ಲೋಕದರ್ಶನ ವರದಿ
ಧಾರವಾಡ 30: ಲಂಡನ್ದಲ್ಲಿ ನಡೆದ ಅಂತರಾಷ್ಟ್ರೀಯ ಟೇನಿಸ್ ವಿಂಬಲ್ಡನ್ ಟೂನರ್ಿಯಲ್ಲಿ ನಿಣರ್ಾಯಕರಾಗಿ ಒಂದು ತಿಂಗಳ ಕಾಲ ಕಾರ್ಯನಿರ್ವಹಿಸಿ ನಗರಕ್ಕೆ ಆಗಮಿಸಿದ, ರೋಹಿತ್ ಭಾಲಗಾಂವಿ ಅವರನ್ನು ರಜತಗಿರಿಯ ಯಲ್ಲಮ್ಮಾದೇವಿ ಹೌಸಿಂಗ್ ಸೊಸೈಟಿ ಹಾಗೂ ಅಲ್ಲಿಯ ಹಿರಿಯರು ಸೇರಿ ಆತ್ಮೀಯವಾಗಿ ಸನ್ಮಾನಿಸಿದರು.
ಅಭಿನಂದನಾಪರ ಭಾಷಣ ಮಾಡಿದ ಮಾಜಿ ರಾಷ್ಟ್ರೀಯ ಕ್ರೀಡಾಪಟು ಸುರೇಶ ಬೆಟಗೇರಿ, ಮನುಷ್ಯ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು. ಸತತ ಪ್ರಯತ್ನ ಪರಿಶ್ರಮದಿಂದ ಅಸಾಧ್ಯವಾದುದನ್ನು ಸಾಧಿಸಿ ತೋರಿಸಬಹುದು ಎನ್ನುದಕ್ಕೆ ಎಂಜನೀಯರಿಂಗ್ ಪದವಿಧರರಾದ ರೋಹಿತ್ ಅವರೇ ಉದಾಹರಣೆ. ಅವರು ಅಂತರಾಷ್ಟೀಯ ಟೆನಿಸ್ ನಿಣರ್ಾಯಕರಾಗಿ ಲಂಡನ್ಗೆ ಹೋಗಿ ಬಂದಿರುವದು ಹೆಮ್ಮೆಯ ವಿಷಯ. ರೋಹಿತ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ರೋಹಿತ್ ತಂದೆ ಸಂಗಮೇಶ ಭಾಲಗಾಂವಿ ಮಾತನಾಡಿ, ಮಗ ಅಂತರಾಷ್ಟೀಯ ನಿಣರ್ಾಯಕನಾಗಿ ಹೋಗಿದ್ದು ಸಂತೋಷದ ಸಂಗತಿ. ಸದಾಕಾಲ ಭಾರತಕ್ಕೆ ಕೀತರ್ೀ ತರುವ ಸಾಧನೆಯನ್ನು ರೋಹಿತ್ ಮಾಡಲಿ ಎಂದರು. ನೀಲಕಂಠ ದೊಡಮನಿ, ಲಕ್ಷ್ಮಣ ಮಿಶ್ರೀಕೋಟಿ, ತೇಜಪ್ಪಾ ದೊಡವಾಡ, ಸುರೇಶ ಬೆಟಗೇರಿ, ರಾಮು ಸವದತ್ತಿ, ನಾಗೇಶ ಸಜರ್ಾಪೂರ, ನೀಲಕಂಠ ದೂಡಮನಿ, ಕುಬೇರ ಹೊಂಗಲ, ಕೃಷ್ಣಾ ಸಾಂಬ್ರಾಣಿ, ದೇವದಾಸ ಸಾಂಬ್ರಾಣಿ, ವಿರುಪಾಕ್ಷಿ ಗಾಮನಗಟ್ಟಿ, ಬಾಬು ಕದಂ, ಪ್ರಕಾಶ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.