ಲೋಕದರ್ಶನ ವರದಿ
ಸಂಕೇಶ್ವರ 6: ಭಾರತವು ಎಲ್ಲ ಜಾತಿ-ಪಂಗಡ-ಸಮುದಾಯಗಳ ಭಾವೈಕ್ಯ ಸಾಮರಸ್ಯತೆಯಿಂದ ಕೂಡಿದ ರಾಷ್ಟ್ರವಾಗಿದೆ. ಇಲ್ಲಿ ಎಲ್ಲರೂ ಒಂದೇ ಎನ್ನುವ ಭಾವ ಮೂಡಿದೆಯೆಂದು ರಾಜ್ಯ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ಅವರು ಇಲ್ಲಿಗೆ ಸಮೀಪದ ಹೆಬ್ಬಾಳ ಗ್ರಾಮದಲ್ಲಿ ನಿರಂತರ ನಡೆಯುತ್ತಿರುವ ನಿತ್ಯ ಅನುಭವ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತ ಮುಂದುವರೆದ ಅವರು, ಗ್ರಾಮದಲ್ಲಿರುವ ಜೈನ, ಮುಸ್ಲಿಂ, ಕುರುಬ ಹಾಗೂ ಇನ್ನುಳಿದ ಎಲ್ಲ ಸಮಾಜದವರು ಇಂಥ ಅನುಭಾವ ಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದನ್ನು ನೋಡಿದರೆ ಬಸವಣ್ಣನವರ ಅನುಭವ ಮಂಟಪವೇ ಇಲ್ಲಿ ಕೂಡಿದೆಯೆಂಬ ಭಾವನೆ ನನಗೆ ಮೂಡುತ್ತಿದೆ. ಇದು ಬಸವಣ್ಣವರ ತ್ರಿವಿಧ ದಾಸೋಹವನ್ನು ನೆನಪಿಸುತ್ತಿದೆ. ಅಲ್ಲದೇ ಮುಂಬರುವ ಫೆಬ್ರುವರಿ ದಿ. 21,22 ಹಾಗೂ 23ರವರೆಗೆ ನಡೆಯಲಿರುವ ಬಸವ ಉತ್ಸವವನ್ನು ಎಲ್ಲರು ಸಮಚಿತ್ತ, ಒಗ್ಗಟ್ಟು ಹಾಗೂ ವಿಜೃಂಭಣೆಯಿಂದ ಆಚರಿಸಿದರೆ ಈ ನೆಲದ ಪವಿತ್ರ ಸಂದೇಶ ಸಮಸ್ತ ದೇಶಕ್ಕೆ ಹೋಗುತ್ತದೆ.
ಈ ರೀತಿಯ ಸಮಾಜ ಪರಿವರ್ತನೆಗೆ ವೈದ್ಯ ಬಸವರಾಜ ಪಂಡಿತರು ಕಾರಣಕರ್ತರಾಗಿದ್ದು ಅವರ ಶ್ರಮ ಸಾರ್ಥಕವಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವೈದ್ಯ ಬಸವರಾಜ ಪಂಡಿತ, ಶಂಕರ ಗುಡಸ, ಪ್ರೊ. ಎಸ್.ವೈ. ಹಂಜಿ, ಸಿದ್ದು ಪಾಟೀಲ, ಮಹಾಂತೇಶ ಚೌಗಲಾ ಸೇರಿದಂತೆ ಎಲ್ಲ ಸಮಾಜದ ಗಣ್ಯಮಾನ್ಯರು ಭಾಗವಹಿಸಿದ್ದರು