ತುಳಜಾ ಭವಾನಿ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ

Inauguration of Tulja Bhavani Temple, installation of idol

ತುಳಜಾ ಭವಾನಿ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ 

ಸಂಕೇಶ್ವರ 06: ಛತ್ರಪತಿ ಶಿವಾಜಿ ಮಹಾರಾಜ ಕಾಲದಿಂದಲೂ ಧರ್ಮ ರಕ್ಷಣೆ ಮಾಡುವಲ್ಲಿ ಮತ್ತು ಅವರಿಗೆ ಬೆನ್ನೆಲುಬಾಗಿ ನಿಂತ ಗೋಂಧಳಿ ಸಮಾಜವು ಇಂದಿಗೂ ಮದುವೆ ಆದ ನಂತರ ಸಮಾಜದಲ್ಲಿ ಗೋಂಧಳಿ ಹಾಕಿದ ನಂತರ ನವ ದಂಪತಿಯ ಜೀವನ ಕಲ್ಯಾಣವಾಗುತ್ತದೆ ಮತ್ತು ಸಂತಾನವಾಗಿ ಜೀವನ ಸುಖಕರವಾಗುತ್ತದೆ ಎಂದು ನಿಡಸೋಶಿಯ ಶಿವಲಿಂಗೇಶ್ವರ ಶ್ರೀಗಳು ಹೇಳಿದರು. 

ಸುಭಾಷ ರೋಡದಲ್ಲಿರುವ ಗೋಂಧಳಿಗಲ್ಲಿಯಲ್ಲಿ ಸಮಾಜದ ಕಮೀಟಿಯವರು ಏರಿ​‍್ಡಸಿದ್ದ ದೇವಿ ತುಳಜಾ ಭವಾನಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. 

1981ರಿಂದ 1989 ಈ ಗೋಂಧಳಿ ಸಮಾಜವು ತಮ್ಮ ಜೊತೆಗೆ ಅನ್ನೋನ್ಯ ಸಂಬಂಧ ಹೊಂದಿರುತ್ತದೆ. ಈ ಚಿಕ್ಕ ಸಮಾಜವು ಇಷ್ಟೊಂದು ಭಾರಿ ಪ್ರಮಾಣದಲ್ಲಿ ಕಳೆದ ನಾಲ್ಕು ದಿನಗಳಿಂದ ಧಾರ್ಮಿಕ ಪೂಜೆ ಸಮಾರಂಭಗಳು ನಡೆದಿದ್ದು ಗೋಂಧಳಿ ಸಮಾಜ ಈ ಕಾಯಕವು ಸಮಾಜಕ್ಕೆ ಒಳಿತವಾಗುವುದೆಂದು ಹೇಳಿದ ಮಾಜಿ ಸಚಿವ ಎ.ಬಿ.ಪಾಟೀಲರು, ಕಾರ್ಯಕ್ರಮದಲ್ಲಿ ಸತ್ಕಾರದ ಪ್ರತಿಯಾಗಿ ಶುಭ ಹಾರೈಸಿದಲ್ಲದೆ ಇದು ಈ ದೇವಿಯ ಪೀಠವು ಶಕ್ತಿಯುತವಾಗಿದೆ. ಸಂಕೇಶ್ವರ ಭಾಗದ ಜನತೆಯಲ್ಲಾ ಈ ಪೀಠದ ದರ್ಶನ ಪಡೆದುಕೊಂಡು ಪಾವನವಾಗಬೇಕೆಂದು ಹೇಳಿದರು. 

ರಮೇಶ ವಿಶ್ವನಾಥ ಕತ್ತಿ ಇವರು ಮಾತನಾಡುತ್ತಾ ಹದಿನಾರುನೂರು ಶತಕದ ಹಿಂದವಿ ಸ್ವರಾಜ್ಯ ಛತ್ರಪತಿ ಶಿವಾಜಿ ಮಹಾರಾಜರ ಕಾಲಕ್ಕೆ ಅವರ ಬೆನ್ನೆಲಬುವಾಗಿ ಗೋಂಧಳಿ ಸಮಾಜವು ನಿಂತಿದೆ ದೇವಿ ತುಳಜಾ ಭವಾನಿ ದೇವಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಖಡ್ಗವನ್ನು ನೀಡಿ ಆಶೀರ್ವಾದ ನೀಡಿರುತ್ತಾಳೆ. ಬಸವಣ್ಣನವರನ್ನು ಸಹ ಪೂಜೆ ಮಾಡುವ ಈ ಗೋಂಧಳಿ ಸಮಾಜವು ಜಾತಿ ಪ್ರೇಮಕ್ಕಿಂತ ದೇಶ ಪ್ರೇಮ ಹೆಚ್ಚು ಎಂದು ಕತ್ತಿಯವರು ಗೋಂಧಳಿ ಸಮಾಜವು ಇನ್ನಷ್ಟು ಬೆಳೆಯಲೆಂದು ಹಾರೈಸಿದರು. ಗೋಂಧಳಿ ಸಮಾಜದವರು ಕನ್ನಡ ಭಾಷೆಯನ್ನು ಉಳಿಸಿದ್ದಾರೆ ಈ ನಿರ್ಜೀವ ಮೂರ್ತಿಗಳಿಗೆ ಜೀವ ತುಂಬುವ ಕಾರ್ಯಕ್ರಮಗಳನ್ನು ಶ್ರೀಗಳು ನಡೆಸಿದ್ದಾರೆ. ಭಕ್ತಿ ಶಕ್ತಿ ಈ ಎಲ್ಲವೂ ಈ ತುಳಜಾ ಭವಾನಿ ದೇವಿಗೆ ಇರುತ್ತದೆ. ಗೊಂಧಳಿ ಸಮಾಜವನ್ನು ಸ್ವಸ್ಥ ಸಮಾಜವನ್ನಾಗಿ ಕಟ್ಟಿ ಸಮಾಜದ ಜನತೆಯಲ್ಲಿ ಪರಿವರ್ತನೆಯಾಗಬೇಕೆಂದು ಕೊಗನೊಳಿಯ ವಕ್ತೆ ಹೇಳಿದರು. 

ಗೋಂಧಳಿ ಸಮಾಜದ ಎಲ್ಲ ಪದಾಧಿಕಾರಿಗಳು ಶ್ರೀಗಳನ್ನು ಸತ್ಕರಿಸಿದರು. ವೇದಿಕೆಯ ಮೇಲೆ ರಾಜಕೀಯ ಪುಢಾರಿಗಳಾದ ಮಾಜಿ ಸಚಿವ ಎ.ಬಿ. ಪಾಟೀಲ, ಸಹಕಾರಿ ಧುರೀಣ ರಮೇಶ ಕತ್ತಿ, ಅಪ್ಪಾಸಾಹೇಬ ಶಿರಕೋಳಿ, ಮಾಜಿ ನಗರಾಧ್ಯಕ್ಷರುಗಳಾದ ಅಮರ ನಲವಡೆ, ಸಂಜಯ ಶಿರಕೋಳಿ, ಸಂತೋಷ ಮುಡಶಿ, ಅಭೀಜಿತ ಕುರಣಕರ, ನಂದು ಮುಡಶಿ, ಪಾಂಡುರಂಗ ಗಾಯಕವಾಡ, ಪ್ರಮೋದ ಹೊಸಮನಿ, ಸುನೀಲ ಪರ್ವತರಾವ, ಮನೋರಮಾ ಸುಗತೆ, ರಾಜೇಂದ್ರ ಬೋರಗಾಂವಿ, ಅಭೀಜಿತ ಕುರಣಕರ, ರೋಹನ ನೇಸರಿ, ಸಚೀನ ಭೋಪಳೆ, ಇವರೆಲ್ಲರನ್ನೂ ಶಾಲು ಹೊದಿಸಿ ಸತ್ಕರಿಸಿದರು, ಭವಾನಿ ಶಂಕರ ಗೋಂಧಳಿ ಸಮಾಜದ ಕಮೀಟಿಯ ಅಧ್ಯಕ್ಷ ಶಂಕರ ಕಾಳೆ, ತಾನಾಜಿ ಕಳಿವಾಲೆ, ಸಂದೀಪ ದವಡತೆ, ವಿಶಾಲ ಸುಗತೆ, ಸಂತರಾಮ ದವಡತೆ, ರವಿಕುಮಾರ ದವಡತೆ, ಜಯಪ್ರಕಾಶ ದವಡತೆ, ಮಹೇಶ ದವಡತೆ, ಅಮೋಲ ಗೋಂಧಳಿ, ಸಾಗರ ದವಡತೆ, ವಿನಾಯಕ ಪಾಚಂಗೆ, ರವೀಂದ್ರ ಭೋಂಜನೆ, ಪರಶು ಶಿಸೋದೆ, ಇವರೆಲ್ಲರೂ ಗಣ್ಯ ವ್ಯಕ್ತಿಗಳನ್ನು ಹಾಗೂ ಎಲ್ಲ ಶ್ರೀಗಳನ್ನು ಸ್ವಾಗತಿಸಿದರು.  

ದೇವಿ ತುಳಜಾ ಭವಾನಿ ದೇವಸ್ಥಾನದ ವಾಸ್ತು ಶಾಂತಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಉಧ್ಘಾಟನಾ ಸಮಾರಂಭವನ್ನು ಶಂಕರಾಚಾರ್ಯ ಸಂಸ್ಥಾನ ಮಠದ ಸಚ್ಚಿದಾನಂದ ಅಭಿನವ ವಿದ್ಯಾನರಸಂಹಭಾರತಿ ಮಹಾಸ್ವಾಮಿಗಳು, ನಿಡಸೋಶಿ ದುರದುಂಡೀಶ್ವರ ಮಠದ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಅವಜಿಕರ ಧ್ಯಾನಯೋಗಾಶ್ರಮ ಕ್ಯಾರೆಗುಡ್ಡಮಠ ಹುಕ್ಕೇರಿಯ ಮಂಜುನಾಥ ಮಹಾಸ್ವಾಮಿಗಳು, ಮಹಾರಾಷ್ಟ್ರದ ರಾಮನಾಥಗಿರಿ ಮಠ ನೂಲದ ಭಗವಾನಗಿರಿ ಮಹಾರಾಜ ಶ್ರೀಗಳು ಮೇಣದ ಬತ್ತಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.