ಬೆಳಗಾವಿ 10: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ ನಡೆಯಲಿರುವ 5ನೇ ಶಿಗ್ಗಾವಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ.ವಿಜಯಲಕ್ಷ್ಮೀ ತಿರ್ಲಾಪೂರ ಸನ್ಮಾನಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು.
ಪೆ. 11 ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹುಲಗೂರು ರಸ್ತೆಯ ಪಾದಗಟ್ಟೆಯಿಂದ ಚನ್ನಮ್ಮ ವೃತ್ತದ ಮೂಲಕ ಹಾಯ್ದು ಸಂಗನಬಸವ ಮಂಗಲ ಭವನ ವೇದಿಕೆಯಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಎರಡು ದಿನ ಅದ್ದೂರಿಯಾಗಿ ಸಮ್ಮೇಳನ ನಡೆಯಲಿದೆ ಎಂದು ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಪ್ಪ ಬೆಂತೂರ ತಿಳಿಸಿದರು.
ಡಾ. ವಿಜಯಲಕ್ಷ್ಮಿ ತಿರ್ಲಾಪೂರ ಬೆಳಗಾವಿಯ ಮರಾಠ ಮಂಡಲ್ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ಕಳೆದ ಎರಡು ವರ್ಷಗಳಿಂದ ನೂತನವಾಗಿ ಪ್ರಾರಂಭಗೊಂಡ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂಲತಃ ಬೆಳಗಾವಿಯ ಸಾಹಿತಿ ಚಿಂತಕಿ ವಿಮರ್ಶಕಿ ಮತ್ತು ಭಾಷಣಕಾರ್ತಿ ಆದಂತಹ ಅವರಿಗೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತವರು ಮನೆಯ ನೆಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 5ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷಯ ಪಟ್ಟ ಒಲಿದು ಬಂದಿರುವುದು ನಿಜಕ್ಕೂ ಬೆಳಗಾವಿಗರಿಗೆ ಸಂತಸ ತಂದಿದೆ. ಹತ್ತಾರು ಕೃತಿಗಳನ್ನು ಪ್ರಕಟಿಸಿ ನೂರಾರು ಲೇಖನಗಳನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಸಮಾವೇಶ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ, ರಮೇಶ ಹರಿಜನ, ಶಂಭು ಕೇರಿ, ಐ ಎಲ್ . ಬೊಸ್ಲೆ, ಲಲಿತಾ ಹಿರೇಮಠ , ಸಿ ಡಿ. ಯತ್ನಳ್ಳಿ, ಎಂ.ಬಿ. ಹಳೇಮನಿ, ಅಶೋಕ ಕಾಳೆ, ಸಂತೋಷ ಪಾಟೀಲ, ಶಂಕರ ಬಡಿಗೇರ, ಶಶಾಂಕ ಕೌಜಲಗಿ , ರವಿ ಕಡಕೋಳ, ಶಶಿಕಾಂತ ರಾಠೋಡ , ಸಂಜನಾ ರಾಯ್ಕರ, ಲಕ್ಷ್ಮೀ ಕೇರಿ, ಸುವರ್ಣ ಹಡಪದ ಹಾಗೂ ಬೆಳಗಾವಿ ಕಸಾಪ ಸದಸ್ಯರಾದ ನೀಲಗಂಗಾ ಚರಂತಿಮಠ , ಜ್ಯೋತಿ ಬಾದಾಮಿ , ವಾಸಂತಿ ಮೇಳೆದ , ಸುನಂದ ಎಮ್ಮಿ, ಇಂದಿರಾ ಮೋಟೆಬೆನ್ನೂರ್ , ಸುನಿತಾ ಸೊಲ್ಲಾಪುರ ಜೈ ಶೀಲಾ ಬ್ಯಾಕೋಡ್ , ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಹಾಂತೇಶ್ ಮೆಣಸಿನಕಾಯಿ,
ಭಾರತಿ ಮಠದ, ಲೇಖಕಿಯರ ಸಂಘದ ಅಧ್ಯಕ್ಷ ಸುಮಾ ಕಿತ್ತೂರ್ ಇತರರು ಇದ್ದರು.