ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ

ಲೋಕದರ್ಶನ ವರದಿ

ಮೂಡಲಗಿ 26:  ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಕಿರಿಯ ವಯಸ್ಸಿನ ಮಕ್ಕಳಲ್ಲಿ ಶಿಕ್ಷಕರು ತುಂಬುವ ಕಾರ್ಯ ಅವರಲ್ಲಿಯ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸುವದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು 

ಅವರು ಸೇಂಟ್ ಮೇರಿ ಶಾಂತಿ ನೀಕೆತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. 

 ಸ್ಥಳೀಯವಾಗಿ ವಿಜ್ಞಾನ ಪ್ರದರ್ಶನಗಳನ್ನು ಆಯೋಜಿಸುವದರ ಜೊತೆಗೆ ವಿದ್ಯಾಥರ್ಿಗಳಿಗೆ ಅದಕ್ಕೆ ಬೇಕಾದ ಪರಿಕರಗಳನ್ನು ಸಂಗ್ರಹಿಸುವ ಜವಾಬ್ದಾರಿ ನೀಡಿದ್ದರಿಂದ ಅವರಲ್ಲಿ ಸೂಕ್ತವಾದ ಸಮಾಜ ಜ್ಞಾನವನ್ನು ಎತ್ತಿಹಿಡಿಯುವದಾಗಿದೆ ಜೊತೆಗೆ ಪಾಲಕರಿಗೂ ಅದರ ಜವಾಬ್ದಾರಿ ನೀಡಿದ್ದರಿಂದ ಇನ್ನಷ್ಟು ಅನುಕೂಲವಾಗಿದೆ ಈ ನೀಟ್ಟಿನಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು. 

ಈ ಸಂಸ್ಥೆಯಲ್ಲಿ ಜ್ಞಾನಾರ್ಜನೆ ಮಾಡುವ ಕಿರಿಯ ಮಕ್ಕಳ ಅವರಲ್ಲಿಯ ಜ್ಞಾನವನ್ನು ಹೋರ ಹಾಕಲು ತಾವು ಮಾಡಿದ ವಸ್ತುವಿನ ಮಾದರಿ ಅದರಿಂದ ಆಗುವ ಪ್ರಯೋಜನಗಳನ್ನು ವಿದ್ಯಾಥರ್ಿಗಳೆ ವಿವರಿಸುವ ಪರಿ ನಿಜಕ್ಕೂ ಒಂದು ಅದ್ಬುತ ಕಾರ್ಯ ಈ ಕಾರ್ಯವನ್ನು ಎಲ್ಲಾ ಶಿಕ್ಷಕರು ಮತ್ತು ಇನ್ನಿತರ ಸಂಸ್ಥೆಯವರು ಪಾಲಿಸುವದು ಅವಶ್ಯವಾಗಿದೆ. 

ವಿಜ್ಞಾನ ಪ್ರದರ್ಶನದ ನಿಣರ್ಾಯಕರಾಗಿ ಆಗಮಿಸಿದ ಗುಲರ್ಾಪೂರದ  ಸರಕಾರಿ ಪ್ರೌಡ ಶಾಲೆಯ ಶಿಕ್ಷಕ ಶಿವಲಿಂಗ ಅರಗಿ, ಶಿವಾಪೂರದ ಸರಕಾರಿ ಪ್ರೌಡ ಶಾಲೆಯ ಶಿಕ್ಷಕ ಅರುಣ ಅಗರ, ಸುಣಧೋಳಿಯ ಸರಕಾರಿ ಪ್ರೌಡ ಶಾಲೆಯ ಶಿಕ್ಷಕ ಪ್ರಕಾಶ ಪಾಟೀಲ್ ಮತ್ತು ಸ್ವಾಮಿ ವಿವೇಕಾನಂದ ಸಕರ್ಾರೇತರ ಸಂಸ್ಥೆಯ ಅಧ್ಯಕ್ಷ ಸಂತ್ರಾಮ ನಾಶಿ, ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಮೀರ ದಬಾಡಿ ವಿದ್ಯಾಥರ್ಿಗಳ ಕಾರ್ಯ ಶ್ಲಾಘಿಸುವದರ ಜೊತೆಗೆ ನಿರ್ಯಯ ನೀಡಿದರು, ಸಂಸ್ಥಾಪಕ ಡ್ಯಾನೀಯಲ ಸವರ್ಿ,ಶಾಲೆಯ ಮುಖ್ಯೋಪಾಧ್ಯಾಯ ಶೀಲಾ ಡ್ಯಾನಿಯಲ್, ಶಿಕ್ಷಕ ಜೇಮ್ಸ್, ಜೋಸೆಪ್, ಶೇಖ ಸೌಮ್ಯಾ ಪಾರ್ವತಿ, ಅಲ್ಬರ್ಟ ಉಪಸ್ಥಿತರಿದ್ದರು.

1ನೇ ತರಗತಿಯಲ್ಲಿ ಪ್ರಥಮ : ತೇಜಸ ಪಾಟೀಲ್ ಮತ್ತು ಶಿವಾನಿ ಹೆಬ್ಬಾಳ, ದ್ವೀತಿಯ ನೀಧಿ ಸಸಾಲಟ್ಟಿ ತೃತೀಯ ರಾಘವ ಗೊರವ್ವ, 2ನೇ ತರಗತಿಯಲ್ಲಿ ಪ್ರಥಮ : ಸುವೀಧಾ ಕೊಳ್ದೂರ, ದ್ವೀತಿಯ ರಜತ ಕುದರಿಮನಿ, ತೃತೀಯ ಜೀವನ ಗಾಡಿಕಾರ ಮತ್ತು ಸನ್ನೀಧಿ ಪಾಟೀಲ್, 3ನೇ ತರಗತಿಯಲ್ಲಿ ಪ್ರಥಮ : ರೇಹಾನ ನಧಾಪ್, ದ್ವೀತೀಯ ಆರಾಧ್ಯಾ ಪಾಟೀಲ್ ತೃತೀಯ ಅಂಕಿತಾ ಮೋಹಿತೆ,4ನೇ ತರಗತಿಯಲ್ಲಿ ಪ್ರಥಮ : ಅಪರ್ೀತಾ ಕಬ್ಬೂರ, ದ್ವೀತಿಯ ಶೃದ್ದಾ ತೋಳಮರಡಿ, ತೃತೀಯ ಪೂಣರ್ಿಮಾ ಗಾಡವಿ,5ನೇ ತರಗತಿಯಲ್ಲಿ ಪ್ರಥಮ : ಪರ್ಹಾನ್ ತರತರಿ,ದ್ವೀತೀಯ ಮಹ್ಮಮದಜಾಹೇದ ಮಲ್ಲಾಪೂರ,ತೃತೀಯ ಶೃದ್ದಾ ಉಪಾಧ್ಯಾಯ ಆಯ್ಕೆಯಾಗಿದ್ದಾರೆ ಎಂದು ನಿಣರ್ಾಯಕರು ತೀಳಿಸಿದ್ದಾರೆ.