ಲೋಕದರ್ಶನ ವರದಿ
ಇಂಡಿ 04: ವಿಜಯಪುರ ಇಲ್ಲೆಯ ಇಂಡಿ ತಾಲೂಕಿನ ಮಿರಗಿ, ಶಿರಶ್ಯಾಡ, ನಾದ, ಸಂಗೋಗಿ, ಗೋಳಸಾರ, ಲೋಣಿ ಕೆರೆಗೆ ನೀರು ತುಂಬಿಸುವ ಸಲುವಾಗಿ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ನೇತೃತ್ವದಲ್ಲಿ ನೂರಾರು ರೈತರ ನಿಯೋಗದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರಿಗೆ ಮನವಿ ನೀಡಿದರು.
ತಾಲೂಕಿನ ಮಿರಗಿ, ಹಂಚನಾಳ,ಅರ್ಜುಣಗಿ, ಗೋಳಸಾರ, ಶಿರಶ್ಯಾಡ, ಸಂಗೋಗಿ, ರೋಡಗಿ ಗ್ರಾಮದ ಜನ ಜಾನುವಾರುಗಳಿಗೆ ನೀರು ಇಲ್ಲ ಎಂಬ ಮನವರಿಕೆ ಮಾಡಲಾಯಿತು. ಸದ್ಯ ಭೀಕರ ಬರಗಾಲ ಎದುರಾಗಿದ್ದು, ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸಾವಿರ ಪ್ಯೂಟ್ ಕೊಳವೆ ಬಾವಿ ಹೊಡೆದರು ಹನಿ ನೀರು ಬರುತ್ತಿಲ್ಲ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಮಾನ್ಯ ಸಚಿವರು ಇಂಡಿ ತಾಲೂಕಿನ ರೈತರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿಮಾಡಿದರು.
ಮನವಿಯನ್ನು ಮನಗಂಡ ಸಚಿವರು ತಮ್ಮ ಮೋಬೈಲ್ ನಿಂದ ಅಧಿಕಾರಿಗಳಿಗೆ ಇಂಡಿ ತಾಲೂಕಿನ ಹಳ್ಳಿಗಳಿಗೆ ನೀರಿನ ಸಮಸ್ಯೆ ಸಾಕಷ್ಟು ಇದ್ದು ಅದನ್ನು ಸಿಗ್ರದಲ್ಲಿ ಸ್ಥಳಕ್ಕೆ ಹೊಗಿ ಪರಿಶಿಲಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಕಾಮಗೊಂಡ, ಶ್ರೀಶೈಲಗೌಡ ಪಾಟೀಲ, ಸಿದ್ದು, ಡಂಗಾ, ಎಸ್.ಎಂ.ದೇಸಾಯಿ, ಶಿವಪ್ಪ ಗಡೇಕರ, ಶರಣಪ್ಪ ತಾವರಖೇಡ, ಡಿ.ಎಸ್.ಡೋಣಿ, ಜಿ.ಬಿ.ಪಾಟೀಲ, ಎಂ.ಎಸ್.ಮುಲ್ಲಾ, ಎಸ್.ಕೆ.ತಾವರಖೇಡ, ನಿಂಗೊಂಡಪ್ಪ ಬಿರಾದಾರ, ಆರ್.ಎಸ್.ಗೋರೆ, ಕಾಂತು ಜಿಡ್ಡಿಮನಿ, ಶಿವಾನಂದ ಅವಜಿ, ದತ್ತಪ್ಪ ತಳವಾರ, ಕನ್ನಪ್ಪ ಡೋಣಿ ಸೇರಿದಂತೆ ಮುಂತಾದವರು ಇದ್ದರು.