ಭಾರತೀಯ ಸಂಗೀತ ಕಲೆ ಭವ್ಯ ಪರಂಪರೆ ಇದೆ: ಅರುಣಕುಮಾರ

ರಾಣೇಬೆನ್ನೂರು16: ಭಾರತೀಯ ಸಂಸ್ಕೃತಿಯಲ್ಲಿ ಸಂಗೀತ ಮತ್ತು ಜನಪದ ಕಲೆಯು ವೇದ-ಇತಿಹಾಸ ಕಾಲಗಳಿಂದಲೂ ನಡೆದುಕೊಂಡು ಬಂದಿದೆ.  ಇದರಿಂದಲೇ ನಾಗರೀಕರು ಸದಾ ಶಾಂತಿ ನೆಮ್ಮದಿ ಮತ್ತು ಭಾವೈಕ್ಯತೆಯಿಂದ ಬದುಕಿ ಬಾಳಲು ಸಾಧ್ಯವಾಗಿದೆ ಎಂದು  ಶಾಸಕ ಅರುಣಕುಮಾರ ಪೂಜಾರ ಹೇಳಿದರು.

    ಅವರು ಇಲ್ಲಿನ ಈಶ್ವರನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಶ್ರೀ ಅನುಪಲ್ಲವಿ ಸಂಗೀತ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸುಗಮ ಸಂಗೀತ ಹಾಗೂ ಜಾನಪದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 

ಸಂಗೀತವನ್ನು ಆಲಿಸದ ಮಾನವ ಸೇರಿದಂತೆ ಪ್ರಾಣಿ ಪಕ್ಷಿಗಳಿಲ್ಲ. ಸಂಗೀತವು ಎಲ್ಲ ರೋಗಗಳಿಗೆ ರಾಮಬಾಣವಿದ್ದಂತೆ. ಆದ ಕಾರಣ ಇಂತಹ ಮನರಂಜನಾ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಕೆಲವು ಕ್ಷಣವಾದರೂ ಸಂತೋಷದಿಂದ ಕಾಲ ಕಳೆದಾಗ ಭವ ರೋಗ ನಿವಾರಣೆಯಾಗುತ್ತದೆ, ಜಾನಪದ ಕಲೆಯು ದೇಸೀ ಸಂಸ್ಕೃತಿಯ ಪ್ರತೀಕವಾಗಿದ್ದು, ಇಲ್ಲಿ ಮಹಿಳೆಯರಿಗೆ ಸಾಕಷ್ಟು ಮಾಗರ್ೋಪಾಯ ಹಾಗೂ ಸಲಹೆ ಸೂಚನೆಗಳು ಅಡಗಿವೆ. ಹಾಗಾಗಿ ಮುಂದಿನ ಪೀಳಿಗೆಗೆ ಜಾನಪದ ಕಲೆಯ ಪ್ರದರ್ಶನ ಅವಶ್ಯವಿದೆ ಎಂದರು.

  ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ನಾವೆಲ್ಲಾ ಒತ್ತಡ ಜೀವನದಲ್ಲಿ ಸಿಲುಕಿದ್ದು, ಸಂಗೀತ, ನಾಟಕ, ಜಾನಪದ, ಭಜನೆ ಮುಂತಾದ ಮನೋರಂಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತಿ ಇಲ್ಲದಂತಾಗಿದೆ. ಮನುಷ್ಯ ತನ್ನ ದಿನನಿತ್ಯದ ಕಾರ್ಯಕಲಾಪಗಳನ್ನು ಮುಗಿಸಿದ ಮೇಲೆ ಸಂಜೆ ಸಮಯದಲ್ಲಿ ಸಂಗೀತ ಆಲಿಸಿದಾಗ ಭವ ರೋಗಗಳೆಲ್ಲ ನಿವಾರಣೆಯಾಗಿ ಮನಸ್ಸಿಗೆ ಮುದ ನೀಡುತ್ತದೆ ಎಂದರು.

  ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿ ಅಧ್ಯಕ್ಷ ಮಂಜುನಾಥಸ್ವಾಮಿ ಮಣಿಗಾರ ಮಾತನಾಡಿ, ಸಂಗೀತ ಮತ್ತು ಜನಪದ ಕಲಾವಿದರು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಸಾಗುತ್ತಿರುವ ಕಲೆಗಳ ಪ್ರಚಾರಕ್ಕೆ ಕೊರತೆ ಕಂಡುಬರುತ್ತಿದೆ, ಕಲಾವಿದರು ಮತ್ತು ಕಲೆ ಭಾರತದ ಸಂಸ್ಕೃತಿ ಪರಂಪರೆಯ ಹರಿಕಾರರು ಅಂತಹ ಕಲೆ ಕಲಾವಿದರು ಉಳಿದು-ಬೆಳೆದು ಬಂದಾಗ ಮಾತ್ರ ನಿಜ ಸಂಸ್ಕೃತಿ ಉಳಿಯಲು ಸಾಧ್ಯವಾಗುವುದು ಎಂದರು.

  ಅದರಲ್ಲೂ ಜಾನಪದ ತಾಯಿ ಬೇರು ಅದಕ್ಕೆ ಅಳಿವೆಂಬುದು ಇಲ್ಲ.  ಅದು ಎಂದಿಗೂ ನಿತ್ಯ, ಸತ್ಯ ಶಾಶ್ವತವಾಗಿದೆ ಕಲಾವಿದರು ತಮ್ಮ ಕಲೆಗಳ ಮೂಲಕ ಈ ದೇಶದ ಮತ್ತು ನಾಡಿನ ಪರಂಪರೆಯನ್ನು ಉಳಿಸುವಂತವರಾಗಿದ್ದಾರೆ.  ಅಂತವರನ್ನು ಸಂಘ-ಸಂಸ್ಥೆಗಳು ಸಾರ್ವಜನಿರು ಪೋಷಿಸಿ ಬೆಳೆಸಬೇಕಾದ ಇಂದಿನ ಅಗತ್ಯವಾಗಿದೆ ಎಂದರು. 

    ನಗರಸಭಾ ಸದಸ್ಯರಾದ ಗಂಗಮ್ಮ ಹಾವನೂರ, ಹನುಮಂತಪ್ಪ ಹೆದ್ದೇರಿ, ಪಿಎಸ್ಐ ಸಿದ್ಧಾರೂಢ ಬಡಿಗೇರ, ಮಂಜುನಾಥ ಓಲೇಕಾರ, ಚೋಳಪ್ಪ ಕಸವಾಳ, ಪವನಕುಮಾರ ಮಲ್ಲಾಡದ, ಪ್ರಭುಗೌಡ ಪಾಟೀಲ, ಮಂಜಯ್ಯ ಚಾವಡಿ, ಈರಣ್ಣ ಮಾಕನೂರ, ಪ್ರಭುಗೌಡ ಪಾಟೀಲ, ಗೋಪಾಲ ಗುತ್ತಲ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

    ನಾಡಿನ ಖ್ಯಾತ ಕಲಾವಿದರಾದ ಗಣೇಶ ಗುಡಿಗುಡಿ, ರುದ್ರಪ್ಪ ಬಡಿಗೇರ, ಸೌಮ್ಯ ಕೆಂಪಣ್ಣನವರ, ಯಶೋಧಾ ಗುಡಿಗುಡಿ, ಕರಬಸಪ್ಪ ಮಾವಿನತೋಪ ಮತ್ತು ಸಂಗಡಿಗರ ಸುಗಮ, ಜಾನಪದ ಸಂಗೀತ ಕಾರ್ಯಕ್ರಮವು ಪ್ರೇಕ್ಷಕರ ಗಮನ ಸೆಳೆಯಿತು.