ಖಾದ್ರಿಯಿಂದ ಪಾಲನಾ ಕೇಂದ್ರ ಮಕ್ಕಳ ಯೋಗಕ್ಷೇಮ ವಿಚಾರಣೆ
ಲೋಕದರ್ಶನ ವರದಿ
ಶಿಗ್ಗಾವಿ 28 :ತಾಲೂಕಿನ ಕಡಹಳ್ಳಿ ಕ್ರಾಸ್ ಹತ್ತಿರಇರುವ ಭೂ ಕೈಲಾಸ ಮಠದಲ್ಲಿರುವ ಮಕ್ಕಳ ಪಾಲನಾ ಕೇಂದ್ರಕ್ಕೆಇಂದು ಹೆಸ್ಕಾಂ ಅಧ್ಯಕ್ಷ ಸೈಯದ್‌ಅಜ್ಜಿಂಪೀರ್‌ಖಾದ್ರಿಯವರು ಭೇಡಿ ನೀಡಿ ಪಾಲನಾ ಕೇಂದ್ರದಲ್ಲಿರುವ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ನಂತರ ಮಕ್ಕಳ ಪಾಲನಾ ಕೇಂದ್ರದಿಂದ ಸೋಲಾರ ದೀಪಗಳನ್ನು ಅಳವಡಿಸುವಂತೆ ಖಾದ್ರಿಯವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದಅಣ್ಣಪ್ಪ ಲಮಾಣಿ, ರುದ್ರೇಶಗುಡಗೇರಿ, ಬಿರೇಶಜಟ್ಟಪ್ಪನವರ ಸೇರಿದಂತೆ ಪಾಲನಾ ಕೇಂದ್ರದ ಮುಖ್ಯಸ್ಥರು ವಿದ್ಯಾರ್ಥಿಗಳು ಇದ್ದರು.