ಇಂಡಿ: ಜೆಡಿಎಸ್ಅಭ್ಯರ್ಥಿ ಗೆಲುವಿಗಾಗಿ ಉರುಳು ಸೇವೆ

ಲೋಕದರ್ಶನ ವರದಿ

ಇಂಡಿ 20: ವಿಜಯಪೂರ ಜಿಲ್ಲೆಯ ಲೋಕಸಭಾ ಅಭ್ಯಥರ್ಿ ಡಾ ಸುನೀತಾ ಚವ್ಹಾಣ ಗೆಲುವಿಗಾಗಿ ಪಟ್ಟಣದ ಕೆಇಬಿ ಹತ್ತಿರ ತಾಂಡಾದ ಮಹಿಳೆಯರು ಸೇವಾಲಾಲ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದರು.

ಈ ಸಂಧರ್ಭದಲ್ಲಿ ತಾಲೂಕಾ ಜೆಡಿಎಸ್ ಅಧ್ಯಕ್ಷ ಬಿ.ಡಿ ಪಾಟೀಲ ಮಾತನಾಡಿ ಜಿಲ್ಲೆಯಾದ್ಯಂತ ಸಮ್ಮಿಶ್ರ ಸರಕಾರದ ಅಭ್ಯಥರ್ಿ ಡಾ. ಸುನೀತಾ ಚವ್ಹಾಣರ ಪರವಾಗಿ ಸಾಕಷ್ಟು ಅಲೆ ಇದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಿಂದ ನಾನು  ಸೋತಿರುವೆ. ಈ ಬಾರಿ ಸಮ್ಮಿಶ್ರ ಸರಕಾರ ಮಹಾಘಟ ಬಂಧನ  ಆಗಿರುವ ಹಿನ್ನೆಯಲ್ಲಿ ಕಾಂಗ್ರೇಸ್, ಜೆಡಿಎಸ್ ಸಾಕಷ್ಟು ಮತಗಳ ಅಂತರದಿಂದ ಡಾ. ಸುನೀತಾ ಚವ್ಹಾಣ ಗೆಲ್ಲಲ್ಲಿದ್ದಾರೆ. ಕೇಂದ್ರ ಬಿಜೆಪಿ ಸರಕಾರ ಪೊಳ್ಳು ಭರವಸೆಗಳನ್ನು ನೀಡಿ ಜನರಿಗೆ ದಾರಿ ತಪ್ಪಿಸಿದ್ದಾರೆ. 

ಅಚ್ಚೇ ದಿನ ಅಚ್ಚೇದಿನ ಎಂದು ಹೇಳಿ ಯಾರಿಗೆ ಅಚ್ಚೇ ದಿನ ಬಂದಿದೆ? ಅದಾನಿ ಅಂಬಾನಿಗೆ ಬಂದಿದೆ ಹೊರತು ಬಡವರಿಗೆ ಬಂದಿಲ್ಲ. ಜಿಲ್ಲೆಯಲ್ಲಿ ಕೇಂದ್ರಸಚಿವ ರಮೇಶ ಜಿಗಜಿಣಗಿ ಯಾವುದೇ ಅಭಿವೃದ್ದಿಪರ ಕೆಲಸಗಳು ಮಾಡಿಲ್ಲ. ಮೋದಿಗೆ ನೋಡಿ ಮತ ಹಾಕಿ ಎಂದು ಹೇಳುವುದು ಯಾವ ಪುರುಷಾರ್ಥಕ್ಕೆ? ಆದ್ದರಿಂದ ಜಿಗಜಿಣಗಿಯವರು ತಮ್ಮ ಬಂಡವಾಳ ಇಲ್ಲದಾಗಿದೆ. ಈ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಗೆಲ್ಲಬೇಕು ಎಂದಿರುವ ಕನಸು ಫಲಿಸುವದಿಲ್ಲ. ಸಮ್ಮಿಶ್ರ ಸರಕಾರದ ಅಭ್ಯಥರ್ಿ ಡಾ. ಸುನೀತಾ ಚವ್ಹಾಣ ಇವರು ಸುಮಾರು 2 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲ್ಲಿದ್ದಾರೆ ಎಂದು ಹೇಳಿದರು.

ಸಿದ್ದು ಡಂಗಾ, ಮಹಿಬೂಬ ಬೇನೂರ, ಶ್ರೀಶೈಲಗೌಡ ಬಿರಾದಾರ, ಸಂತೋಷ ರಾಠೋಡ, ರವಿ ಜಾಧವ, ರವಿ ಸಿಂಧೆ ಸೇರಿದಂತೆ ನೂರಾರು ಜನ ಮಹಿಳೆಯರು ಇದ್ದರು.