ಲೋಕದರ್ಶನ ವರದಿ
ಮೂಡಲಗಿ 24: ಗ್ರಾಮಿಣ ಪ್ರದೇಶಗಳಲ್ಲಿ ಆಯೋಜಿಸಲ್ಲಾದ ಉಚಿತ ಕಣ್ಣಿನ ಪೊರೆ ತಪಾಸಣೆ ಶಸ್ತ್ರ ಚಿಕಿತ್ಸಾ ಶಿಬಿರಗಳು ಮಧ್ಯಮ ಹಾಗೂ ಬಡ ಜನರು ಕಣ್ಣಿನ ತೊಂದರೆ ಅನುಭವಿಸುವವರಿಗೆ ಲಾಭದಾಯಕವಾಗಿದೆ, ಹಿರಿಯ ಜೀವಗಳು ಶಿಬಿರದ ಪ್ರಯೋಜನ ಪಡೆದು ಕಣ್ಣಿನ ತೊಂದರೆಯನ್ನು ನಿವಾರಿಸಕೊಳ್ಳಬೇಕೆಂದು ಜನಹಿತ ಐ ಕೇರ್ ಕೇಂದ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಪಟೇದ ಹೇಳಿದರು.
ಗುರುವಾರ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂದತ್ವ ನಿಯಂತ್ರಣ ವಿಭಾಗ, ಗೋಕಾಕ-ಮೂಡಲಗಿ ಆರೋಗ್ಯ ಇಲಾಖೆ, ಬೆಂಗಳೂರ ಜನಹಿತ ಐಕೇರ ಕೇಂದ್ರ ಮತ್ತು ಮೂಡಲಗಿ ಪುರಸಭೆ ಕಾಯರ್ಾಲಯ ಆಶ್ರಯದಲ್ಲಿ ಜರುಗಿದ ಉಚಿತ ಕಣ್ಣಿನ ಪೊರೆ ತಪಾಸಣೆ ಶಸ್ತ್ರ ಚಿಕಿತ್ಸಾ ಶಿಬಿರದ ಸಮಾರಂಭದಲ್ಲಿ ಮಾತನಾಡಿದರು.
ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಪುರಸಭೆ ಉಪಾಧ್ಯಕ್ಷ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆರ್.ಪಿ.ಸೋನವಾಲ್ಕರ ಮಾತನಾಡಿ, ಅಂದತ್ವ ನಿವಾರಣೆಗೆ ಸರಕಾರದ ಯೋಜನೆಗಳು ಫಲಪ್ರದವಾಗಬೇಕಾದರೆ ಗ್ರಾಮೀಣ ಪ್ರದೇಶದಲ್ಲಿರುವ ಜನರು ಶಿಬಿರದ ಲಾಭ ಪಡೆದಾಗ ಮಾತ್ರ ಸಾಧ್ಯ, ಇಂತಹ ಕಾರ್ಯಕ್ರಮಗಳಿಗೆ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಾಯ ಸಹಕಾರ ಬಹಳ ಮುಖ್ಯವಾಗಿದೆ. ಜ.31 ರಂದು ನಡೆಯುವ ಬೃಹತ ಐಚ್ಛಿಕ ರಕ್ತ ದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈಧ್ಯಾಧಿಕಾರಿ ಡಾ ಭಾರತಿ ಕೋಣಿ ಅಧ್ಯಕ್ಷತೆ ವಹಿಸಿದ್ದರು.ಮಸಮಾರಂಭದಲ್ಲಿ ಜನಹಿತ ಐಕೇರ್ ಸೆಂಟರನ ನೇತ್ರ ತಜ್ಞ ಡಾ ಕೃಷ್ಣಮೋಹನ ಜಿಂಕಾ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ. ಎಸ್.ಎಸ್.ಪಾಟೀಲ, ಹಣಮಂತ ಪೂಜೇರಿ, ಡಾ: ಮಹೇಂದ್ರ ವಾಳ್ವೇಕರ, ಡಾ: ಸುನೀತಾ ಗೌಡ್ರ, ಡಾ: ಯೂನಿಸ್, ಜಿ.ಎಮ್.ಕೋಲುರ, ಡಾ. ಮಹೇಶ ಮುಳವಾಡ, ಡಾ: ಸತೀಶ ಹಿರೂರ ಮತ್ತಿತರು ಇದ್ದರು. ಬಿ.ಬಿ.ಈಶ್ವರಪ್ಪಗೋಳ ನಿರೂಪಿಸಿದರು, ಆರ್.ಜಿ.ಬಸಾಪೂರ ಸ್ವಾಗತಿಸಿದರು, ಶಿವಲಿಂಗ ಪಾಟೀಲ ವಂದಿಸಿದರು.