ಲೋಕದರ್ಶನ ವರದಿ
ಹಳಿಯಾಳ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಾರತ ವಿರೋಧಿ ಉಗ್ರಗಾಮಿಗಳ ಮೇಲೆ ಭಾರತೀಯ ಸೈನ್ಯವು ದಾಳಿ ನಡೆಸಿ ಉಗ್ರಗಾಮಿ ನೆಲೆಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಭಾಜಪ ಹಳಿಯಾಳ ಘಟಕದವರು ಮಂಗಳವಾರ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಹಳಿಯಾಳ ಪಟ್ಟಣದ ಶಿವಾಜಿ ವೃತ್ತ ಹಾಗೂ ವಿವಿಧ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ಭಾರತಮಾತಾಕಿ ಜೈ ಹಾಗೂ ವೀರ ಸೈನಿಕರಿಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಲಾಯಿತು.
ಭಾಜಪ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪ್ರಮುಖರಾದ ಸಂತೋಷ ಘಟಕಾಂಬ್ಳೆ, ಅನಿಲ ಮುತ್ನಾಳೆ, ಚಂದ್ರಕಾಂತ ಕಮ್ಮಾರ, ವಿಲಾಸ ಯಡವಿ, ವಿಜಯ ಬೊಬಾಟಿ, ಉಮೇಶ ದೇಶಪಾಂಡೆ, ರಾಕೇಶ ಬಾಂದೋಡಕರ, ರಾಜು ಹಳ್ಳೂರ, ಸಿದ್ಧು ಶೆಟ್ಟಿ, ದಿನೇಶ ವಾಲೇಕರ ಮೊದಲಾದವರಿದ್ದರು.