ಲೋಕದರ್ಶನ ವರದಿ
ಇಂಡಿ 02: ಆಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಉದ್ದೆಶಿಂದ ಸರಕಾರಿ ಇಲಾಖೆಗೆ ಸಂಭಧಿಸಿದ ಅಕ್ಕಿಯನ್ನು ಇಂಡಿ ರೈಲು ನಿಲ್ದಾಣ ಗೊಡ್ವಾನಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದಾಗ ತಾಲೂಕಿನ ಬೂದಿಹಾಳ ಕ್ರಾಸ್ ಬಳಿ 6 ಲಕ್ಷ61500 ರೂಪಾಯಿ ಬೆಲೆ ಬಾಳುವ 245 ಕ್ವಿಂಟಾಲ ಅಕ್ಕಿ ಯಾವುದೇ ಪರವಾನಗಿ ಇಲ್ಲದೆ ತುಂಬಿದ ಬ್ಯಾಗ್ ಸಮೇತವಾಗಿ ಲಾರಿಯನ್ನು ಜಪ್ತ ಮಾಡಿ ಇಬ್ಬರನ್ನು ಇಂಡಿ ಗ್ರಾಮಿಣ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ತಡ ರಾತ್ರಿ ಜರುಗಿದೆ.
ಬಡ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿ ಕೇಂದ್ರಗಳು ಸಕರ್ಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಸಾವಿರಾರು ಕೋಟಿ ಹಣ ವ್ಯಯ ಮಾಡುತ್ತಿದೆ. ಆದರೆ ಆ ಆಹಾರ ಮಾತ್ರ ಬಡ ಮಕ್ಕಳ ಪಾಲಾಗದೆ ಭ್ರಷ್ಟ ಅಧಿಕಾರಿಗಳ ಹಾಗೂ ಖದೀಮರ ಪಾಲಾಗುತ್ತಿದೆ.
ತಾಲೂಕಿನ ಬೂದಿಹಾಳ ಕ್ರಾಸ್ ಬಳಿ 245 ಕ್ವಿಂಟಲ್ 6.61,500 ರೂ ಮೌಲ್ಯದ ಅಕ್ಕಿ ಸಾಗಾಟ ಮಾಡುತ್ತಿದ್ದ ಖಚಿತ ಆಧಾರದ ಮೇಲೆ ಇಂಡಿ ಗ್ರಾಮಾಂತರ ಪೊಲೀಸ್ರು ಆಹಾರ ಇಲಾಖಾ ಅಧಿಕಾರಿ ಕೆ.ಆರ್.ಕುಂಬಾರ ದಾಳಿ ಮಾಡಿ ಎಮ್.ಹೆಚ್.24 ಎ.ವಿ 4441 ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಅಕ್ಕಿ ಭಾರತೀಯ ಪೌಷ್ಠಿಕ ಆಹಾರ ನಿಗಮದ್ದು ಎಂದು ತಿಳಿದು ಬಂದಿದ್ದು ಮಹಾರಾಷ್ಟ್ರ ವಾಹನದಲ್ಲಿ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಮಾಹಿತಿ ಪಡೆದ ಪೊಲೀಸರು ಆಹಾರ ಇಲಾಖೆಯ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿ ಅಕ್ಕಿ ತುಂಬಿದ್ದ ವಾಹನ ವಶಕ್ಕೆ ಪಡೆದಿದ್ದಾರೆ.
ಈ ಅಕ್ಕಿ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗೋಡಾವನ್ನಲ್ಲಿಯೇ ತುಂಬಿಕೊಂಡು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿ ಎಸ್.ಸಿ.ಮ್ಯಾಗೇರಿ ಅವರನ್ನು ಸಂಪರ್ಕಿಸಿದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತು ವಿಚಾರಿಸಿ ತಮಗೆ ತಿಳಿಸುತ್ತೇನೆ ಎಂದು ನುಣುಚಿಕೊಳ್ಳುತ್ತಿದ್ದಾರೆ. ಆದರೆ ಸ್ಥಳಿಯರ ಪ್ರಕಾರ ಇಲಾಖಾ ಅಧಿಕಾರಿಗಳೇ ಮುಂದೆ ನಿಂತು ಅಕ್ಕಿ ತುಂಬಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ಕಿ ತುಂಬಿದ ವಾಹನ ಸಾಗಾಟ ಮಾಡುತ್ತಿದ್ದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಅಹ್ಮದ್ಪುರ್ ತಾಲೂಕಿನ ಶೇಣಿ ಗ್ರಾಮದ ಬಾಲಾಜಿ ದಾಖಣಿ (27), ಮಹಾದೂ ಬಾಬಾರಾವ್ ಗೋರೆ (30) ಸಾ. ಕುಮತಾಕುರ್ಧ ತಾಲೂಕ ಉದಗೀರ ಜಿಲ್ಲಾ ಲಾತೂರ ಈರ್ವರು ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಸಧ್ಯ ಅಕ್ಕಿಯನ್ನುಸರ್ಕಾರಿ ಗೋಡಾವನ್ ನಂಬರ್ 2 ರೈಲು ನಿಲ್ದಾಣದಲ್ಲಿ ಇರಿಸಲಾಗಿದ್ದು ತನಿಖೆಯ ನಂತರವಷ್ಟೇ ಈ ಸರ್ಕಾರಿ ಅಕ್ಕಿ ಎಲ್ಲಿಯದ್ದು? ಎಲ್ಲಿಗೆ ಸಾಗಾಟವಾಗುತ್ತಿತ್ತು ಎಂದು ತಿಳಿದು ಬರಲಿದೆ.
ಆಹಾರ ಇಲಾಖಾ ಶಿರಸ್ತೇದಾರ ಕೆ.ಆರ್. ಕುಂಬಾರ ಗ್ರಾಮೀಣ ಪಿಎಸ್ಐ ಎಮ್.ಎನ್.ಸಿಂದೂರ ದಾಳಿಯಲ್ಲಿ ಪಾಲ್ಗೊಂಡಿದ್ದರು