ಮುನವಳ್ಳಿ: ನೂತನ ವೀರಭದ್ರೇಶ್ವರ ಸೌಹಾರ್ದ ಸಹಕಾರ ಸಂಘದ ಉದ್ಘಾಟನೆ

ಲೋಕದರ್ಶನ ವರದಿ

ಮುನವಳ್ಳಿ 26: ಪಟ್ಟಣದಲ್ಲಿ ನೂತನವಾಗಿ ವೀರಭದ್ರೇಶ್ವರ ಸೌಹಾರ್ದ ಸಹಕಾರ ಸಂಘದ ಉದ್ಘಾಟನೆ ಜೂ. 24 ರಂದು ಶ್ರೀಗಳ ಅಮೃತ ಹಸ್ತದಿಂದ ನೆರವೇರಿತು.

   ಉದ್ಘಾಟನೆ ನೆರವೇರಿಸಿ ಮಾತನಾಡಿದ ಚಂದರಗಿಯ ಷ.ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ  ಸಹಕಾರದಿಂದ ಅಸಾಧ್ಯವಾದುದನ್ನು ಸಾಧ್ಯವನ್ನಾಗಿಸಬಹುದು. ಪರಸ್ಪರ ಅಭಿವೃದ್ಧಿಗೆ ಸಹಕಾರ ರಂಗ ಪೂರಕವಾಗಿದೆ ಎಂದರು. 

   ಸಾನಿಧ್ಯವನ್ನು ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ವಹಿಸಿ ಮಾತನಾಡಿ ಪ್ರತಿಯೊಬ್ಬರು ಸಹಕಾರಿ ರಂಗದಲ್ಲಿ ಸಕ್ರಿಯವಾಗಿ  ಪಾಲ್ಗೊಂಡು ಆಥರ್ಿಕ ಅಭಿವೃದ್ಧಿ ಸಾಧಿಸಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

   ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಂಜುನಾಥ ಈ ಹನಸಿ, ಸದಸ್ಯರಾದ ಶಂಕರೆಪ್ಪ ದೇವಣಗಾಂವಿ, ಕಲ್ಲಪ್ಪ ಕಿತ್ತೂರ, ಪರಪ್ಪ ಗಂ. ಸಿದ್ನಾಳ, ಮಲ್ಲಿಕಾಜರ್ುನ ಪ. ನಲವಡೆ, ಶಿವು ಬಾಜಪ್ಪಗೋಳ, ಬಸವರಾಜ ಚುಳಕಿ, ಬಸವಂತ ಮಾ. ಹನಸಿ, ದಾನಪ್ಪ ಬಾಳಿ, ಸಂಗಪ್ಪ ಕರಡಿಗುದ್ದಿ, ನಾರಾಯಣ ಕಳಸನ್ನವರ, ಪ್ರಸನ್ನಕುಮಾರ ನಾಗೆಶನವರ, ಗೋರವ್ವ ಪ್ರಕಾಶ ತಿರಕನ್ನವರ, ಮುಖ್ಯ ಕಾರ್ಯನಿವರ್ಾಹಕ ಅಶೋಕ ತಿರಕನ್ನವರ ಇತರರು ಇದ್ದರು.