಲಿ ಅರಳಿಹಟ್ಟಿ ಕೆರೆಗೆ ನೀರು ತಲುಪಿದ ನಂತರ ಬಾಗಿನ ಅರೆ್ಣ ಮಾಡಿ ಪೂಜಾ ಸಲ್ಲಿಸಿ ಮಾತನಾಡಿ ಅವರು ಹಲವಾರು ವರ್ಷಗಳಿಂದ ಬರಗಾಲ ಪೀಡಿತ ಗ್ರಾಮದ ಈ ಯೋಜನೆ ಅತ್ಯಂತ ಮಹತ್ವದಾಗಿತ್ತು. ಸರಕಾರ ಮಟ್ಟದಲ್ಲಿ ಹಲವಾರುಬಾರಿ ಗನಮ ಸೆಳೆದ ನಂತರ ಅನುದಾನ ಬಿಡುಗಡೆಯಾಗಿ ಮೊದಲನೆ ಹಂತದ ಕಾಮಗಾರಿ ಪೂರ್ಣಗೊಂಡು ಗಡಿಭಾಗಕ್ಕೆ ನೀರು ತಲುಪಿದೆ. ಇನ್ನೂಳಿದ ಕಾಮಗಾರಿ ಪೂರ್ಣಗೊಂಡು ಜೂನ್ ಒಳಗಾಗಿ ನೀರು ಹರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅದೆ ಪ್ರಕಾರ ಪೂರ್ವ ಭಾಗದ ಮಹಾರಾಷ್ಟ್ರದ ಸಿಂಧೂರ ಗ್ರಾಮ ಹತ್ತಿರ ಕರ್ನಾಟಕದಲ್ಲಿ ಇರುವ ಕೆರೆಗೆಳು ತುಂಬಿ ಎರಡು ಕ್ಷೇತ್ರವನ್ನು ಹಸಿರು ಕ್ರಾಂತಿ ಮಾಡಲಾಗುವುದು.
ಶಾಸಕ ರಾಜು ಕಾಗೆ ಮಾಡನಾಡಿ ನಾವು ಚುನಾವಣೆ ಆಸೆಕ್ಕಾಗಿ ಕೆಲಸ ಮಾಡುತ್ತಿಲ್ಲ. ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇವೆ. ರೈತರು ಸಂತೋಷ ಇದ್ದರೆ, ನಾವು ಸಂತೋಷವಿರುತ್ತೇವೆ. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಇನ್ನೂಳಿದ ಕಾಮಗಾರಿ ಪೂರ್ಣಗೊಳಿಸುತ್ತೇವೆ. ರೈತರಿಗೆ ಹಾಗೂ ಮತದಾರರಿಗೆ ನಾವು ಹೇಳುವ ಅವಶ್ಯಕತೆ ಇಲ್ಲ. ಯಾರಿಗೆ ಮುಂದುವರೆಯ ಬೇಕು, ಯಾರಿಗೆ ಮನೆಗೆ ಕಳುಹಿಸಬೇಕು ಜನರ ಕೈಯಲ್ಲಿ ಜುಟ್ಟು ಇದ್ದಾವೆ ಎಂದು ಹೇಳಿದರು.
ಈ ವೇಳೆ ಮಹಾರಾಷ್ಟ್ರದ ಮಹಾಂಕಾಳಿ ಸಕ್ಕರೆ ಕಾರ್ಖಾನೆ ಕವಟೆಮಾಹಾಂಕಾಳ ಅಧ್ಯಕ್ಷರಾದ ಅನೀತಾ ಸಗರೆ, ವಿನಾಯಕ ಬಾಗಡಿ, ಖಂಡೆರಾವ ಗೋರೆ್ಡ, ಅಣ್ಣಾಸಾಬ ನಿಸಾಳ, ಬಸವರಾಜ ಅಂಗಡಿ, ಶಿವಾನಂದ ತೇಲಿ, ಪಿ.ಕೆ.ಪಿ.ಎಸ್. ಅಧ್ಯಕ್ಷ ನಿಜಗುನಿ ಮಗದುಮ್, ತಾನಾಜಿ ಶಿಂಧೆ. ವಿಶಾಲ ನಿಂಬಾಳ, ಸಂಜಯ ಅದಾಟಿ ಇನ್ನೀತರರು ಉಪಸ್ಥಿತರಿದ್ದರು.
ಅರಳಿಹಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರು ಬಸವರಾಜ ಪಾಟೀಲ ಮಾತನಾಡಿ ಸತತವಾಗಿ 70 ವರ್ಷಗಳಿಂದ ಈ ಗ್ರಾಮಕ್ಕೆ ನೀರಿಗಾಗಿ ಪರದಾಡುವ ಸ್ಥಿತಿ ಇತ್ತು. ಶಾಸಕ ಲಕ್ಷ್ಮಣ ಸವದಿ, ಶಾಸಕ ರಾಜು ಕಾಗೆ ಇವರ ಸತತ ಪ್ರಯತ್ನದಿಂದ 70 ವರ್ಷಗಳ ನಂತರ ಮೊದಲನೆ ಹಂತ ನೀರಾವರಿ ಯೋಜನೆಯಲ್ಲಿ ಅರಳಿಹಟ್ಟಿ ಗ್ರಾಮಕ್ಕೆ ನೀರು ಬಂದು ತಲುಪಿದೆ. ರೈತರು ಆನಂದ ವ್ಯಕ್ತಪಡಿಸಿದರು. ಎರಡನೆ ಹಂತ ಪೂರ್ಣಗೊಂಡ ನಂತರ ಶಾಸಕದ್ವಯರ್ಗೆ ಬಸವೇಶ್ವರ ದೇವರಿಗೆ ಅವರ ಹಸ್ತದಿಂದ ಜಲ ಪೂಜೆ ಮಾಡಿ ನಂತರ ಶಾಸಕರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.