ಇಂಡಿ: ಹೋಳಿ ಹಬ್ಬ ನಿಮಿತ್ತ ಶಾಂತಿ ಸಭೆ

ಲೋಕದರ್ಶನ ವರದಿ

ಇಂಡಿ 20: ಪಟ್ಟಣದ ಗ್ರಾಮೀಣ ಪೊಲೀಸ್ ಠಾಣಾ ಆವರಣದಲ್ಲಿ ಹೋಳಿ ಹಬ್ಬದ ನಿಮಿತ್ಯ ಶಾಂತಿ ಸಭೆ ನಡೆಸಲಾಯಿತು.

ಶಾಂತಿ ಸಭೆಯನ್ನುದ್ದೇಶಿಸಿ ಡಿವೈಎಸ್ಪಿ ಸಂಕದ್ ಮಾತನಾಡಿ ಸಾಂಸ್ಕೃತಿಕ ವೈಶಿಷ್ಠ್ಯೆ ಹೊಂದಿರುವ ನಮ್ಮ ದೇಶದಲ್ಲಿ  ಪ್ರಾಚೀನ ಕಾಲದಿಂದಲೂ ನಮ್ಮ ಹಿರಿಯರು ಹೋಳಿ ಹಬ್ಬವನ್ನು ಆಚರಿಸುತ್ತ  ಬಂದಿದ್ದಾರೆ. ಈ ಹಬ್ಬದಿಂದ ಪ್ರೀತಿ ವಿಶ್ವಾಸ ಮರುಕಳಿಸಬೇಕು ಹೊರತು ದ್ವೇಶವಲ್ಲ ಎಂದರು.

ನೈಸಗಿಕ ಬಣ್ಣಗಳಿಂದ ಹೋಳಿ ಆಚರಣೆ ಮಾಡಬೇಕು. ಇತರೆ ಜನಾಂಗಕ್ಕೆ ನೋವಾಗದಂತೆ ನಡೆದುಕೊಳ್ಳಬೇಕು. ಬಲವಂತವಾಗಿ ಬಣ್ಣ ಎರಚಬಾರದು. ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಶಾಂತಿಯುತವಾಗಿ ಹೊಳಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.

ಸಿಪಿಐ ಹೆಚ್.ಎಂ ಪಟೇಲ ಮಾತನಾಡಿ ಯಾವುದೇ ರೀತಿಯ ಗಲಾಟೆಯಾಗದಂತೆ ಸರಳ ರೀತಿಯಿಂದ ಹೋಳಿ ಆಚರಣೆ ಮಾಡಬೇಕು. ಕಾನೂನು ಪಾಲನೆ ಪಚ್ರತಿಯೊಬ್ಬರೂ ಮಾಡಬೇಕು 0 ನೇ ವರ್ಗದ ವಿದ್ಯಾಥರ್ಿಗಳ ಪರೀಕ್ಷೆ ಇದ್ದು ವಿದ್ಯಾಥರ್ಿಗಳಿಗೆ ತೊಂದರೆಯಾಗದಂತೆ ಹೋಳಿ ಆಚರಿಸಬೇಕೆಂದು  ತಿಳಿಸಿದರು. ನಗರ ಪಿಎಸ್ಐ ರವಿ ಯಡವಣ್ಣವರ ಸ್ವಾಗತಿಸಿ ವಂದಿಸಿದರು.

ಅನೀಲಗೌಡ ಬಿರಾದಾರ, ಪಾಪು ಕಿತ್ತಲಿ, ಬುದ್ದುಗೌಡ ಪಾಟೀಲ, ಸತೀಶ ಕುಂಬಾರ, ದೇವೆಂದ್ರ ಕುಂಬಾರ,  ಸಂಜು ದಶವಂತ, ಅಯೂಬ ಬಾಗವಾನ, ಮೌಲಾನಾ ಹುಸೇನಿ, ರೈಸ್ ಅಷ್ಟೇಕರ್, ಮಲ್ಲು ವಾಲೀಕಾರ, ಗೋವಿಂದ ರಾಠೋಡ, ಸಿದ್ದು ಕೋಳಿ, ಸಂಜು ರಾಠೋಡ, ಶಿವು ಮೂರಮನ್ ಮತ್ತಿತರರು ಇದ್ದರು.