ಲೋಕದರ್ಶನ ವರದಿ
ಇಂಡಿ: ಕೆಂದ್ರ ಸರಕಾರ ಕಾಮರ್ಿಕರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಭಾರತ ಬಂದ ಕರೆ ನೀಡಿದ ಹಿನ್ನೆಲೆಯಲ್ಲಿ ಎರಡನೆ ದಿನವು ಕೂಡಾ ಪಟ್ಟಣದಲ್ಲಿ ವಿವಿಧ ಕಾಮರ್ಿಕ ಸಂಘಟನೆಯವರು ಪ್ರತಿ ಭಟನೆ ಮಾಡಿದರು.
ಇದರಿಂದಾಗಿ ಪಟ್ಟಣದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದರೆ. ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆಕೆ ಮಾಡದೆ ಇರುವುದರಿಂದ ಎಂದಿನಂತೆ ತರಗತಿಗಳು ನಡೆದವು. ಆದರೆ ಗ್ರಾಮಿಣ ಭಾಗದಿಂದ ಕೆಎಸ್ಆರ್ಟಿಸಿ ಬಸ್ಸುಗಳ ಮೂಲಕ ನಗರಕ್ಕೆ ಆಗಮಿಸುವ ವಿದ್ಯಾಥರ್ಿಗಳಿಗೆ ಮಾತ್ರ ತೊಂದರೆ ಅನುಭವಿಸಬೇಕಾಯಿತು. ಏಕೆಂದರೆ ಎರಡು ದಿನವೂ ಕೆಎಸ್ಆರ್ಟಿಸಿ ಬಸ್ಸುಗಳು ಸಂಪೂರ್ಣವಾಗಿ ಸ್ಥಗಿತಗೊಂಡ ಪರಿಣಾಮ ವಿದ್ಯಾಥರ್ಿಗಳಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗಿದೆ. ಪ್ರತಿ ಭಟನೆಯು ಶಾಂತಿಯುತವಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಖಾಸಗಿ ವಾಹನಗಳ ಓಡಾಟ ಮಾತ್ರ ನಿಂತಿಲ್ಲ ಒಟ್ಟಿನಲ್ಲಿ ಪ್ರತಿ ಭಟನೆಯು ಶಾಂತಿಯುತವಾಗಿದ್ದು ಬಂದ ನೀರಸವಾಗಿತ್ತು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ಸ ನಿಲ್ದಾಣ ಎದುರು ಕುಳಿತು ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮಾಡಲಾಯಿತು ಇದರಿಂದಾಗಿ ಬಸ್ಸ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು.
ಈ ಪ್ರತಿಬಟನೆಯ ನೆತೃತ್ವ ಜಂಟಿ ಕಾಮರ್ಿಕ ಸಂಘಟನ(ಜೆಸಿಟಿಯು) ತಾಲೂಕಾ ಸಮಿತಿ ವಹಿಸಿದ್ದು ಪ್ರತಿಭಟನೆಯಲ್ಲಿ ಅಂಗನವಾಢಿ ಕರ್ಾಕತರ್ೆಯರು, ಗ್ರಾಮ ಪಂಚಾಯತಿ ಕಾಮರ್ಿಕರು, ಬಿಸಿಯುಟ, ಆಶಾ ಕಾರ್ಯಕತರ್ೆಯರು, ಪೌರ ಕಾಮರ್ಿಕರು ಸೇರಿದಂತೆ ವಿವಿಧ ಸಂಘಟನೆ ಕಾಮರ್ಿಕರು ಪಾಲ್ಗೊಂಡಿದ್ದರು.
ಪ್ರತಿ ಭಟನೆ ಜಂಟಿ ಕಾಮರ್ಿಕ ಸಂಘಟನ(ಜೆಸಿಟಿಯು) ತಾಲೂಕಾ ಸಮಿತಿ ಅದ್ಯಕ್ಷ ಶ್ರೀಮತಿ ಭಾರತಿ ವಾಲಿ, ಬಿಸಿಯುಟ ಅದ್ಯಕ್ಷ ಕಾಳಮ್ಮ ಬಡಿಗೇರ, ಗ್ರಾಮ ಪಂಚಾಯತಿ ಕಾಮರ್ಿಕರ ಅದ್ಯಕ್ಷ ವಿಠ್ಠಲ ಹೊನ್ನಮೋರೆ, ಧಾನಮ್ಮ ಗುಗ್ಗರೆ, ಭಿಮಾಶಂಕರ ಪೂಜಾರಿ, ಬಿ.ಡಿ.ಪಾಟೀಲ, ಸಿದ್ದು ಡಂಗಾ, ಇಂಡಿ, ಸುರೇಖಾ ನಾವಿ, ದ್ರಾಕ್ಷಾಣಿ ಅವಟಿ, ಅನುಸಯ್ಯಾ ಕುಂಬಾರ, ಪಾರ್ವತಿ ಅಲಗೊಂಡ, ಲಲಿತಾ ಕೋರೆ, ಆರ್.ಡಿ.ದೇವರ, ಶೋಭಾ ಕುಂಬಾರ ಸೇರಿದಂತೆ ನೂರಾರು ಕಾಮರ್ಿಕ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.
ಪೋಟೊ ಕ್ಯಾಪ್ಸನ್ 09 ಇಂಡಿ 01: ಪಟ್ಟಣದ ಕೆಎಸ್ಆರ್ಟಿಸಿ ಬಸ್ಸ ನಿಲ್ದಾಣ ಎದುರು ಕುಳಿತು ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ವಿವಿಧ ಕಾಮರ್ಿಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿರುವುದು.