ನೂತನ ಡಿಪೋ ನಿಮರ್ಾಣ ಕಾಮಗಾರಿ ಅಧಿಕಾರಿಗಳ ಪರಿಶೀಲನೆ

ಲೋಕದರ್ಶನ ವರದಿ

ಬೈಲಹೊಂಗಲ 22:  ಪಟ್ಟಣದ ಕೇಂದ್ರ ಬಸ್ ನಿಲ್ಧಾಣಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಆಕಸ್ಮಿಕವಾಗಿ ಭೇಟಿ ನೀಡಿ 4 ಕೋಟಿ ರೂ.ವೆಚ್ಚದಲ್ಲಿ ನಿಮರ್ಾಣಗೊಳ್ಳುತ್ತಿರುವ ನೂತನ ಡಿಪೋ ಕಾಮಗಾರಿಗಳನ್ನು ಪರೀಶಿಲಿಸಿದರು.

      ಸಚಿವ ಡಿ.ಸಿ.ತಮ್ಮಣ್ಣ ಧಾರವಾಡ, ಬೆಳಗಾವಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಹತ್ತಿ ಪ್ರಯಾಣಿಕರೊಂದಿಗೆ ಸಮಾಲೋಚನ ನಡೆಸಿದರು. ಬಸ್ ಚಾಲಕ, ನಿವಾರ್ಹಕರು ತಮ್ಮೊಂದಿಗೆ ನಡೆದುಕೊಳ್ಳುವ ರೀತಿ, ಬಸ್ಸಿನ ಸ್ವಚ್ಚತೆ ಬಗ್ಗೆ ಚಚರ್ಿಸಿದರು. ಕೆಲ ಬಸ್ಸಿನಲ್ಲಿದ್ದ ಗುಟ್ಕಾ ಪ್ಯಾಕೇಟ್, ಕಸ ನೋಡಿ ಬೇಸರ ವ್ಯಕ್ತಪಡಿಸಿದರು. ಸಕರ್ಾರ ಸಾರಿಗೆ ಇಲಾಖೆಗಳ ಪ್ರಗತಿಗೆ ಕೋಟ್ಯಾಂತರ ರೂ.ಹಣ ಖಚರ್ು ಮಾಡುತ್ತಿದೆ. ಬಸ್ಸಿನ ಚಾಲಕ, ನಿವಾರ್ಹಕರು, ಸಿಬ್ಬಂದಿ ಬಸ್ಸುಗಳನ್ನು ಸುವ್ಯವಸ್ಥೆಯಲ್ಲಿಟ್ಟುಕೊಂಡು ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಸಕರ್ಾರಿ ಬಸ್ಸ್ ಏರಿದ ಪ್ರಯಾಣಿಕರು ಯಾವುದೇ ಕಾರಣಕ್ಕೂ ಬಸ್ಸ್, ಸಾರಿಗೆ ಇಲಾಖೆಯನ್ನು ದುಸಿಸಬಾರದು. ಪ್ರತಿಯೊಬ್ಬ ನೌಕರರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವತರ್ಿಸಿ ನಾಗರಿಕರ ಪ್ರೀತಿ, ವಿಶ್ವಾಸಕ್ಕೆ ಭಾಜನರಾಗಬೇಕು ಎಂದರು. 

      ಸಾರಿಗೆ ಘಟಕದ ಸುತ್ತಮುತ್ತ ಸಂಚರಿಸಿ ಸ್ವಚ್ಚತೆ, ಖಾಸಗಿ ಬ್ಯಾನರ್, ಪೋಸ್ಟರ್ ಅಳವಡಿಸಿದ್ದು ಕಂಡು ಕೂಡಲೇ ತೆರವುಗೊಳಿಸಬೇಕು ಎಂದು ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರು. ಸಿಬ್ಬಂದಿಗಳಿಗೆ ವಿಶ್ರಾಂತಿ ಗೃಹ, ಶಡ್ಡಗಳನ್ನು ಎತ್ತರಿಸುವದು, ಡಿಫೋ ಹಿಂದಿನ ಕೊಳಚೆ ಪ್ರದೇಶದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಅದರಲ್ಲಿ ಬೆಡ್ ಕಾಂಕ್ರೀಟ್ ಹಾಕಿಸಿ ಯಾವುದೇ ತೊಂದರೆ ಆಗದಂತೆ ಜಾಗೃತಿವಹಿಸಬೇಕು. ಗಟಾರ ನಿಮರ್ಿಸುವದು. ಕಂಪೌಂಡ್ ಹಾಲ್ ಎತ್ತಿರಿಸಬೇಕು. ಮುಂದಿನ ದಿನಗಳಲ್ಲಿ ಘಟಕದ ಎಲ್ಲಾ ಸಿಬ್ಬಂದಿಗಳಿಗೆ ಬೈಲಹೊಂಗಲ ಹೊರ ವಲಯದಲ್ಲಿ ವಸತಿ ಗೃಹ ನಿಮರ್ಿಸಿಕೊಡಲಾಗುವದು ಎಂದರು. ಕಾಮರ್ಿಕರು ಸಚಿವರೊಂದಿಗೆ ಮಾತನಾಡಿ, ವೇತನದಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು. ಸಿಬ್ಬಂದಿಗೆ ಕೊಡುವ ಬಾಕಿ ಸಂಬಳವನ್ನು ಶೀಘ್ರವಾಗಿ ವಿತರಿಸಬೇಕು. ಬರತಕ್ಕ ಎಲ್ಲಾ ಬಾಕಿ ಹಣವನ್ನು ನೀಡಬೇಕು ಎಂದು ಮನವಿ ಮಾಡಿದರು. ಕಾಮರ್ಿಕರ ಮನವಿಗೆ ಸ್ಪಂದಿಸಿದ ಸಚಿವರು ಬೇಡಿಕೆಗಳನ್ನು ಈಡೇರಿಸುವದಾಗಿ ಭರವಸೆ ನೀಡಿದರು. ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾ ಪಂಚಾಯ್ತಿ ಸದಸ್ಯ ಶಂಕರ ಮಾಡಲಗಿ, ಸಾರಿಗೆ ಇಲಾಖೆ ಅಧಿಕಾರಿ ನಾಯ್ಕ, ಎಇಇ ಕುಲಕಣರ್ಿ, ಡಿಸಿ ಮಹಾದೇವ ಮುಂಜಿ, ಘಟಕ ವ್ಯವಸ್ಥಾಪಕ ಎ.ಎಂ.ಮುಜಾವರ, ಜಾಗೃತಾ ಅಧಿಕಾರಿ ಜಗದೀಶ ಕೋಳಿ, ವಿಭಾಗೀಯ ಭದ್ರತಾ ನಿರೀಕ್ಷಕ ಎಸ್.ಎಲ್.ಮಲಕಪ್ಪನವರ, ಟ್ರಾಫೀಕ್ ಇನ್ಸ್ ಪೆಕ್ಟರ್ ಎಂ.ಎಂ.ಆನಿಕಿವಿ, ಕಾಮರ್ಿಕರಾದ ಸುರೇಶ ಯರಡ್ಡಿ, ಸುಭಾಸ ರುದ್ರಪೂರ, ಗೌಸ ಕಿತ್ತೂರ, ಪ್ರಕಾಶ ಸೊಗಲ ಇದ್ದರು.