ಭಾರತದ ರಾಜಕಾರಣಿಗಳು ನ್ಯಾಯ ಸಮಾನತೆ ಕಾಪಾಡುವಲ್ಲಿ ವಿಫಲ

ಕಾರವಾರ 17: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಸೋಷಿಯಲ್ ಡೆಮಾಕ್ರಟಿಕ್ ಪಾಟರ್ಿ ಆಫ್ ಇಂಡಿಯಾ ಪಕ್ಷದವತಿಯಿಂದ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಪ್ರತಿಭಟನಾ ಧರಣಿ ನಡೆಯಿತು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಪಕ್ಷದ ನೂರಾರು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು,ಜಿಲ್ಲಾಧಿಕಾರಿ ಕಚೇರಿ ಎದುರು  ಶಾಂತರೀತಿಯಿಂದ ಧರಣಿ ಕುಳಿತು ಪ್ರತಿಭಟಿಸಿದರು. ಪ್ರತಿಭಟನೆ ಸಂದರ್ಭದಲ್ಲಿ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ರಾಜ್ಯ ಕಾರ್ಯದಶರ್ಿ ಅಶ್ರಫ್. ಎಂ. ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳಾದ ನ್ಯಾಯ ಸಮಾನತೆಯನ್ನು ಕಾಪಾಡುವಲ್ಲಿ ರಾಜಕಾರಣಿಗಳು ವಿಫಲರಾಗಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬ್ರಿಟಿಷರು ಭಾರತೀಯರನ್ನು ಒಡೆದಾಳಿದಂತೆ, ಈಗಿನ ಆಡಳಿತವೂ ಸಮುದಾಯಗಳನ್ನು  ಒಡೆದು ಆಳುತ್ತಿದೆ ಎಂದು ಆರೋಪಿಸಿದರು. ಬ್ರಿಟಿಷರ ಕಾಲಕ್ಕಿಂತಲೂ ಆಡಳಿತ ಹೀನಾಯ ಸ್ಥಿತಿ  ತಲುಪಿದೆ. ದೇಶದ ಸಂಪನ್ಮೂಲದ ಸಮಾನ ಹಂಚಿಕೆಯ ಭರವಸೆಯನ್ನು ಸಂವಿಧಾನ ನೀಡಿದೆ. ಆದರೆ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಜಾತಿ ಆಧಾರದಲ್ಲಿ ಜನರನ್ನು ವಿಂಗಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.

ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ, ನೊಟ್ ಬ್ಯಾನ್, ಜಿಎಸ್ಟಿ, ಅಚ್ಛೇದಿನ್, ವಸತಿ ಭೀಮಾ ಯೋಜನೆಗಳು ಕಾಪರ್ೋರೆಟ್ ಕಂಪನಿಗಳ ಪಾಲಾಗುತ್ತಿವೆ.  ಕಾಪರ್ೋರೇಟ್ ಕಂಪನಿಗಳ ಮಧ್ಯವತರ್ಿಯಾಗಿ ಕೇಂದ್ರ ಸಕರ್ಾರ  ಕೆಲಸ ಮಾಡುತ್ತಿದೆ. ಯಾವುದೇ ಜನಪರ ಕಾರ್ಯ ಮಾಡದೇ, ಬಾಬರಿ ಮಸ್ಜೀದ್, ರಾಮಜನ್ಮ ಭೂಮಿಯಂತಹ ವಿಚಾರಗಳನ್ನು ಎತ್ತಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಮೌಲಾನಾ ಮೌಜಂ ಮಾತನಾಡಿ, ಗೋರಕ್ಷಕರಿಗೆ ಬೆಂಬಲ ನೀಡುವುದರ ಮೂಲಕ ಕೇಂದ್ರ ಸರಕಾರ ದೇಶವನ್ನು ಏಕ ಸಂಸ್ಕೃತಿ ರಾಷ್ಟ್ರವನ್ನಾಗಿಸಲು ಮುಂದಾಗಿದೆ. ಇದಕ್ಕೆ ಮುಸಲ್ಮಾನರು ಸೇರಿದಂತೆ, ಕ್ರೈಸ್ತರು ಹಾಗೂ ದಲಿತ ಸಮುದಾಯ ಒಕ್ಕೊರಲ್ ನಿಂದ ವಿರೋಧಿಸಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಅರೀಫ್ ರಝಾ, ಮುಕ್ತಾರ್ ಖಾಜಿ, ಶರೀಫ್ ಶೇಖ್, ವಾಸಿಂ, ಮನ್ಸೂರ್ ಖಾಜಿ, ಅಸ್ಲಾಂ ಎಂ.ಹುಸೇನ್ ಮುಂತಾದವರು ಇದ್ದರು. ಧರಣಿ ನಂತರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಮನವಿ ಅಪರ್ಿಸಲಾಯಿತು.