ಭಾರತದ ಹೊಸ ಸಮರ ನೌಕೆ ಜಲಾಂತರ್ಗತ ಡ್ರೋನ್


ಹೊಸದಿಲ್ಲಿ : ಭಾರತೀಯ ನೌಕಾ ಪಡೆ ಇನ್ನು ಮೂರು ವರ್ಷಗಳ ಒಳಗೆ ತನ್ನ ಸಮರ ನೌಕೆಗಳ ವರ್ಗಕ್ಕೆ ಹೊಸ, ಅತ್ಯಾಧುನಿಕ ಸೇರ್ಪಡೆಯೊಂದನ್ನು ಕಾಣಲಿದೆ.  

ಭಾರತೀಯ ನೌಕಾ ಪಡೆಯನ್ನು ಸೇರಲಿರುವ ಈ ಹೊಸ ಸಮರ ನೌಕೆಯು ಸಮುದ್ರದಾಳದಲ್ಲಿ ಅಡಗಿಕೊಂಡು ಕಾಯರ್ಾಚರಿಸುವ ಡ್ರೋನ್ಗಳನ್ನು ಅಥವಾ ಮಾನವ ರಹಿತ ಜಲಾಂತಗರ್ಾಮಿಗಳನ್ನು ಹೊಂದಿರುತ್ತದೆ ಮತ್ತು ಶತ್ರುವಿನ ಮೇಲೆ ಪರಿಣಾಮಕಾರಿ ದಾಳಿ ಎಸಗುವ ಸಾಮಥ್ರ್ಯವನ್ನು ಹೊಂದಿರುತ್ತದೆ.  

ಭಾರತೀಯ ನೌಕಾ ಪಡೆಯು ತನ್ನ ಅಣು ಚಾಲಿತ ಜಲಾಂತಗರ್ಾಮಿಗಳು ಇನ್ನಷ್ಟು ಪರಿಣಾಮಕಾರಿ ಕಾದಾಟದ ಪಾತ್ರವನ್ನು ವಹಿಸುವ ಸಾಮಥ್ರ್ಯವನ್ನು ಹೊಂದುವ ನಿಟ್ಟಿನಲ್ಲಿ  ಸಕ್ರಿಯವಲ್ಲದ ಸೋನಾರ್ ಉಪಕರಣಗಳಿಂದ ಸಜ್ಜಿತವಾದ ಮಾನವ ರಹಿತ ಕಿರು ಜಲಾಂಗರ್ಾಮಿಗಳು ಅಥವಾ ಮಾನವ ರಹಿತ ಜಲಾಂತಗರ್ಾಮಿಗಳನ್ನು ಹೊಂದುವ ಅಪೇಕ್ಷೆಯನ್ನು ವ್ಯಕ್ತಪಡಿಸಿರುವುದಾಗಿ ರಶ್ಯದ ಸ್ಪುಟ್ನಿಕ್ ನ್ಯೂಸ್ ವೆಬ್ ಸೈಟ್, ಮತ್ತು ಜೇನ್ಸ್ 360 ಎಂಬ ರಕ್ಷಣೆ, ಭದ್ರತೆ, ಬೇಹು ಮತ್ತು ವಿಶ್ಲೇಷಣ ಪೋರ್ಟಲ್ ತಿಳಿಸಿದೆ.