ವಿಜಯಪುರ: ಡಿ.07- ಬಡತನ ರೇಖೆಗಿಂತ ಕೆಳಗಿರುವ ಜನರ ಅನುಕೂಲಕ್ಕಾಗಿ ರಾಜ್ಯ ಸಕರ್ಾರವು ರಾಜ್ಯದಾದ್ಯಂತ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್ ಎಲ್ಲರ ಗಮನ ಸೆಳೆದಿದ್ದು, ವಿಜಯಪುರ ನಗರದಲ್ಲಿಯೂ ಸಹ ಇಂದು ಇಂದಿರಾ ಕ್ಯಾಂಟೀನನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ತೋಟಗಾರಿಕೆ ಖಾತೆ ಸಚಿವರಾದ ಎಂ.ಸಿ.ಮನಗೂಳಿ ಅವರು ಉದ್ಘಾಟಿಸಿದರು.
ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಸ್ಥಾಪಿಸಲಾದ ಇಂದಿರಾ ಕ್ಯಾಂಟಿನ್, ಜನಸುವಿಧಾ ಆಪ್ನ್ನು ಸಹ ಸಚಿವರು ಇಂದು ಉದ್ಘಾಟಿಸಿ ಮಾತನಾಡಿ, ರಾಜ್ಯ ಹಾಗೂ ಜಿಲ್ಲೆಯ ಬಡಜನರ ಅನುಕೂಲಕ್ಕಾಗಿ ಈ ಹಿಂದಿನ ರಾಜ್ಯ ಸಕರ್ಾರ ಇಂದಿರಾ ಕ್ಯಾಂಟಿನನ್ನು ಸ್ಥಾಪಿಸುವ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯನ್ನು ಪ್ರಸಕ್ತ ರಾಜ್ಯ ಸಕರ್ಾರದ ಅವಧಿಯಲ್ಲಿಯೂ ಕೂಡ ಮುಂದುವರೆಸಿಕೊಂಡು ಹೋಗಲಾಗುತ್ತಿದ್ದು, ಬಡವರನ್ನು ಹಸಿವು ಮುಕ್ತರನ್ನಾಗಿಸಲು ಈ ಯೋಜನೆ ಅತ್ಯಂತ ಉಪಯುಕ್ತವಾಗಲಿದ್ದು, ಬಡಜನರು ಇದರ ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಯೋಜನೆಯನ್ನು ವಿವಿಧ ಹಂತಗಳಲ್ಲಿ ಅನುಷ್ಟಾನಗೊಳಿಸಿದೆ. ರಾಜ್ಯದಲ್ಲಿ ಒಟ್ಟು 30 ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ 173 ಸ್ಥಳೀಯ ಸಂಸ್ಥೆಗಳಲ್ಲಿ 171 ಅಡುಗೆ ಕೋಣೆಯೊಂದಿಗೆ ಕ್ಯಾಂಟೀನ್, 76 ಸ್ವತಂತ್ರ ಕ್ಯಾಂಟೀನ್ಗಳು ಮತ್ತು 15 ಸಾಮಾನ್ಯ ಅಡುಗೆ ಕೋಣೆಗಳನ್ನು ನಿಮರ್ಿಸಲಾಗುತ್ತಿದೆ.
ವಿಜಯಪುರ ಮಹಾನಗರ ಪಾಲಿಕೆ ವ್ಯಾ;ಪ್ತಿಯ ಮಹಾನಗರ ಪಾಲಿಕೆ ಆವರಣ, ಗೋದಾವರಿ ಹೊಟೆಲ್ ಹತ್ತಿರ ಕೆ.ಎಸ್.ಆರ್.ಟಿ.ಸಿ ಡಿಪೋ, ಎ.ಪಿ.ಎಂ.ಸಿ ಆವರಣ, ಸೊಲ್ಲಾಪೂರ ರಸ್ತೆ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ಇಂದಿರಾ ಕ್ಯಾಂಟೀನ ತೆರೆಯಲಾಗಿದೆ.
ಈ ಸಂದರ್ಭದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ), ನಾಗಠಾಣ ಮತಕ್ಷೇತ್ರ ಶಾಸಕ ದೇವಾನಂದ ಚವ್ಹಾಣ, ಮಹಾಪೌರ ಶ್ರೀಮತಿ ಶ್ರೀದೇವಿ ಲೋಗಾಂವಿ, ಗೋಪಾಲ ಘಟಕಾಂಬಳೆ, ಅಬ್ದುಲರಜಾಕ ಹೊತರ್ಿ, ಪ್ರೇಮಾನಂದ ಬಿರಾದಾರ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಆಯುಕ್ತ ಡಾ.ಔದ್ರಾಮ ಸೇರಿದಂತೆ ಇತರರು ಉಪಸ್ಥಿತರಿದ್ದರು.