ಲೋಕದರ್ಶನ ವರದಿ
ಅಥಣಿ 15: ಪಟ್ಟಣದ ಕನರ್ಾಟಕ ಕೋ ಆಫ್ ಕ್ರೀಡೇಟ್ ಸೋಸೈಟಿ ಸೇರಿದಂತೆ ಇದರ 10 ಕ್ಕು ಹೆಚ್ಚು ಶಾಖೆಗಳಲ್ಲಿ ಗ್ರಾಹಕರು ಶ್ರಮ ವಹಿಸಿ ಕೂಡಿಟ್ಟ ಠೆವಣಿ ಹಣ ಅವಧಿ ಮುಗಿದರು ಠೇವಣಿ ದಾರರಿಗೆ ಮರಳಿಸಲಾರದೆ ಕಳೆದ ಎರಡು ವರ್ಷಗಳಿಂದ ಸತಾಯಿಸುತ್ತಿರುವುದನ್ನು ವಿರೋಧಿಸಿ ಹಣ ವಂಚಿತ ನೂರಾರು ಠೇವಣಿ ದಾರರು ಠೇವಣಿ ಮರಳಿ ನೀಡುವಂತೆ ಒತ್ತಾಯಿಸಿದರು.
ಅವರು ಪಟ್ಟಣದ ಫಾರೇಸ್ಟ್ ಗಾರ್ಡನ್ನಲ್ಲಿ ಸಭೆ ನಡೆಸಿ ಸಹಕಾರ ಸಂಘದ ಕ್ರಮವನ್ನು ಖಂಡಿಸಿ ಠೇವಣಿ ಹಣವನ್ನು ಮರಳಿಸುವಂತೆ ಒತ್ತಾಯಿಸಿ ಠೇವಣಿ ಹಣ ವಂಚಿತ ಎಸ್.ಎಮ್.ಗುರುಸ್ವಾಮಿ ಮಾತನಾಡಿ, ಶ್ರಮ ವಹಿಸಿ ಜೀವನೋಪಯೋಗಕ್ಕಾಗಿ ಕೂಡಿಟ್ಟ ಠೇವಣಿ ಹಣವನ್ನು ಅಥಣಿಯ ಕನರ್ಾಟಕ ಕೋ ಆಫ್ ಕ್ರೀಡೆಟ್ ಸೋಸೈಟಿ ತನ್ನ ಗ್ರಾಹಕರಿಗೆ ನೀಡಲಾರದೆ ವಂಚಿಸುತ್ತಿದೆ. ಇದರಿಂದ ಠೇವಣಿದಾರರು ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆ ಮುಂಜಿವೆಗಳಿಗೆ ಹಣ ವಿಲ್ಲದೆ ಪರದಾಡುವಂತಾಗಿದೆ. ಎಲ್ಲ ಠೇವಣಿದಾರರು ಸುಮಾರು 60 ಕೋಟಿಗೆ ಹೆಚ್ಚು ಠೇವಣಿಯನ್ನು ಈ ಸೋಸೈಟಿಯಲ್ಲಿ ಠೆವಣಿಯಾಗಿ ಇಟ್ಟಿದ್ದಾರೆ. ಆದರೆ ಈಗ ಠೇವಣಿ ಕೇಳಲು ಹೋದರೆ ಬ್ಯಾಂಕ್ ಮುಚ್ಚಲಾಗಿದೆ ಮತ್ತು ಬ್ಯಾಂಕಿನ ಮ್ಯಾನೇಜರ್ ಹಾಗೂ ಆಡಳಿತ ಮಂಡಳಿ ಸದಸ್ಯರ್ಯಾರು ಕಾಣದಾಗಿದ್ದಾರೆ. ಇವರೆಲ್ಲ ಸೇರಿ ಹಣವನ್ನು ತೆಗೆದುಕೊಂಡು ಫರಾರಿ ಆಗಿದ್ದಾರೆ ಎಂಬ ಸಂಶಯ ಮೂಡಿತ್ತಿದೆ, ಅಲ್ಲದೆ ನಮ್ಮ ಯಾವುದೇ ಕರೆಗೆ ಸಿಗದಾಗಿದ್ದಾರೆಂದು ದೋರಿದ ಅವರು ನಾವು ಇಟ್ಟ ಠೇವಣಿ ಹಣವನ್ನು ಮರಳಿಸದೆ ಹೋದರೆ ಮುಂದೆ ಬರುವ ದಿನಗಳಲ್ಲಿ ಸಂಭಂದ ಪಟ್ಟ ಕಛೇರಿ, ತಹಶೀಲ್ದಾರ ಆಫೀಸ್ ಹಾಗೂ ಸೋಸೈಟಿ ಮುಂದೆ ಉಗ್ರ ಹೋರಾಟ ಮಾಡಬೇಕಾದಿತು ಎಂದು ಎಚ್ಚರಿಸಿದರು.
ಅಥಣಿ ಪಟ್ಟಣದಲ್ಲಿ ಅನೇಕ ಸಹಕಾರಿ ಹಾಗೂ ಖಾಸಗಿ ಬ್ಯಾಂಕಗಳು ತನ್ನ ಗ್ರಾಹಕರನ್ನು ವಂಚಿಸುವಂತಹ ಕಾರ್ಯವನ್ನು ಮಾಡುತ್ತಿದ್ದರೂ ಸಹ ಇವುಗಳ ಕಡೆ ಲಕ್ಷ ವಹಿಸದೆ ಸಹಕಾರಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಕರ್ಾರ ಕಣ್ಣು ಮುಚ್ಚಿ ಕುಳಿತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ ಎಂದರು.
ಈ ವೇಳೆ ಪಿ.ಡಿ.ಹರಳೆ ಮಾತನಾಡಿದರು. ಎ.ಎಸ್.ಗುಂಡಾ, ಎಲ್.ಡಿ.ಪುಟಾಣಿ, ಶ್ರೀಧರ ಕುಲಕಣರ್ಿ, ಎಸ್.ಆರ್.ಕಾಡಪ್ಪನ್ನವರ, ಎಸ್.ಆರ್.ಪಾಟೀಲ, ಬಿ.ಎ.ಪಾಟೀಲ, ಗಜಾನನ ಕುಂದರಗಿ, ಆರ್.ಡಿ.ಬಾಗೇನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
****