ಲೋಕದರ್ಶವ ವರದಿ
ಚಡಚಣ : 10 ನೇ ತರಗತಿ ವಿದ್ಯಾಥರ್ಿಗಳಿಗೆ ಗುಂಪು ಚಚರ್ೆ ಹಾಗೂ ಕ್ರಿಯಾ ಯೋಜನೆ ರೂಪಿಸುವ ಮೂಲಕ ಕಲಿಕೆಯ ಗುಣಮಟ್ಟ ಹೆಚ್ಚಿಸಬೇಕು ಎಂದು ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿದರ್ೆಶಕರು ಪಿ.ಟಿ. ಬೊಂಗಾಳೆ ಮುಖ್ಯ ಗುರುಗಳಿಗೆ ಮಾರ್ಗದರ್ಶನ ಮಾಡಿದರು.
ಪಟ್ಟಣದ ಎಮ್ಇಎಸ್ ಶಿಕ್ಷಣ ಸಂಸ್ಥೆಯ ಸಭಾಭವವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ , ಕ್ಷೇತ್ರ ಶಿಕ್ಪ್ಷಣಾಧಿಕಾರಿಗಳ ಕಾಯರ್ಾಲಯ ಹಾಗೂ ಎಂ.ಇ.ಎಸ್. ಶಿಕ್ಷಣ ಸಂಸ್ಥೆ, ಚಡಚಣ ಇವರ ಸಹಯೋಗದಲ್ಲಿ ಗುರುವಾರ ಆಯೋಜಿಸಲಾದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣೆ ಕುರಿತು ಪ್ರೌಢ ಶಾಲಾ ಮುಖ್ಯ ಗುರುಗಳ ಒಂದು ದಿನದ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಡಿದರು.
ಚಡಚಣ ವಲಯದ ಕಳೆದ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಈ ವರ್ಷ ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮವಾಗಿ ಬರಬೇಕು ಎಂದು ಪ್ರೌಢ ಶಾಲಾ ಮುಖ್ಯ ಗುರುಗಳಿಗೆ ಸೂಚಿಸಿದರು.
ಪ್ರಾಸ್ತಾವಿಕವಾಗಿ ಹಿರಿಯ ಉಪನ್ಯಾಸಕ ಆರ್.ವಾಚಿ್. ಕೊಣ್ಣುರ, ಮಾತನಾಡಿ, ಶಿಕ್ಷಣ ಗುಣಮಟ್ಟ ಹೆಚ್ಚಿಸಿ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳು ಈ ಬಾರಿ ಜಿಲ್ಲೆಯಲ್ಲಿಗೆ ಪ್ರಥಮ ಸ್ಥಾನ ಪಡೆಯುವಂತೆ ತಯಾರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್.ವಾಚಿ್. ಕೊಣ್ಣೂರ, ನೋಡಲ್ ಅಧಿಕಾರಿ ಟಿ.ಎಸ್. ಆಲಗೂರ, ಉಪನ್ಯಾಸಕರಾದ ರವಿ ಯಲ್ಲಡಗಿ, ಎ.ಎಸ್.ಕಲ್ಯಾಣಶೆಟ್ಟಿ, ಜಿ.ಎಸ್. ಕಾಂಬಳೆ ಹಾಗೂ ಚಡಚಣ ವಲಯದ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಬಾಗವಹಿಸಿದ್ದರು.
ಕಾಯರ್ಾಗಾರದಲ್ಲಿ ಹಲವಾರು ವಿಷಯಗಳ ಕುರಿತು ಚಚರ್ಿಸಲಾಯಿತು.
ಶಿಕ್ಷಕ ಪಿ.ಎಸ್. ಯಳಮೇಲಿ ಸ್ವಾಗತಿಸಿ, ವಂದಿಸಿದರು.