ಸತ್ಯ, ಪ್ರಾಮಾಣಿಕತೆ ಜೀವನದಲ್ಲಿ ಅಳವಡಿಸಿಕೊಳ್ಳಿ: ಮೊಹಮ್ಮದಶಫೀಕ

ಲೋಕದರ್ಶನ ವರದಿ

ಮೂಡಲಗಿ: ಸತ್ಯ, ಪ್ರಾಮಾಣಿಕತೆ ಜೀವನದಲ್ಲಿ ಅಳವಡಿಸಿಕೊಂಡು ಇನ್ನೋಬ್ಬರ ಏಳಿಗೆಯನ್ನು ಅಸೂಯೆ ದೃಷ್ಟಿಯಿಂದ ಕಾಣದೆ ಗೌರವಯುತವಾಗಿ ಬಾಳಿ ಎಂದು ಧರ್ಮ ಗುರುಗಳಾದ ಮೌಲಾನಾ ಮೊಹಮ್ಮದಶಫೀಕ ಆಜ್ಮಿ ಹೇಳಿದರು. 

ರವಿವಾರ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಜಮಾತೆ ಅಹಲೆ ಸುನ್ನತ ಬಜ್ಮೆ ತೋಹಿದ ತಂಜಿಮ (ಬಿಟಿಟಿ) ಕಮೀಟಿ ವತಿಯಿಂದ ಹಮ್ಮಿಕೊಂಡ ಮಹ್ಮದ ಪೈಗಂಬರ ಜಯಂತಿಯ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಮನುಕುಲಕ್ಕೆ ಶ್ರೇಯಸ್ಸನ್ನೆ ಬಯಸಿ ಜಗತ್ತಿಗೆ ಸತ್ಯಮಾರ್ಗವನ್ನು ತೋರಿದ ಸರ್ವ ಜನಾಂಗದ ಶಾಂತಿಯ ತೋಟವಾಗಲೇಂದು ಬಯಸಿದ ಮಹ್ಮದ ಪೈಗಂಬರರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾರ್ಥಕ ಬದುಕು ಸಾಗಿಸಿ  ಎಂದರು. 

               ಕಮೀಟಿ ಉಪಾದ್ಯಕ್ಷ ಮಲಿಕ ಕಳ್ಳಿಮನಿ ಮಾತನಾಡಿ, ಪಟ್ಟಣ ಭಾವೈಕ್ಯತೆಗೆ ಹೆಸರುವಾಸುಯಗಿದ್ದು  ಮುಸ್ಲಿಂ ಸಮಾಜದ ಹಬ್ಬಗಳಲ್ಲಿ ಹಿಂದೂ ಬಾಂದವರು ಹಾಗೂ ಹಿಂದೂ ಸಮಾಜದ ಹಬ್ಬಗಳಲ್ಲಿ ಮುಸಲ್ಮಾನರು ಭಾಗವಹಿಸಿ ಬಾವೈಕ್ಯತೆಯಿಂದ  ಇರುತ್ತೇವೆ. ಶಾಂತಿ ಮಾರ್ಗ ಸೂಚಿಸಿದ ಮಹ್ಮದ ಪೈಗಂಬರರ ಕೊಡುಗೆ ಅಪಾರವಾಗಿದೆ ಎಂದರು. 

     ಸಭೆಯ ಅದ್ಯಕ್ಷತೆಯನ್ನು ಕಮೀಟಿಯ ಅದ್ಯಕ್ಷ ಶರೀಪ ಪಟೇಲ್ ವಹಿಸಿದ್ದರು ಮೌಲಾನಾ ನಿಜಾಮುದ್ದಿನ ಮಂತ್ರಪಠಣ ಮಾಡಿದರು. 

ಮೌಲಾನಾ ಅಸ್ಕರ ಅಲಿ, ಮೌಲಾನಾ ಕೌಸರ ರಜಾ ಮಹ್ಮದ ಪೈಗಂಬರರ ಪ್ರವಚನ ನೀಡಿದರು, ಮೌಲಾನ ಹಾಫೀಜ ಅಸಕ್ಕರಲಿ, ಮೌಲಾನಾ ಅಮೀರ ಥರಥರಿ, ಸಲಿಮ ಇನಾಮದಾರ, ಯೂನುಸು ಹವಾಲ್ದಾರ, ಹುಸೇನ ಥರಥರಿ, ರಾಜು ಅತ್ತಾರ, ಇಮಾಮಹುಸೇನ ಮುಲ್ಲಾ, ಬಾಷಾ ಲಾಡಖಾನ, ಸಾಹೇಬ ಪೀರಜಾದೆ, ಡಾ ಅಲ್ಲಾನೂರ ಬಾಗವಾನ ಹಾಜಿ ಹಸನಸಾಬ ಮುಗುಟಖಾನ, ರಫೀಕ್ ಕಡಗಾಂವಕರ, ದಸ್ತಗೀರಸಾಬ ಲಾಡಖಾನ, ಇಮಾಮಹುಸೇನ ತಾಂಬೋಳಿ, ಅಬ್ದುಲ್ ರೇಹಮಾನ ತಾಂಬೋಳಿ  ಮತ್ತು ಬಿಟಿಟಿ ಕಮೀಟಿ ಸದಸ್ಯರು ಹಾಗೂ ಸುನ್ನಿ ಮುಸ್ಲಿಂ ಭಾಂದವರು ಇದ್ದರು.

    ಬಿಟಿಟಿ ಕಮೀಟಿ ವತಿಯಿಂದ ಹಮ್ಮಿಕೊಂಡ ಮಹ್ಮದ ಪೈಗಂಬರ ಜಯಂತಿಯ ಮೇರವಣಿಗೆಯು ಬಾಜಾರ ಮಜ್ಜಿದ ಯಂಗ್ ಕಮೀಟಿ ಹಾಗೂ ಲಕ್ಷ್ಮೀ ನಗರ ಸುನ್ನಿ ಯುವಕರು ತಯಾರಿಸಿದ ಮಕ್ಕಾ ಮದೀನಾ ರೂಪಕಗಳೊಂದಿಗೆ ಭವ್ಯ ಮೆರವಣಿಗೆಯು ಜಾಮಿಯಾ ಮಸೀದಿಯಿಂದ ಹೊರಟು ಕರೆಮ್ಮದೇವಿ ವೃತ್ತ , ಬಸವೇಶ್ವರ ವೃತ್ತ, ಸಂಗಪ್ಪಣ್ಣ ವೃತ್ತ,  ಕಲ್ಮೇಶ್ವರ ವೃತ್ತ ಚನ್ನಮ್ಮ ವೃತ್ತಗಳಲ್ಲಿರುವ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಎಲ್ಲ ವೃತ್ತಗಳಲ್ಲಿಯ ಪ್ರತಿಮೆಗಳಿಗೆ ಮಾಲೆ ಹಾಕಿ ಬಾವೈಕ್ಯತೆಗೆ ಸಾಕ್ಷಿಯಾದರು. ಸಮಾರಂಭದ ವೇದಿಕೆಯಲ್ಲಿ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು. 

    ಇದಕ್ಕೂ ಮುಂಚೆ  ಪಟ್ಟಣದ ಜಾಮೀಯಾ ಮಸೀದಿಯ ನೂತನ ಕಟ್ಟಡಕ್ಕೆ ಧರ್ಮ ಗುರುಗಳಾದ ಮೌಲಾನಾ ಮೊಹಮ್ಮದಶಫೀಕ ಆಜ್ಮಿ ಅವರು ಭೂಮಿ ಪೂಜೆ ನೆರವೇರಿಸಿ ಮೇರವಣಿಗೆಗೆ ಚಾಲನೆ ನೀಡಿದರು