5ರಿಂದ ಅಂತರರಾಜ್ಯ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿ

ಲೋಕದರ್ಶನ ವರದಿ

ಮೂಡಲಗಿ 3: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ  ಶ್ರೀ ಬಸವೇಶ್ವರ ಕಾತರ್ಿಕೋತ್ಸವ ನಿಮಿತ್ಯವಾಗಿ ಬೆಳಗಾವಿ ಜಿಲ್ಲಾ ಅಮೇಚೋರ ಕಬಡ್ಡಿಅಸೋಶೀಯಷನ್ ಸಹಯೋಗದೊಂದಿಗೆ ಹಾಗೂ ಬಸವೇಶ್ವರ ಸ್ಪೋಟ್ಸ್ ಕ್ಲಬ್ ಅರಳಿಮಟ್ಟಿ ಆಶ್ರಯದಲ್ಲಿ ಪುರುಷರ ಅಂತರರಾಜ್ಯ ಮಟ್ಟದ ಮುಕ್ತ ಕಬಡ್ಡಿಪಂದ್ಯಾವಳಿಗಳನ್ನು ಅರಳಿಮಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರದಲ್ಲಿ ಫೆ. 5 ಮತ್ತು 6 ರಂದು ಕಾಲ ಏರ್ಪಡಿಸಲ್ಲಾಗಿದೆ ಎಂದು ಸಂಘಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಪಂದ್ಯಾವಳಿಯ ವಿಜೇತರಿಗೆ ನಗದು ಬಹುಮಾನಗಳು ರೂ.30,001(ಪ್ರಥಮ), ರೂ.20,001(ದ್ವಿತೀಯ), ರೂ.10,001(ತೃತೀಯ), ರೂ.10,001(ಚತುರ್ಥ) ಹಾಗೂ ತಲಾ ಟ್ರೋಪಿ ನೀಡಲಾಗುವುದು. 

ಪಂದ್ಯಾವಳಿಯನ್ನು ಮ್ಯಾಟ್ ಮೇಲೆ ಆಡಿಸಲಾಗುವುದು, ಒಂದೇ ಊರಿನ ಆಟಗಾರರಾಗಿರಬೇಕು, ಪಂದ್ಯಾವಳಿಯನ್ನು ಪ್ರೋ ಹಾಗೂ ಎ.ಕೆ.ಎಫ್.ಎಲ್ ನಿಯಮದಂತೆ ಆಡಿಸಲಾಗುವುದು, ಆಟಗಾರರಿಗೆ ಊಟದವ್ಯವಸ್ಥೆ ಇರುತ್ತದೆ, 60 ಕೀ.ಮೀ ದೂರದಿಂದ ರುವ ತಂಡಗಳಿಗೆ ಪ್ರಯಾಣ ಬತ್ತೆ ಕೊಡಲಾಗುವುದು. ಕಾರಣ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ 8971062079 ಮತ್ತು 974139484 ಗೆ ಸಂಪಕರ್ಿಸ ಬಹುದು. 

ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಶ್ರೀ ಮಹಾಂತೇಶ ಸ್ವಾಮೀಜಿ ಮತ್ತು ಶ್ರೀ ದುಂಡಯ್ಯಾ ಸ್ವಾಮೀಜಿ ವಹಿಸುವರು, ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು, ಬಸಪ್ಪ ನಂದಗನ್ನವರ ಅಧ್ಯಕ್ಷತೆ ವಹಿಸುವರು. 

ಫೆ.6 ರಂದು ಜರುಗುವ ಕಾರ್ಯಕ್ರಮದಲ್ಲಿ ಕನರ್ಾಟಕ ಅಮೆಚೋರ ಕಬಡ್ಡಿ ಅಸೋಸಿಯನ್ ಸಂಘಟನಾ ಕಾರ್ಯದಶರ್ಿ  ಬಿ.ಸಿ.ರಮೇಶ, ಅಸೋಸಿಯನ್ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸಿ.ಎಸ್.ಬರಗಾಲಿ, ಸಂಘಟನಾ ಕಾರ್ಯದಶರ್ಿ ಎಲ್.ಕೆ.ತೋರನಗಟ್ಟಿ, ಅಸೋಸಿಯನ್ ನಿಣರ್ಾನಾಯಕ ಮಂಡಳ ಅಧ್ಯಕ್ಷ ಬಿ.ಸಿ.ಹಲರ್ಾಪೂರ ಮತ್ತಿತರು ಭಾಗವಹಿಸುವರು  ಎಂದು ಹನಮಂತ ಬಾಕರ್ಿ ತಿಳಿಸಿದ್ದಾರೆ.